ಅತೃಪ್ತ ಶಾಸಕರ ರಾಜೀನಾಮೆ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದ ಯುವಕ ಆ ಪತ್ರದಲ್ಲಿ ಏನಿದೆ ಗೊತ್ತಾ..?

ರಾಯಚೂರು: ಅತೃಪ್ತ ಶಾಸಕರ ರಾಜೀನಾಮೆ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮತದಾರನಿಂದ ಪತ್ರ ಬರೆಯುವ ಮೂಲಕ ಶಾಸಕರ ರಾಜೀನಾಮೆ ಕುರಿತು ಸಂವಿಧಾನ ತಿದ್ದುಪಡಿ ಮಾಡುವಂತೆ ಮನವಿ ಮಾಡಲಾಗಿದೆ.

ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ರವಿಗೌಡ ಎನ್ನುವ ಮತದಾರನಿಂದ ಪತ್ರ ಬರೆಯಲಾಗಿದೆ. ರಾಜಕೀಯ ಡ್ರಾಮಕ್ಕೆ ಅತೃಪ್ತ ಶಾಸಕರ ಬಗ್ಗೆ ವಿರುದ್ಧ ಕಿಡಿ ಕಾರಿದ ಯುವಕ ಪತ್ರದ ಮೂಲಕ ಆಕ್ರೋಶ ಹೊರಹಾಕಿದ್ದಾನೆ.

ಕ್ರೇತ್ರದ ಅಭಿವೃದ್ದಿ ಮರೆತು ಶಾಸಕರು ರಾಜ್ಯದ ಮರ್ಯಾದೆ ಕಳೆದಿದ್ದಾರೆ.  ಮರು ಚುನಾವಣೆ ಮಾಡಿ ಜನರ ತೆರಿಗೆ ಹಣ ಪೊಲು ಮಾಡಬರದು. ಆಯಾ ಶಾಸಕರ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಮತಗಳಿಸಿದ್ದ ಅಭ್ಯರ್ಥಿಗಳನ್ನು ಶಾಸಕರನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದಾರೆ ಚುನಾವಣೆ ವೆಚ್ಚ ರಾಜೀನಾಮೆ ನೀಡಿರುವ ಶಾಸಕರೇ ಭರಿಸಬೇಕು.  ಈ ರೀತಿ ಮಾಡಿದರೆ ಯಾವ ಶಾಸಕರು ರಾಜೀನಾಮೆ ನೀಡಲ್ಲ, ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ ವಿಧಾನಸೌದದ ಮರ್ಯಾದೆ ಕಳೆದ ಶಾಸಕರಿಗೆ ಭಾರಿ ಪ್ರಮಾಣದ ದಂಡ ವಿಧಿಸಬೇಕು. ಹೀಗೆ ವಿವಿಧ ರೀತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡುವಂತೆ ಜನಪ್ರತಿನಿಧಿಗಳಿಗೆ ಪಾಠ ಕಲಿಸಬೇಕು ಎಂದು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *