ಶಾಸಕರು ರೆಸಾರ್ಟ್​ನಲ್ಲಿ ಇರೋದಕ್ಕೆ ಸ್ಪಷ್ಟನೆ ಕೊಟ್ಟ ದಿನೇಶ್ ಗುಂಡೂರಾವ್​

ಬೆಂಗಳೂರು: 3 ಪಕ್ಷಗಳ ರೆಸಾರ್ಟ್ ವಾಸ್ತವ್ಯ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​, ರೆಸಾರ್ಟ್​ನಲ್ಲಿ ಇರಬೇಕು ಅಂತಾ ನಮಗೆ ಏನಿಲ್ಲ, ಬಿಜೆಪಿಯವರು ಸೆಳೆಯುವಂತಹ ಪ್ರಯತ್ನ ಮಾಡ್ತಾನೆ ಇದ್ದಾರೆ ಹಾಗಾಗಿ ನಮ್ಮ ಶಾಸಕರು ಒಂದೆ ಕಡೆ ಇರಲಿ ಎಂದು ರೆಸಾರ್ಟ್​​​ನಲ್ಲಿ ಇದ್ದೇವೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಎಂಟಿವಿ ಮತ್ತು ಸುಧಾಕರ್​ ಅವರು ಈಗ ಸಿದ್ದರಾಮಯ್ಯ ಸಾಹೇಬ್ರನ್ನಾ ಭೇಟಿ ಮಾಡ್ತಾರೆ. ವಿಶ್ವಾಸಮತ ನಾವು ಸಾಬೀತು ಪಡಿಸುತ್ತೇವೆ. ಬಿಜೆಪಿ ಅವರಿಗೆ ಅವಿಶ್ವಾಸಮತ ಮಂಡಿಸೋದಕ್ಕೆ ಸಾಧ್ಯವಾಗಿಲ್ಲ, ನಾವು ವಿಶ್ವಾಸ ಮತ ಸಾಬೀತು ಪಡಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಎಂಟಿವಿ ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಊಹಾಪೊಹ ಅಷ್ಟೇ. ನಾವು ವಿಶ್ವಾಸಮತ ಸಾಬೀತುಪಡಿಸುತ್ತೇವೆ. ಸ್ಪೀಕರ್​ ರಮೇಶ್ ಕುಮಾರ್ ಸೋಮವಾರ ದಿನಾಂಕ ನಿಗದಿಪಡಿಸಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಮಾತು ಮುಗಿಸಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *