‘ದೋಸ್ತಿಗಳು ಏನೇ ಮಾಡಿದ್ರು ಅದು ಬರೀ ಸರ್ಕಸ್ ಆಗತ್ತೆ ಸಕ್ಸಸ್ ಆಗಲ್ಲ’

ಬೆಂಗಳೂರು: ರಮಡ ಹೊಟೇಲ್ ಬಳಿ ಬಿಜೆಪಿ ಶಾಸಕ ಸಿಟಿ ರವಿ ಮಾತನಾಡಿದ್ದು, ದೋಸ್ತಿಗಳ ಹತ್ತಿರ ಮ್ಯಾಜಿಕ್ ನಂಬರ್ ಇದ್ರೆ ಬುಧವಾರದವರೆಗೂ ಯಾಕ್ ಕಾಯ್ಬೆಕು..? ಇದ್ದವರು ತೋರಿಸಿಕೊಳ್ಳಲ್ಲ, ಅವರು ತೋರಿಸಿಕೊಳ್ಳೊದನ್ನ ನೋಡ್ತಿದ್ರೆ ಅವರತ್ರ ಮ್ಯಾಜಿಕ್ ನಂಬರ್ ಇಲ್ಲ . ದೋಸ್ತಿಗಳು ಏನೇ ಮಾಡಿದ್ರು ಅದು ಬರೀ ಸರ್ಕಸ್ ಆಗತ್ತೆ ಸಕ್ಸಸ್ ಆಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಎಂಟಿಬಿ ಹೇಳಿಕೆ ಗಮನಿಸಿದ್ದೇನೆ ಅವರು ಎಲ್ಲೂ ಕಾಂಗ್ರೆಸ್ ಜೊತೆ ಇರುತ್ತೆನೆಂದು ಹೇಳಿಲ್ಲ. ಅವರು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿರೋದು ಗೊತ್ತು. ಎಂಟಿಬಿಯವರನ್ನ ಕರೆತಂದಿದ್ದೆ ಸಾಧನೆ ಅಂತ ಭಾವಿಸಿದ್ದಾರೆ. ದೋಸ್ತಿಗಳು ಕೇವಲ ರೂಮರ್ಸ್ ಹಬ್ಬಿಸಲು ಶುರು ಮಾಡಿದ್ರು. ಹಾಗಾಗಿ ಶಾಸಕರೆಲ್ಲ ಒಟ್ಟಿಗೆ ಇರಲಿಕ್ಕೆ ಮುಂದಾದ್ವಿ ಎಂದಿದ್ದಾರೆ.

ಪ್ರತಿನಿತ್ಯ ಕಾಂಗ್ರೆಸ್ ಜೆಡಿಎಸ್ ಜಗಳವಾಡ್ತಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಯಾರು ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಈ ಹಿಂದೆ ಸ್ವಾಮೀಜಿಗಳೊಬ್ಬರು ಹೇಳಿದ್ರು ಟಗರು ಸುಮ್ಮನಿದೆ ಗುದ್ದೋಕೆ ಶುರುಮಾಡಿದ್ರೆ ಗೊತ್ತಾಗತ್ತೆ ಅಂತಾ ಅಲ್ಲಿಂದ ಶುರುವಾಯ್ತು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ನಡಿತಿರೋದು ದೋಸ್ತಿ ಸರ್ಕಾರ ಅಲ್ಲ ದುಷ್ಮನ್ ಸರ್ಕಾರ. ನಿದ್ರೆ ಮಾಡೊರನ್ನ ಎಬ್ಬಿಸಬಹುದು, ನಿದ್ರೆ ಮಾಡುವಂತೆ ನಟಿಸೋರನ್ನ ಎಬ್ಬಿಸಲಿಕ್ಕಾಗಲ್ಲ. ಎಟಿಎಂ ರನ್ ಮಾಡಲಿಕ್ಕೊಸ್ಕರ ಮಾತ್ರ ಸರ್ಕಾರ ನಡೀತಿದೆ. ಈ ಅನಿಶ್ಚಿತತೆಗೆ ಸಭಾಧ್ಯಕ್ಷರು ಕಾರಣ. ನಿರ್ಣಯವನ್ನು ಆದಷ್ಟು ಬೇಗನೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

14 ತಿಂಗಳ ಹಿಂದೆ ಲೋಕಸಭಾ ಚುನಾವಣೆಗೂ ಮುನ್ನಾ ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳಿಗೆ ಅವಕಾಶವಿತ್ತು ಆದ್ರೆ ಈಗ 16 ಜನ ರಾಜೀನಾಮೆ ಕೊಟ್ಟಿದ್ದಾರೆ ದೋಸ್ತಿ ಸರ್ಕಾರ ಉಳಿಯಲ್ಲ ಎಂದು ಹೇಳಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *