ಬೆಳಗ್ಗೆ ಬಿಜೆಪಿಯವರು ಫೋನ್​​ ಮಾಡಿ ರಾಜೀನಾಮೆ ನೀಡಲು ಹೇಳಿದ್ರು – ಶಾಸಕ ಎಸ್​​. ರಾಮಪ್ಪ

ದಾವಣಗೆರೆ: ನಾನು ಯಾವುದೇ ಆಪರೇಷನ್​ಗೆ ಒಳಗಾಗಿಲ್ಲ, ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಬಂದಿದ್ದೇನೆ ಎಂದು ಕಾಂಗ್ರೆಸ್​ ಶಾಸಕ ಎಸ್​ ರಾಮಪ್ಪ ಅವರು ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಮಾಧ್ಯದಮ ಜೊತೆ ಮಾತನಾಡಿದ ಹರಿಹರ ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ್.ರಾಮಪ್ಪ, ಮುಖ್ಯಮಂತ್ರಿ ಬದಲಾಗಬಹುದು. ಇಂದು ಬೆಳಗ್ಗೆ ಬಿಜೆಪಿಯವರು ಪೋನ್ ಮಾಡಿ ರಾಜೀನಾಮೆ ನೀಡಲು ಹೇಳಿದ್ದರು. ನಾನು ಯಾವುದೇ ಕಾರಣಕ್ಕೂ ಕಾಂಗ್ರೇಸ್ ಬಿಡೋಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಸರ್ಕಾರ ಏನೂ ಆಗಲ್ಲ, ಸರ್ಕಾರ ಸೇಫ್ ಆಗುತ್ತೇ. ನಾನು ಯಾವುದೇ ಹಣ ಆಮೀಷಕ್ಕೆ ಒಳಗಾಗುವುದಿಲ್ಲ, ನಾನು ಬೆಂಗಳೂರಿಗೆ ಹೋಗುತ್ತಿದ್ದು ಅಲ್ಲಿನ ಬೆಳವಣಿಗೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕಾಂಗ್ರಸ್​ ಶಾಸಕ ಎಸ್​ ರಾಮಪ್ಪ ಅವರು ಹೇಳಿದ್ದಾರೆ.

ಬಿಜೆಪಿಯವರು ಒಂದು ವರ್ಷದಿಂದಲ್ಲೂ ನನ್ನ ಕರೆಯುತ್ತಿದ್ದಾರೆ ಆದರೆ ನಾನು ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ. ಪಕ್ಷ ನಮ್ಮನ್ನು ನಂಬಿ ಎರಡು ಬಾರಿ ಬಿ ಫಾರಂ ಕೊಟ್ಟಿದ್ದಾರೆ. ನಮ್ಮ ಕ್ಷೇತ್ರದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ ಅವರ ಸೇವೆ ಮಾಡಬೇಕು. ನಮಗೆ ಜನ ಮುಖ್ಯ ಎಂದು ಅವರು ತಿಳಿಸಿದರು.

ಕಳೆದ ವಾರದಿಂದ ಕಾಂಗ್ರೆಸ್​​-ಜೆಡಿಎಸ್​ ಅತೃಪ್ತ ಶಾಸಕರು ಸ್ಪೀಕರ್​ ರಮೇಶ್​ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಲ್ಲದೇ ರಾಜೀನಾಮೆ ಕೊಟ್ಟಿರುವ ಎಲ್ಲ ಶಾಸಕರು ಮುಂಬೈನ ಹೋಟೆಲ್​ ಮತ್ತು ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಸುದ್ದಿ ಆಗಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *