ಈ ವಾರ ಮಾಸ್ ಮಸಾಲ- ಕ್ಲಾಸ್ ರೊಮ್ಯಾಂಟಿಕ್ ಟಕ್ಕರ್..!

ಈ ಶುಕ್ರವಾರ ಸ್ಯಾಂಡಲ್​ವುಡ್​ ಅಂಗಳದಲ್ಲಿ ಒಂದು ಮಾಸ್​ ಮಾಸಾಲ ಸಿನಿಮಾ ಎದುರು ಒಂದು ಕ್ಲಾಸ್​ ರೊಮ್ಯಾಂಟಿಕ್ ಎಂಟ್ರಟ್ರೈನರ್ ಬರ್ತಿದೆ.

ಈ ವಾರ ತೆರೆಮೇಲೆ ಆದಿ ಲಕ್ಷ್ಮಿ ಪ್ರೇಮ್​ ಕಹಾನಿ
ಆದಿ ನಿರೂಪ್​ ಜೋಡಿಯಾಗಿ ಲಕ್ಷ್ಮೀ ರಾಧಿಕಾ
ರಂಗಿತರಂಗ ಖ್ಯಾತಿಯ ನಿರೂಪ್​ ಭಂಡಾರಿ ಮತ್ತು ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಆದಿ ಲಕ್ಷ್ಮಿ ಪುರಾಣ. ಹಾಗಂತ ಇದು ಪುರಾಣದ ಕಥೆ ಖಂಡಿತ ಅಲ್ಲ. ರಾಕ್​ ಲೈನ್​ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನ ತಮಿಳಿನ ಪ್ರಿಯಾ ನಿರ್ದೇಶಿಸಿದ್ದಾರೆ. ಛಾಯಾಗ್ರಾಹಕಿಯಾಗಿ ಪ್ರೀತ ಕೆಲಸ ಮಾಡಿದ್ದಾರೆ. ಬಹುತೇಕ ಮಹಿಳಾಮಣಿಯರೇ ಸಿನಿಮಾ ಮಾಡಿರೋ ಸಿನಿಮಾ ಆದಿ ಲಕ್ಷ್ಮಿ ಪುರಾಣ.

ಪತ್ನಿ ರಾಧಿಕಾ ಸಿನಿಮಾ ಟ್ರೈಲರ್ ಲಾಂಚ್ ಮಾಡಿದ ಯಶ್
ಮದುವೆ ನಂತ್ರ ಸ್ಯಾಂಡಲ್​ವುಡ್​ ಸಿಂಡ್ರೆಲಾ ಮೊದಲ ಚಿತ್ರ
ಇತ್ತೀಚೆಗಷ್ಟೆ ರಾಕಿಂಗ್ ಸ್ಟಾರ್ ಯಶ್​ ಆದಿ ಲಕ್ಷ್ಮೀ ಪುರಾಣ ಟ್ರೈಲರ್​ ಲಾಂಚ್​ ಮಾಡಿ ಚಿತ್ರಕ್ಕೆ ಶುಭಾಶಯ ಕೋರಿದ್ರು. ಮೊದಲಿಗೆ ಈ ಸ್ಟೋರಿ ಕೇಳಿ ಮೆಚ್ಚಿ, ಸಿನಿಮಾ ಕಾರಣರಾದವರೇ ಯಶ್. ಪತ್ನಿ ನಟನೆಗೆ ಮೊದಲಿನಿಂದಲೂ ಅಭಿಮಾನಿಯಾಗಿರೋ ಯಶ್​, ಆದಿ ಲಕ್ಷ್ಮೀ ಪುರಾಣ ಚಿತ್ರಕ್ಕೆ ಆಲ್​ ಬೆಸ್ಟ್ ಅಂದ್ರು. ಮುಂದೆ ಕೂಡ ರಾಧಿಕಾ ನಟಿಸ್ತಾರೆ ಅನ್ನೋ ಭರವಸೆ ಕೊಟ್ರು.

‘ದಿ ಕಿಕ್ ಆಫ್​ ಲವ್​ ಅಂಡ್ ಲೈಸ್’ ಅನ್ನೋ ಟ್ಯಾಗ್​ಲೈನ್​ ಇರೋ ಆದಿ ಲಕ್ಷ್ಮೀ ಸಿನಿಮಾದಲ್ಲಿ ರಾಧಿಕಾ ಬಹಳ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ ಪೊಲೀಸ್​ ಆಫಿಸರ್​ ಪಾತ್ರದಲ್ಲಿ ಮಿಂಚಿದ್ದು, ರಾಧಿಕಾ ಪಾತ್ರ ಸಿನಿಮಾದ ಹೈಲೆಟ್​ ಅನ್ನಲಾಗ್ತಿದೆ. ಇನ್ನು ರಾಜರಥ ನಂತ್ರ ಆದಿ ಲಕ್ಷ್ಮಿ ಪುರಾಣದಲ್ಲಿ ನಿರೂಪ್ ಪ್ರೇಕ್ಷಕರನ್ನ ರಂಜಿಸೋ ಉತ್ಸಾಹದಲ್ಲಿದ್ದಾರೆ.

ಆದಿ & ಲಕ್ಷ್ಮೀ ಲವ್ ಮಧ್ಯೆ ಸಿಂಗ ಚಿರು ಮಾಸ್ ಎಂಟ್ರಿ..!
ಶ್ಯಾನೆ ಟಾಪಾಗೈತೆ ಚಿರು- ಅದಿತಿ ಮಾಸ್ ಲವ್ ಸ್ಟೋರಿ
ಆದಿ ಲಕ್ಷ್ಮೀ ಪುರಾಣ ಸಿನಿಮಾ ಎದುರು ಈ ವಾರ ಚಿರಂಜೀವಿ ಸರ್ಜಾ ನಟನೆಯ ಸಿಂಗ ಸಿನಿಮಾ ರಿಲೀಸ್ ಆಗ್ತಿದೆ. ವಿಜಯ್​ ಕಿರಣ್​ ನಿರ್ದೇಶನದ ಈ ಮಾಸ್​​ ಎಂಟ್ರಟ್ರೈನರ್​ನಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸಿಂಗ ಸಿನಿಮಾ ಟೀಸರ್​, ಟ್ರೈಲರ್​ ಮತ್ತು ಸಾಂಗ್ಸ್ ಸೂಪರ್ ಹಿಟ್ ಆಗಿದೆ. ಅದ್ರಲ್ಲೂ ಶ್ಯಾನೆ ಟಾಪಾಗವ್ಳೆ ಸಾಂಗ್​​ ಸಿಕ್ಕಾಪಟ್ಟೆ ವೈರಲ್ಲಾಗಿದೆ.

ಉದಯ್​ ಕೆ ಮೆಹ್ತಾ ನಿರ್ಮಾಣದ ಈ ಆ್ಯಕ್ಷನ್​ ಎಂಟ್ರಟ್ರೈನರ್​​ನಲ್ಲಿ ಆರ್ಮುಗ ರವಿಶಂಕರ್, ಶಿವರಾಜ್​ ಕೆ. ಆರ್​ ಪೇಟೆ, ತಾರಾ ಅಭಿನಯಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌​​ನಲ್ಲಿ ಸಾಗೋ ಕಥೆಯಲ್ಲಿ ಮಾಸ್​ ಪ್ರೇಕ್ಷಕರಿಗೆ ಇಷ್ಟವಾಗೋ ಎಲ್ಲಾ ಅಂಶಗಳು ಇವೆ. ಧರ್ಮ ವಿಶ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

ಒಂದ್ಕಡೆ ರೊಮ್ಯಾಂಟಿಕ್ ಸಿನಿಮಾ ಆದಿ ಲಕ್ಷ್ಮೀ ಪುರಾಣ ಮತ್ತೊಂದ್ಕಡೆ ಮಾಸ್​ ಎಂಟ್ರಟ್ರೈನರ್ ಸಿಂಗ. ಎರಡೂ ಸಿನಿಮಾಗಳು ಇದೇ ಶುಕ್ರವಾರ ಪ್ರೇಕ್ಷಕರ ಮುಂದೆ ಬರ್ತಿದ್ದು, ಸಿನಿವಾರ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಕಾದಿದೆ.
ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *