ಬಿಎಸ್​ವೈ ಲೆಕ್ಕದಲ್ಲಿದೆ ಸರ್ಕಾರಕ್ಕೆ ಆಪತ್ತು ಹೇಗೆ ಅಂತ ಅವರೇ ಹೇಳಿದ್ದಾರೆ ನೋಡಿ!

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಎಸ್​ವೈ, ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ ಮುಖ್ಯ ನ್ಯಾಯಾಧೀಶರ ಮುಂದೆ ಚರ್ಚೆಯಾಗಲಿದೆ, 10 ಜನ ಶಾಸಕರಲ್ಲದೇ, ಮತ್ತೆ 5 ಶಾಸಕರು ರಾಜೀನಾಮೆ ಅಂಗೀಕಾರ ಸಂಬಂಧ ಕೋರ್ಟ್​​ಗೆ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.

ನಗರದ ರಮಡ ರೆಸಾರ್ಟ್ ಬಳಿ ಶನಿವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ನಾಗೇಶ್, ಶಂಕರ್ ಮಂತ್ರಿಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ. ಒಟ್ಟು 15 ಶಾಸಕರು, 2 ಪಕ್ಷೇತರರು, ರಾಮಲಿಂಗಾರೆಡ್ಡಿ ಸೇರಿದಂತೆ ಒಟ್ಟು 18 ಶಾಸಕರ ಬೆಂಬಲ ಸರ್ಕಾರಕ್ಕೆ ಇಲ್ಲ ಎಂದು ಬಿಎಸ್​ ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಸಿಎಂ ಹೆಚ್​.ಡಿ ಕುಮಾರಸ್ವಾಮಿ ಬಹುಮತ ಕಳೆದುಕೊಂಡಿದ್ದಾರೆ. ಅವರು ವಿಶ್ವಾಸ ಮತಯಾಚನೆ ಮಾಡ್ತಿನಿ ಅಂತ ಹೇಳಿದ್ದನ್ನು ಸ್ವಾಗತಿಸುತ್ತೇವೆ. ಕೋರ್ಟ್ ಮಂಗಳವಾರದ ತೀರ್ಪು ನೋಡಿ ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ನುಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *