‘ರಾಜೀನಾಮೆ ಪ್ರಕ್ರಿಯೆ ವೀಡಿಯೋ ಸುಪ್ರೀಂಕೋರ್ಟ್‌ಗೆ ಕಳಿಸುತ್ತೇನೆ’

ಬೆಂಗಳೂರು: ಕಾಂಗ್ರೆಸ್ ಅತೃಪ್ತ ಶಾಸಕರು ವಿಧಾನಸೌಧಕ್ಕೆ ದೌಡಾಯಿಸಿ, ಮತ್ತೊಮ್ಮೆ ರಾಜೀನಾಮೆ ನೀಡಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ರಾಜೀನಾಮೆಗಳು ಕ್ರಮಬದ್ದವಲ್ಲದ ಕಾರಣ ಮತ್ತೊಮ್ಮೆ ಸಲ್ಲಿಸಲು ಹೇಳಿದ್ದೆ. ವಿಚಾರಣೆ ಮಾಡದೇ ನಾನು ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ನಾನು ಯಾವುದೇ ವಿಳಂಬ ನೀತಿ ಅನುಸರಿಸಲಿಲ್ಲ. ನಾನು ಯಾರೂ ಹೇಳದಂತೆ ಕುಣಿಯೋನಲ್ಲ. ರಾಜೀನಾಮೆ ಇಷ್ಟು ಬೇಗ ಅಂಗೀಕರಿಸಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಚುನಾಯಿತ ಸದಸ್ಯರು ನನನ್ನು ಭೇಟಿಯಾಗಲು ಸುಪ್ರೀಂ ಕೋರ್ಟ್‌ಗೆ ಹೋಗುವ ಅಗತ್ಯವಿತ್ತಾ..? ಇವರನ್ನು ಯಾರು ಹಿಡಿದು ಇಟ್ಟಿದ್ರು? ನಮ್ಮ ಹತ್ರ ಬರಲಿಲ್ಲ ಕೇಳಲಿಲ್ಲ. ಮುಂಬೈಗೆ ಹೋಗಿ ಕುಳಿತು ಅಲ್ಲಿಂದ ಸುಪ್ರೀಂ ಕೋರ್ಟ್ ಗೆ ಹೋದರೆ ಹೇಗೆ? ಅದಕ್ಕೆ ಸ್ಪೀಕರ್ ವಿಳಂಬ ಮಾಡಿದರು. ಸಾಯೋ ಟೈಂನಲ್ಲಿ ಆಸೆ ಪಡ್ತಿರಬಹುದು ಸ್ಪೀಕರ್ ಅಂತ ಜನ ತಿಳಿದುಕೊಳ್ಳಲ್ಲವಾ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೈಂ ಕೊಟ್ಟಿದ್ದೀನಿ ಇಡೀ ಪ್ರಕ್ರಿಯೆ ವಿಡಿಯೋ ಮಾಡಿಸಿದ್ದೀನಿ. ಎಲ್ಲವನ್ನೂ ಸುಪ್ರಿಂಕೋರ್ಟ್‌ಗೆ ಕಳಿಸಿಕೊಡ್ತೀನಿ. ಸೋಮವಾರ, ಮಂಗಳವಾರ, ಬುಧವಾರ ಮೂರು ದಿನಗಳಲ್ಲಿ ಭೂಕಂಪ ಆದ ಹಾಗೆ ಮಾಡ್ತಾರೆ. ನನ್ನನು ಹಾಡಿ ಹೊಗಳಿ ಎಂದು ಹೇಳಲ್ಲ. ಯಾರೇ ಮಾಧ್ಯಮಗಳು ಬಂದರೂ ಎಲ್ಲಾ ಪ್ರತಿಗಳನ್ನು ಕೊಡಿ ಎಂದು ಕಚೇರಿಯವರಿಗೆ ಹೇಳಿದ್ದೇನೆ. ನಾವು ರಾಜೀನಾಮೆ ನೀಡಲು ಅವರು ಅಡ್ಡಿಪಡಿಸುತ್ತಿದ್ರು, ಹೀಗಾಗಿ ನಾವು ಮುಂಬೈಗೆ ಹೋಗಬೇಕಾಯಿತು ಎಂದು ಹೇಳಿದ್ರು. ಆದರೆ ನನಗೆ ಹೇಳಿದ್ರೆ ರಕ್ಷಣೆ ಕೊಡಿಸುತ್ತಿದ್ದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *