ಅತೃಪ್ತರ ಜೊತೆ ಸಿಎಂ ಕುಮಾರಸ್ವಾಮಿ ಸಂಪರ್ಕ ..?

ಬಹುಮತ ಸಾಬೀತು ವೇಳೆಗೆ ಅತೃಪ್ತರ ಕರೆತರಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ರಾಮಲಿಂಗಾರೆಡ್ಡಿ, ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಮುನಿರತ್ನ ಕರೆತರಲು ತಯಾರಿ ನಡೆಸಿದ್ದಾರೆ.

ಈಗಾಗಲೇ ಅತೃಪ್ತರು ಮತ್ತು ಸಿಎಂ ನಡುವೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. ಇದರಿಂದ ಮುಂಬೈನಲ್ಲಿರುವ ಶಾಸಕರು ಮತ್ತೆ ದೋಸ್ತಿ ಕಡೆ ವಾಲುವ ಸಾಧ್ಯತೆ ಇದ್ಯಾ..? ಎಂಬ ಪ್ರಶ್ನೆ ಮೂಡಿದೆ. ರಿವರ್ಸ್‌ ಆಪರೇಷನ್‌ಗೂ ದೋಸ್ತಿಗಳ ಕೈ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯಲ್ಲೂ ಇವೆ ‘ಬ್ಲಾಕ್‌ಶೀಪ್‌’..?

ಅತ್ತ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತರಲ್ಲೇ ಒಗ್ಗಟ್ಟಿಲ್ಲ. ಸಿದ್ದರಾಮಯ್ಯ ಆಪ್ತ ಎಂಟಿಬಿ ನಾಗರಾಜ್‌ ದ್ವಂದ್ವ ನಿಲುವಿನಲ್ಲಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂದರೆ ಅವರು ವಾಪಸ್‌ ಬರ್ತಾರೆ ಅಂತ ಹೇಳಲಾಗ್ತಿದೆ. ಹೀಗಾಗಿ, ಅತೃಪ್ತರು ಮತ್ತೆ ನಿಷ್ಠೆ ಬದಲಿಸಿ ದೋಸ್ತಿ ಸರ್ಕಾರ ಸೇರ್ತಾರಾ ಎಂಬು ತೀವ್ರ ಕುತೂಹಲ ಮೂಡಿಸಿದೆ. ವಿಶ್ವಾಸಮತಯಾಚನೆ ದಿನ ಎಲ್ಲ ಕುತೂಹಲ ಮತ್ತು ವಾರದಿಂದ ನಡೆಯುತ್ತಿರುವ ರಾಜಕೀಯ ನಾಟಕಗಳಿಗೆ ತೆರೆ ಬೀಳಲಿದೆ.

ಅತೃಪ್ತರ ಕರೆತರಲು ದೋಸ್ತಿಗಳ ತಂತ್ರ

ಬಹುಮತ ಸಾಬೀತುವರೆಗೆ ಎಲ್ಲಾ ಶಾಸಕರನ್ನೂ ಒಟ್ಟಾಗಿರಿಸಲು ದೋಸ್ತಿಗಳು ಮುಂದಾಗಿದ್ದಾರೆ. ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಜೆಡಿಎಸ್‌ ಶಾಸಕರು ಹೋದರೆ, ಬೆಂಗಳೂರಿನ ಹೋಟೆಲ್‌ನಲ್ಲೇ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬಿಜೆಪಿಯಲ್ಲೂ ಬ್ಲಾಕ್‌ಶೀಪ್‌ಗಳಿವೆ ಅಂತ ಸಿದ್ದರಾಮಯ್ಯ ಹೇಳಿರೋದು ರಿವರ್ಸ್ ಆಪರೇಷನ್‌ ಸುಳಿವು ನೀಡ್ತಿದೆ. ಅತೃಪ್ತರ ಕರೆತರುವ ಕಸರತ್ತೂ ಜೋರಾಗಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *