‘ಸಮ್ಮಿಶ್ರ ಸರ್ಕಾರಕ್ಕೆ ಕುಮಾರಸ್ವಾಮಿ ಹೇಳಿ ಮಾಡಿಸಿದಂತ ಸಿಎಂ’

ಚಿಕ್ಕಬಳ್ಳಾಪುರ: ಜೆಡಿಎಸ್ ಶಾಸಕರು ವಾಸ್ಯವ್ಯ ಹೂಡಿರುವ ಗಾಲ್ಫ್ ರೆಸಾರ್ಟ್‌ ಬಳಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಅನ್ನದಾನಿ, ನಾವೆಲ್ಲ ಬ್ಯುಸಿನೆಸ್ ಮ್ಯಾನ್‌ಗಳು, ಹಾಗಾಗಿ ರೆಸಾರ್ಟ್ ವಾಸ್ತವ್ಯಕ್ಕೆ ಜನರ ಹಣ ಬಳಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ರೆಸಾರ್ಟ್ ರಾಜಕಾರಣ ಮಾಡುವಾಗ ಪ್ರತಿಭಟನೆ ಸಹಜ. ಶಾಸಕರು ಇದ್ದಾರೆ. ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುತ್ತಾರೆ. ಎರಡು ಮೂರು ದಿನ ರೆಸಾರ್ಟ್ ರಾಜಕಾರಣ ಮುಗಿಯುತ್ತೆ. ಸಾರ್ವಜನಿಕರು ಸಹಕರಿಸಬೇಕು. ಅವರು ನಮಗೆ ಮತ ಹಾಕಿರುತ್ತಾರೆ. ಅದ್ರಿಂದ ಸಾರ್ವಜನಿಕರು ಪ್ರತಿಭಟನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಅವರು ರೆಸಾರ್ಟ್‌ನಲ್ಲಿ ಇರುವುದಕ್ಕೆ ಸರ್ಕಾರಿ ಹಣ ಬಳಸುತ್ತಿಲ್ಲ. ಎಲ್ಲ ಶಾಸಕರು ಒಂದೊಂದು ಬ್ಯುಸಿನೆಸ್ ಮಾಡುತ್ತಾರೆ. ಅದರ ದುಡ್ಡಿನಿಂದ ರೆಸಾರ್ಟ್‌ನಲ್ಲಿ ಇದ್ದೇವೆ. ನಾನು ಪೆಟ್ರೋಲ್ ಬಂಕ್ ನಡೆಸುತ್ತಿದ್ದೇನೆ, ಒಬ್ಬರು ತೆಂಗಿನಕಾಯಿ ಮಾರುತ್ತಾರೆ, ಮತ್ತೊಬ್ಬರು ರಿಯಲ್ ಎಸ್ಟೇಟ್ ಮಾಡುತ್ತಾರೆ. ಎಲ್ಲರೂ ಬ್ಯುಸಿನೆಸ್ ಮ್ಯಾನ್‌ಗಳು ಅದ್ರಿಂದ ಜನರ ದುಡ್ಡು ಬಳಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಇನ್ನು 5 ವರ್ಷ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ಅತೃಪ್ತರು ಹೊರ ದೇಶಕ್ಕೆ ಹಾರಿ ಹೋಗಿಲ್ಲ. ಎಲ್ಲಾ ಅತೃಪ್ತರು ಮತ್ತೆ ವಾಪಸ್ಸು ಬಂದೆ ಬರುತ್ತಾರೆ. ಸರ್ಕಾರದಲ್ಲಿ ಸಣ್ಣಪುಟ್ಟ ಬೇಸರ ಇದ್ದೆ ಇರುತ್ತೆ. ಹಾಗಂತ ಸಿಎಂ ವಿರುದ್ಧ ಹೇಳೋದು ತಪ್ಪು. ಸಮ್ಮಿಶ್ರ ಸರ್ಕಾರಕ್ಕೆ ಕುಮಾರಸ್ವಾಮಿ ಹೇಳಿ ಮಾಡಿಸಿದಂತ ಸಿಎಂ ಎಂದು ಮುಖ್ಯಮಂತ್ರಿಗಳನ್ನ ಅನ್ನದಾನಿ ಹಾಡಿ ಹೊಗಳಿದ್ದಾರೆ.

ಕುಮಾರಸ್ವಾಮಿಗೋಸ್ಕರ ನಾವು ಸ್ವಂತ ಖರ್ಚಿನಲ್ಲೇ ರೆಸಾರ್ಟ್‌ನಲ್ಲಿದೇವೆ. ವಿಶ್ವಾಸಮತ ಯಶಸ್ವಿಯಾಗಿ ಸರ್ಕಾರ ಮುಂದುವರೆಯುತ್ತೆ. ವರ್ಗಾವಣೆ ವಿಚಾರದಲ್ಲಿ ರೇವಣ್ಣ ಮೇಲೆ ದೂಷಿಸೋದು ತಪ್ಪು. ಸಿದ್ದರಾಮಯ್ಯನವರು ಸರ್ಕಾರ ರಕ್ಷಣೆ ಮಾಡ್ತಾರೆ. ಸಿದ್ದರಾಮಣ್ಣ ಕುತಂತ್ರಿ ಅಲ್ಲ, ನೇರ ರಾಜಕಾರಣಿ ಎಂದು ಹೇಳಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *