ರಾಜೀನಾಮೆ ಹಿಂಪಡೆಯಲು ಕಂಡಿಶನ್ ಹಾಕಿದ ಎಂ.ಟಿ.ಬಿ ನಾಗರಾಜ್

ಬೆಂಗಳೂರು: ಶಾಸಕ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ಹಿಂಪಡೆಯಲು ಮೈತ್ರಿ ನಾಯಕರು ಮಾಡಿದ್ದ ಪ್ರಯತ್ನವಂತೂ ಸಕ್ಸಸ್ ಆಗಿದೆ. ಆದ್ರೆ ರಾಜೀನಾಮೆ ನೀಡಲು ಎಂ.ಟಿ.ಬಿ.ನಾಗರಾಜ್, ಕೆಲ ಕಂಡಿಶನ್ ಹಾಕಿದ್ದಾರೆ.

ರಾಜೀನಾಮೆ ಹಿಂದೆ ಪಡೆಯುತ್ತೆನೆ ಆದರೆ ನನ್ನ ಹಲವು ಕಂಡಿಶನ್‌ಗಳಿವೆ ಅದಕ್ಕೆ ಒಪ್ಪಬೇಕು ಎಂದು ಎಂ.ಟಿ.ಬಿ ಹೇಳಿದ್ದು, ಕೆಲ ಶರತ್ತು ಹಾಕಿದ್ದಾರೆ.

೧) ನಾನು ರಾಜೀನಾಮೆ ಹಿಂದಕ್ಕೆ ಪಡೆಯುತ್ತೇನೆ. ಸುಧಾಕರ್ ಅವರನ್ನು ಒಪ್ಪಿಸಿ .

೨ ) ನನಗೆ ನೀಡಿದ ಇಲಾಖೆಯಲ್ಲಿ ನಿಮ್ಮ ಆಪ್ತ ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ ಇದನ್ನು ತಡೆಯಿರಿ.

೩) ಜೊತೆಗೆ ನನಗೆ ನೀಡಿದ ಇಲಾಖೆಯಲ್ಲಿ ಇದುವರೆಗೂ ನಾನು ಒಂದ್ ಟ್ರಾನ್ಸಫರ್ ಮಾಡಿಸಿಕೊಳ್ಳಲು ಆಗಿಲ್ಲ.

೪) ನನಗೆ ಈ ಹಿಂದೆ ನೀಡಿದ ಇಲಾಖೆಯನ್ನೇ ಮತ್ತೆ ನನಗೆ ನೀಡಬೇಕು.

೫) ನನ್ನ ಇಲಾಖೆಯಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡಬಾರು.

೬ ) ನನ್ನ ಕ್ಷೇತ್ರಕ್ಕೆ ಅನುದಾನಗಳು ಸಿಗುತ್ತಿಲ್ಲ, ಅನುದಾನಗಳನ್ನು ಬಿಡುಗಡೆ ಮಾಡಿಸಬೇಕು . ಇವೆಲ್ಲದ್ದಕ್ಕೂ ಒಪ್ಪಿದರೆ ನಾನು ರಾಜೀನಾಮೆ ಹಿಂದೆ ಪಡೆಯುತ್ತೇನೆ ಎಂದು ಎಂ.ಟಿ.ಬಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಆಯ್ತು ಸಿಎಂ ಕುಮಾರಸ್ವಾಮಿ ಮತ್ತು ರೇವಣ್ಣನಿಗೆ ನಾನು ಹೇಳ್ತಿನಿ ಬಿಡಪ್ಪ ಎಂದು ಹೇಳಿದ್ದಾರೆ. ರೇವಣ್ಣನ ಮೇಲೆ ವಿಪರೀತ ಕಂಪ್ಲೆಂಟ್ ಬರ್ತಿವೆ. ರೇವಣ್ಣನನ್ನು ಕರೆದು ನಾನು ಬುದ್ದಿ ಹೇಳುತ್ತೇನೆ ಬಿಡು ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *