ಹುಟ್ಟುಹಬ್ಬದಂದೇ ಶಿವಣ್ಣ ಕೊಟ್ರು ಅಭಿಮಾನಿಗಳಿಗೆ ಗುಡ್​​ನ್ಯೂಸ್​​​​

ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣನಿಗೆ ಅಭಿಮಾನಿಗಳ ಹಾರೈಕೆ ಫಲಿಸಿದ್ದು, ಲಂಡನ್​ನಲ್ಲಿ ಅವರ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಹ್ಯಾಟ್ರಿಕ್​​ ಹೀರೋಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಫೇಸ್​​ಬುಕ್​ ಲೈವ್​​​ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ ನಟ ಶಿವರಾಜ್​​ ಕುಮಾರ್​​, ಆಪರೇಷನ್​​ ತುಂಬಾ ಚೆನ್ನಾಗಾಗಿದೆ. ಮುಂಚೆಗಿಂತಲೂ ಹೆಚ್ಚು ಆಕ್ಟೀವ್​ ಆಗಬಹುದು, ಪ್ರತಿ ಬಾರಿ ಜನ್ಮದಿನಕ್ಕೆ ನಿಮ್ಮ ಜೊತೆ ಇರ್ತಿದ್ದೆ, ಆದ್ರೆ ಈ ಬಾರಿ ಮಿಸ್​​​ ಮಾಡ್ಕೊಳ್ತಿದ್ದೀನಿ ಎಂದರು. ಅಷ್ಟೇ ಅಲ್ದೆ ಜನ್ಮದಿನಕ್ಕೆ ಶುಭಾಷಯ ಕೋರಿದ ಫ್ಯಾನ್ಸ್​ ಹಾಗೂ ಚಿತ್ರತಂಡದ ಸಹದ್ಯೋಗಿಗಳಿಗೆ ಧನ್ಯವಾದ ತಿಳಿಸಿದರು.

57ನೇ ವಸಂತಕ್ಕೆ ಕಾಲಿಟ್ಟ ನಟ ಶಿವರಾಜ್​​ ಕುಮಾರ್​​

ಇನ್ನು ಬೆಳಗ್ಗೆ 11 ಗಂಟೆಗೆ ಅಣ್ಣಾವ್ರ ಪುಣ್ಯ ಭೂಮಿಯಲ್ಲಿ ರಾಘವೇಂದ್ರ ರಾಜ್​ಕುಮಾರ್​​ ಅವರು ಕೇಕ್ ಕತ್ತರಿಸಿ ಶಿವಣ್ಣ ಅವ್ರ ಹುಟ್ಟು ಹಬ್ಬ ಆಚರಿಸಲಿದ್ದಾರೆ. ಹಾಗೇನೆ ಶಿವಣ್ಣ ಜೊತೆ ಪುನೀತ್ ರಾಜ್​ಕುಮಾರ್​​ ಸಹ ಲಂಡನ್​ಲ್ಲಿ ಇರೋದ್ರಿಂದ ಅಭಿಮಾನಿಗಳ ಜೊತೆ ಮಾತನಾಡಲು ಮಧ್ಯಾಹ್ನ ಮಧ್ಯಾಹ್ನ 1 ಗಂಟೆಗೆ ಅಣ್ಣಾವ್ರ ಪುಣ್ಯ ಭೂಮಿಯಲ್ಲಿ LED ಸ್ಕ್ರೀನ್ ಮುಖಾಂತರ ವಿಡಿಯೋ ಮೂಲಕ ಬರಲಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *