ಅತೃಪ್ತರ ಸಂಧಾನ ಸಕ್ಸಸ್- ಹಳೆಯ ಕೆಟ್ಟಗಳಿಗೆಯನ್ನು ಮರೆಯುತ್ತೇವೆ, ಒಗ್ಗಟ್ಟಿನಿಂದ ಇರ್ತೀವಿ -ಡಿಕೆಶಿ

ಬೆಂಗಳೂರು:  ಕಾಂಗ್ರೆಸ್ ನಲ್ಲೇ ಉಳಿಯುವಂತಹ ಪ್ರಯತ್ನ ಮಾಡುತ್ತೇನೆ, ಅಸಮಾಧಾನ ಇಲ್ಲದೇ ಇರೋ ರಾಜಕೀಯ ಪಕ್ಷಗಳು ಇಲ್ಲ ಎಂದು ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲೇ ಸೇವೆಸಲ್ಲಿಸಿದ್ದೇನೆ

ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಅವರು, ಸುಧಾಕರ್ ಜೊತೆ ಮಾತನಾಡಿ ಮನವೊಲಿಸೋ ಕೆಲಸವನ್ನು ಮಾಡುತ್ತೇನೆ. ಹಲವು ಕಾಂಗ್ರೆಸ್ ಮುಖಂಡರು ಮನವೊಲಿಸಲು ಮುಂದಾಗಿದ್ದರು. 40 ವರ್ಷದಿಂದ ಕಾಂಗ್ರೆಸ್ ನಲ್ಲೇ ಸೇವೆ ಸಲ್ಲಿಸಿದ್ದೇನೆ ಅದೇ ರೀತಿ ಮುಂದಿನ ದಿನಗಳಲ್ಲಿ ಮುಂದುವರಿಯಲು ಇಚ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಸರ್ಕಾರದ ಬಗ್ಗೆ ಅಸಮಾಧಾನ ಇದ್ದ ಕಾರಣದಿಂದಲೇ ನಾನು ರಾಜೀನಾಮೆ ಕೊಟ್ಟೆ. ಯಾವ ಪಕ್ಷದಲ್ಲಿ ತಾನೆ ಅಸಮಾಧಾನ ಇಲ್ಲ ಹೇಳಿ? ಎಲ್ಲರೂ ಜೊತೆಗೂಡಿ ಹೋಗಬೇಕು ಅಂತ ಅಂದುಕೊಂಡಿದ್ದೇವೆ. ಮುಂದೇನಾಗುತ್ತೋ ನೋಡಬೇಕು. ನನ್ನ ಕೈಲಾಗುವ ಪ್ರಯತ್ನ ನಾನು ಮಾಡ್ತೀನಿ ಎಂದರು.

ಮೂರ್ನಾಲ್ಕು ಗಂಟೆಗಳ ಕಾಲ ಮನವೊಲಿಕೆ

ನಂತರ ಇದೇ ವೇಳೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ ಅವರು,  ನಾನು ಆರು ಗಂಟೆಗೆ ಎಂಟಿಬಿ ನಾಗರಾಜ್ ಮನೆಗೆ ಬಂದಿದ್ದೇವೆ. ಡಿ ಕೆ ಶಿವಕುಮಾರ್ ,ಕೃಷ್ಣಭೈರೇಗೌಡ, ರಿಜ್ವಾನ್ ಕೂಡ ಬಂದು ಮನವೊಲಿಸೋಕೆ ಬಂದಿದ್ದರು. 40 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಮೂರ್ನಾಲ್ಕು ಗಂಟೆಗಳ ಕಾಲ ಮನವೊಲಿಸಲು ಮುಂದಾಗಿದ್ದು. ಇದೀಗ ಕಾಂಗ್ರೆಸ್ ನಲ್ಲೇ ಉಳಿಯಲು ಎಂಟಿಬಿ ನಿರ್ಧಾರಿಸಿದ್ದಾರೆ. ನಮ್ಮ ನಡುವಿನ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆವೆ ಎಂದು ಹೇಳಿದರು.

ಒಗ್ಗಟ್ಟಿನಿಂದ ಮುನ್ನಡೆಯುವ ತೀರ್ಮಾನ

ಎಂಟಿಬಿ ನಾಗರಾಜ್ ಜೊತೆಗೆ ಸುದೀರ್ಘ ಮಾತುಕತೆಯ ನಂತರ ಸಂತೃಪ್ತ ಭಾವದಲ್ಲಿ ಮಾಧ್ಯಮಗಳ ಎದುರು ಬಂದು ನಿಂತ ಸಚಿವ ಡಿ.ಕೆ.ಶಿವಕುಮಾರ್, ಸತತ 40 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಎಂಟಿಬಿ ನಾಗರಾಜ್ ತುಂಬಾ ಕಷ್ಟದ ಸಂದರ್ಭಗಳಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಕಾಪಾಡಿದ್ದಾರೆ. ನಾವು ಸದಾ ಜೊತೆಗಿರೋಣ, ಜೊತೆಗೆ ಸಾಯೋಣ. ಹಳೆಯದನ್ನು ಮರೆತು ಒಗ್ಗಟ್ಟಿನಿಂದ ಮುನ್ನಡೆಯುವ ತೀರ್ಮಾನ ಮಾಡಿದ್ದೇವೆ’ ಎಂದು ಹೇಳಿದರು.

 

Recommended For You

About the Author: TV5 Kannada

Leave a Reply

Your email address will not be published. Required fields are marked *