ನಾನು ರಾಜೀನಾಮೆ ಕೊಡೋದೆ ಇಲ್ಲ- ವಿ ಮುನಿಯಪ್ಪ

ಬೆಂಗಳೂರು: ಸ್ನೇಹಿತರನ್ನು ಮಾತಾಡಿಸೋಕೆ ನಾನು ತಾಜ್ ಹೋಟೆಲ್​​ಗೆ ಬಂದಿದ್ದೆ ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ. ಮುನಿಯಪ್ಪ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರನ್ನೂ ಮಾತಾಡಿಸೋಕೆ ಆಗಲಿಲ್ಲ, ಸುಮ್ನೆ ಭೇಟಿ ಕೊಟ್ಟಿದ್ದೆ. ಒತ್ತಡದಿಂದ ಯಾರೂ ಕೂಡ ಹೋಟೆಲ್​​ಗೆ ಬಂದಿಲ್ಲ ಎಂದು ಅವರು ತಿಳಿಸಿದರು.

ಇನ್ನು ಶಾಸಕರೆಲ್ಲರೂ ವಿಶ್ರಾಂತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏನಾಗುತ್ತಿದೆ ಅಂತ ಎಲ್ಲರಿಗೂ ಗೊತ್ತಿದೆ ಇಟ್ ಈಸ್ ಎ ಓಪನ್ ಸೀಕ್ರೆಟ್ ಮುಂಬೈನಲ್ಲಿರುವ ಪೈಕಿ ಕೆಲವರು ವಾಪಸ್ ಬರಬಹುದು ಎಂದು ಅವರು ಹೇಳಿದರು.

ಸದ್ಯ ನಾನು 6 ಬಾರಿ ಶಾಸಕನಾಗಿದ್ದೇನೆ. ಪಕ್ಷದಿಂದ ನನಗೆ ಮೋಸವಾಗಿಲ್ಲ, ನಾನು ರಾಜೀನಾಮೆ ಕೊಡೋದೇ ಇಲ್ಲ, ಏನಾದರೂ ಕೂಡ ನಾನು ಇದೇ ಪಕ್ಷದಲ್ಲಿ ಇರುತ್ತೇನೆ ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ. ಮುನಿಯಪ್ಪ ಅವರು ಮಾತನಾಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *