ರಕ್ಷಿತ್ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಸ್ಟೇಟ್​ಮೆಂಟ್..!?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್​ ಕಾಮ್ರೇಡ್​ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಡಿಯರ್ ಕಾಮ್ರೇಡ್ ಕನ್ನಡಕ್ಕೂ ಡಬ್​ ಆಗಿ ರಿಲೀಸ್​ ಆಗ್ತಿದ್ದು, ರಾಕಿಂಗ್​ ಸ್ಟಾರ್ ಯಶ್ ಸಾಥ್ ಸಿಕ್ಕಿದೆ.

ಗೀತಾಗೋವಿಂದಂ ನಂತ್ರ ವಿಜಯ್​ ದೇವರಕೊಂಡ , ರಶ್ಮಿಕಾ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದಾರೆ. ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಒನ್ಸ್ ಅಗೇನ್ ವಿಜಯ್- ರಶ್ಮಿಕಾ ಲಿಪ್​ ಲಾಕ್ ಸೀನ್ ಕೆಲವರ ಹುಬ್ಬೇರಿಸಿದೆ. ಕಾಲೇಜ್ ಪಾಲಿಟಿಕ್ಸ್, ಲವ್ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬರ್ತಿದ್ದು, ಸಿನಿಮಾ ಕಥೆಗಿಂತ ಚುಂಬನದ ದೃಶ್ಯದ ಬಗ್ಗೆ ಟಾಕ್ ಜೋರಾಗಿದೆ. ಸದ್ಯ ಕನ್ನಡದಲ್ಲೂ ಟ್ರೈಲರ್​ ರಿಲೀಸ್​ ಆಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

ಯೂಟ್ಯೂಬ್​​ನಲ್ಲಿ ಡಿಯರ್​ ಕಾಮ್ರೇಡ್​ ಟ್ರೈಲರ್ ಹವಾ
ಬಾಬಿ-ಲಿಲ್ಲಿ ಲವ್​ ಸ್ಟೋರಿ ನೋಡೊಕೆ ಫ್ಯಾನ್ಸ್ ವೇಯ್ಟಿಂಗ್
ಡಿಯರ್ ಕಾಮ್ರೇಡ್​ ಟ್ರೈಲರ್​ ನೋಡ್ತಿದ್ರೆ, ಇದು ಸ್ಟೂಡೆಂಟ್​ ಲೀಡರ್ ಬಾಬಿ, ಸ್ಟೇಟ್​ ಕ್ರಿಕೆಟ್ ಪ್ಲೇಯರ್ ಲಿಲ್ಲಿ ಲವ್​ ಸ್ಟೋರಿ ಅನ್ನೋದು ಗೊತ್ತಾಗುತ್ತೆ. ಬಾಲ್ಯದ ಗೆಳತಿ ಲಿಲ್ಲಿ ಪ್ರೀತಿಲಿ ಬಾಬಿ ಬೀಳ್ತಾನೆ. ಲಿಲ್ಲಿ ಸಾಧನೆಗೆ ಬಾಬಿಯೇ ತೊಡಕಾಗ್ತಾನಾ..? ಅದಕ್ಕೆ ಕಾರಣ ಏನು..? ಮುಂದೇನಾಗುತ್ತೆ ಅನ್ನೋದನ್ನ ತೆರೆಮೇಲೆ ನೋಡ್ಬೇಕು. ಇಂಟೆನ್ಸ್​​ ಸೀನ್​ಗಳಿಂದ ಟ್ರೈಲರ್​ ಗಮನ ಸೆಳೆಯುತ್ತೆ. ಮೂರು ಶೇಡ್​ಗಳಿರೋ ಪಾತ್ರದಲ್ಲಿ ವಿಜಯ್​​​ ಕಮಾಲ್ ಮಾಡಿದ್ರೆ, ಕ್ರಿಕೆಟ್​ ಪ್ಲೇಯರ್ ಅವತಾರದಲ್ಲಿ ರಶ್ಮಿಕಾ ಮೋಡಿ ಮಾಡೋ ಸುಳಿವು ಸಿಕ್ಕಿದೆ.

ಭರತ್ ಕಮ್ಮ ನಿರ್ದೇಶನದ ಡಿಯರ್​ ಕಾಮ್ರೇಡ್​​​ ಸಿನಿಮಾ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಮೂಡಿ ಬಂದಿದ್ದು, ಒನ್ಸ್ ಅಗೇನ್​​ ವಿಜಯ್​- ರಶ್ಮಿಕಾ ಜೋಡಿ ಜಾದೂ ಮಾಡೋ ಎಲ್ಲಾ ಲಕ್ಷಣಗಳು ಗೋಚರಿಸ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಿಕ್ಕಾಪಟ್ಟೆ ಗ್ರ್ಯಾಂಡಾಗಿ ಸಿನಿಮಾ ನಿರ್ಮಾಣ ಮಾಡಿದ್ದು, ಮೂರೇ ದಿನದಲ್ಲಿ ಟ್ರೈಲರ್​ 9 ಮಿಲಿಯನ್​ಗೂ ಹೆಚ್ಚು ವೀವ್ಸ್ ಸಾಧಿಸಿ, ಟ್ರೆಂಡಿಂಗ್​​ನಲ್ಲಿ ಫಸ್ಟ್ ಪ್ಲೇಸ್​​ನಲ್ಲಿದೆ.

ರೌಡಿ ಕಾಮ್ರೇಡ್ ವಿಜಯ್ ಬೆನ್ನಿಗೆ ರಾಕಿಭಾಯ್ ಯಶ್
ಹೇಗಿತ್ತು ಗೊತ್ತಾ ಅರ್ಜುನ್​ ರೆಡ್ಡಿ- ರಾಜಾಹುಲಿ ಹಂಗಾಮ..?
ಕೆಜಿಎಫ್ ಸಿನಿಮಾ ಸಕ್ಸಸ್​ ನಂತ್ರ ರಾಕಿಂಗ್​ ಸ್ಟಾರ್ ಯಶ್​ ಕ್ರೇಜ್​ ಯಾವ ರೇಂಜಿಗಿದೆ ಅನ್ನೋದನ್ನ ಬಿಡಿಸಿ ಹೇಳೋದೇ ಬೇಡ. ಡಿಯರ್​ ಕಾಮ್ರೇಡ್​​​ ಚಿತ್ರದ ಮ್ಯೂಸಿಕ್​ ಫೆಸ್ಟಿವಲ್​ಗೆ ಯಶ್​​, ಚೀಫ್​ ಗೆಸ್ಟ್​ ಆಗಿ ವೇದಿಕೆ ಏರಿದ್ರು. ದೇವರಕೊಂಡ ಭರ್ಜರಿ ಸ್ಟೆಪ್ಸ್​ ಮೂಲಕ ನೆರದಿದ್ದವರನ್ನ ರಂಜಿಸ್ತಿದ್ರು. ಆಗ್ಲೇ ವೇದಿಕೆಗೆ ರಾಕಿ ಭಾಯ್ ರಾಕಿಂಗ್ ಎಂಟ್ರಿ ಕೊಟ್ರು.

ರೌಡಿ ವಿಜಯ್​ ದೇವರಕೊಂಡ ಬೆನ್ನಿಗೆ ನಿಂತು ಯಶ್​​, ಡಿಯರ್​ ಕಾಮ್ರೇಡ್​ ಸಿನಿಮಾವನ್ನ ಗೆಲ್ಲಿಸಿ, ಅಂತ ಮನವಿ ಮಾಡಿಕೊಂಡ್ರು. ವಿಶ್ವಮಾನವರಾಗಿ ಎಲ್ಲಾ ತರಹದ ಸಿನಿಮಾಗಳನ್ನ ಗೆಲ್ಲಿಸೋಣ ಅಂದ್ರು. ಅರ್ಜುನ್​ ರೆಡ್ಡಿಗೆ ಕನ್ನಡ ಬರುತ್ತಾ ಅಂತ ಕೇಳಿದ ಯಶ್, ನಮ್ಮೂರಿಗೆ ಬಂದು ಕನ್ನಡ ಮಾತನಾಡದಿದ್ರೆ, ಬುಟ್​ಬುಡ್ತಿವಾ ಅಂದ್ರು. ಇದೇ ವೇಳೆ ದೇವರಕೊಂಡರಿಂದ ಹೇಳಿಸಿಕೊಂಡು ಅರ್ಜುನ್​ ರೆಡ್ಡಿ ಸಿನಿಮಾ ಡೈಲಾಗ್​ ಹೊಡೆದ ಯಶ್, ಆಂಧ್ರಕ್ಕೆ ಬಂದ್ರೆ ತೆಲುಗಿನಲ್ಲಿ ಮಾತನಾಡೋದಾಗಿ ಹೇಳಿದ್ರು.

ಲಿಪ್​​ಲಾಕ್​ ಅಂದ್ರೆ ಏನು ಅಂತ ಕೇಳಿದ ದೇವರಕೊಂಡ..!?
ಗೀತಗೋವಿಂದಂ ಸಿನಿಮಾಗಿಂತ ಮೊದ್ಲು ಲೀಕ್ ಆದ ಲಿಪ್​ ಲಾಕ್​ ಸೀನ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು. ಸಿನಿಮಾದಲ್ಲಿ ಆ ದೃಶ್ಯ ಇಲ್ಲದೇ ಇದ್ರು, ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ವೈರಲ್ಲಾಗಿತ್ತು. ಸಿನಿಮಾ ಸಕ್ಸಸ್​ಗೆ ಪ್ಲಸ್ ಆಗಿತ್ತು. ಡಿಯರ್​ ಕಾಮ್ರೇಡ್​​ನಲ್ಲೂ ಲಿಪ್​ಲಾಕ್​​ ದೃಶ್ಯಗಳಿದ್ದು ದೊಡ್ಡದಾಗಿ ಸದ್ದು ಮಾಡ್ತಿದೆ. ಇದ್ರ ಬಗ್ಗೆ ಕೇಳಿದ್ರೆ, ಲಿಪ್​ ಲಾಕ್​ ಅಂದ್ರೆ ಏನು..? ಆ ಪದವೇ ನನಗಿಷ್ಟವಾಗಲಿಲ್ಲ ಅಂತಾರೆ ವಿಜಯ್​ ದೇವರಕೊಂಡ.

ಲಿಪ್​​ಲಾಕ್​ ಬರೀ ಅಭಿನಯ ಅಷ್ಟೆ ಅಂದ ರಶ್ಮಿಕಾ ಮಂದಣ್ಣ
ಕೋಟಿ ರೂಪಾಯಿ ಸಂಭಾವನೆ ಬಗ್ಗೆ ಸಾನ್ವಿ ಹೇಳಿದ್ದೇನು..?
ಗೀತಾಗೋವಿಂದಂ ಸಿನಿಮಾದಲ್ಲಿ ಲಿಪ್​ಲಾಕ್​ ದೃಶ್ಯದಿಂದ್ಲೇ ರಕ್ಷಿತ್​ ಶೆಟ್ಟಿ, ರಶ್ಮಿಕಾ ನಡುವೆ ಬ್ರೇಕಪ್​ ಆಯ್ತು ಅಂತ ಸುದ್ದಿ ಹರಿದಾಡಿತ್ತು. ಡಿಯರ್​ ಕಾಮ್ರೇಡ್​ ಸಿನಿಮಾದಲ್ಲಿನ ಕಿಸ್ಸಿಂಗ್​ ಸೀನ್ಸ್​ ಬಗ್ಗೆ ರಶ್ಮಿಕಾ ಮಂದಣ್ಣ ಹೇಳೋದೇ ಬೇರೆ. ಕಿಸ್ಸಿಂಗ್​ ಸೀನ್​ ಕೂಡ ಕೋಪ, ತಾಪ. ನಗು ಅಳುವಿನಷ್ಟೆ ಒಂದು ಎಮೋಷನ್​. ಅದನ್ನ ಬೇರೆ ರೀತಿ ನೋಡೋದು ಬೇಡ ಅಂತಾರೆ.

ರಕ್ಷಿತ್ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಸ್ಟೇಟ್​ಮೆಂಟ್
ಸಿಂಪಲ್​ ಸ್ಟಾರ್ ಜೊತೆ ನಟಿಸೋಕ್ಕೆ ರೆಡಿ ಅಂದ ಸಾನ್ವಿ..!
ಇನ್ನು ರಕ್ಷಿತ್​ ಶೆಟ್ಟಿ ಜೊತೆಗಿನ ಬ್ರೇಕಪ್​ ಬಗ್ಗೆ ಎದುರಾದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಹಾರಿಕೆಯ ಉತ್ತರ ಕೊಟ್ರು. ವಿಜಯ್ ದೇವರಕೊಂಡ ಸಹ ಆಕೆಯ ಸಹಾಯಕ್ಕೆ ಬಂದ್ರು. ಗಾಸಿಪ್​ ಬಗ್ಗೆ ಏನ್​ ಅಂತೀರಾ ಅಂದ್ರೆ, ರಶ್ಮಿಕಾ ಗಾಸಿಪ್​ ಗಾಸಿಪ್ ಅಷ್ಟೆ, ಯಾರಿಗೂ ಏನ್​ ಆಯ್ತು ಅಂತ ಗೊತ್ತಿಲ್ಲವಲ್ಲ ಅಂದ್ರು. ರಕ್ಷಿತ್ ಶೆಟ್ಟಿ ಜೊತೆ ಮತ್ತೆ ನಟಿಸ್ತಿರಾ ಅಂದ್ರೆ, ನೋಡೋಣಾ, ಮಾಡೋಣಾ ಎನ್ನುವ ಮೂಲಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ನಟಿಸೋಕ್ಕೆ ರೆಡಿ ಎಂದು ಹೇಳಿದ್ದಾರೆ.

ಜುಲೈ 26ಕ್ಕೆ ತೆರೆಮೇಲೆ ಲಿಲ್ಲಿ- ಬಾಬಿ ಲವ್​ ಸ್ಟೋರಿ
ಡಿಯರ್​ ಕಾಮ್ರೇಡ್​ ಕನ್ನಡ ಟ್ರೈಲರ್​ಗೂ ಭರ್ಜರಿ ಪ್ರತಿಕ್ರಿಯೆ ಸಿಕ್ತಿದ್ದು, ಸಿನಿಮಾ ಕರ್ನಾಟಕದಲ್ಲೂ ಸದ್ದು ಮಾಡೋ ಸುಳಿವು ಸಿಕ್ತಿದೆ.. ಜುಲೈ 26ಕ್ಕೆ ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಡಿಯರ್ ಕಾಮ್ರೇಡ್​ ಸಿನಿಮಾ ತೆರೆಗಪ್ಪಳಿಸಲಿದೆ..
ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *