ಬೆಂಗಳೂರು: ಯಾರೋ ಶಾಸಕರು ರೆಸಾರ್ಟ್ಗೆ ಹೋದ್ರೆ ನಾನೇನ್ ಮಾತಾಡ್ಲಿ, ಜನ ಬಾಯಿಗೆ ಬಂದ್ಹಂಗೆ ಬೈಯ್ತಾರೆ ಎಂದು ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರು ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ತಂದೆ ಯಾವುದೇ ಹುದ್ದೆಗಾಗಿ ರಾಜಿನಾಮೆ ನೀಡಿಲ್ಲ, ಸೋ ಕಾಲ್ಡ್ ಕೆಲ ನಾಯಕರಿಂದ ಇದು ಆಗಿರೋದು. ಕಾಂಗ್ರೆಸ್ ಪಕ್ಷದ ರೆಸಾರ್ಟ್ ರಾಜಕಾರಣದ ಬಗ್ಗೆ ನಾನು ಮಾತಾಡಲ್ಲ ಎಂದು ಶಾಸಕಿ ಸೌಮ್ಯ ರೆಡ್ಡಿ ಅವರು ಗರಂ ಆದರು.
ಇನ್ನು ತಂದೆಯವರು ರಾಜೀನಾಮೆ ಕೊಡೋ ಕಾರಣ ಬೇರೆ, ಕಾಂಗ್ರೆಸ್ ಬಿಟ್ಟೋಗ್ತಾರೆ ಅಂತ ಯಾರ್ ಹೇಳಿದ್ದು(?) ರಾಜೀನಾಮೆ ನೀಡಿದ ಕಾರಣ ಗೊತ್ತಾ ನಿಮಗೆ(?) ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸದ್ಯ ಒಂದು ವರ್ಷದಿಂದ ಹೇಳ್ತಿದಾರೆ ಅವರು, 45 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಸೂ ಕಾಲ್ಡ್ ಸ್ಟೇಟ್ ಲೀಡರ್ ಮೂಲೆಗುಂಪು ಮಾಡಿದ್ದಾರೆ ಅದಕ್ಕೆ ಬೇಸರವಾಗಿ ರಾಜೀನಾಮೆ ಕೊಟ್ಟಿರೋದು ಎಂದು ಶಾಸಕಿ ಸೌಮ್ಯ ರೌಡಿ ಅವರು ನುಡಿದರು.