ಟೀಂ ಇಂಡಿಯಾ ಭಾವನ್ಮಾತಕವಾಗಿ ವಿಶ್ವಕಪ್​​ ಯಾತ್ರೆಗೆ ಮುಕ್ತಾಯ ಹೇಳಿದ ಕ್ಷಣ

ಮ್ಯಾಂಚೆಸ್ಟರ್​: ಭಾರತ ತಂಡ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್​ ಫರ್ಹಾರ್ಟ್​ ಭಾವನಾತ್ಮಕ ಟ್ವೀಟ್‌ನಲ್ಲಿ, ಬುಧವಾರ ಭಾರತದೊಂದಿಗಿನ ತನ್ನ ಕೆಲಸದ ಕೊನೆಯ ದಿನವೆಂದು ಘೋಷಿಸಿದ್ದು, ಭವಿಷ್ಯದಲ್ಲಿ ತಂಡಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು. ಈ ವರ್ಷದುದ್ದಕ್ಕೂ ತಮಗೆ ಬೆಂಬಲವಾಗಿ ನಿಂತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಧನ್ಯವಾದ ಅರ್ಪಿಸಿದ್ದಾರೆ.

ತಂಡದೊಂದಿಗಿನ ನನ್ನ ಕೊನೆಯ ದಿನ ನಾನು ಬಯಸಿದಂತೆ ಹೊರಹೊಮ್ಮಲಿಲ್ಲವಾದರೂ, ಕಳೆದ 4 ವರ್ಷಗಳಿಂದ ತಂಡದೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ @BCCIಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭವಿಷ್ಯಕ್ಕಾಗಿ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ನನ್ನ ಶುಭಾಶಯಗಳು ಎಂದು ಪ್ಯಾಟ್ರಿಕ್​ ಫರ್ಹಾರ್ಟ್ ಅವರು ತಮ್ಮ ಟ್ವಿಟರ್​ ಖಾತೆಯ ಮೂಲಕ ತಿಳಿಸಿದ್ದಾರೆ.

https://platform.twitter.com/widgets.js
ಫರ್ಹತ್​ ಅವರು ಕ್ರಿಕೆಟ್​ ಕ್ಷೇತ್ರದಲ್ಲಿ ಮೂವತ್ತು ವರ್ಷಗಳ ಅನುಭವ ಹೊಂದಿದ್ದು, ಈ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಬ್ರೆಟ್ ಲೀ ಅವರಂತಹವರೊಂದಿಗೆ ಕೆಲಸ ಮಾಡಿದ್ದರು. ವಿಶ್ವಕಪ್ ನಡೆದ ನಂತರ 2015ರಲ್ಲಿ ಟೀಮ್ ಇಂಡಿಯಾ ಜೊತೆ ಸೇರಿಕೊಂಡಿದ್ದರು.

ಬುಧವಾರದ ಆಟದ ಬಗ್ಗೆ ಮಾತನಾಡಿ ಅವರು, ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್‌ನ ಸ್ಕೋರ್ 239 ರನ್‌ಗಳನ್ನು ಬೆನ್ನಟ್ಟಲು ವ್ಯರ್ಥವಾಗಿ ಪ್ರಯತ್ನಿಸಿದ್ದರಿಂದ ಭಾರತವು 18 ರನ್‌ಗಳಿಂದ ಸೋಲಾಯ್ತು. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಎಂ.ಎಸ್.ಧೋನಿ ಅವರ ಬೆನ್ನಟ್ಟುವಿಕೆಯಲ್ಲಿ ತಮ್ಮ ಗೌರವವನ್ನು ಪುನಃಸ್ಥಾಪಿಸುವಲ್ಲಿ ಪ್ರಯತ್ನ ಮಾಡಿದರು ಆದರೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರು ನಿರೀಕ್ಷಿತ ಪ್ರದರ್ಶನ ತೊರದ ಪರಿಣಾಮ ತಂಡ ಸೋಲಬೇಕಾಯಿತು.

ಅಂತಿಮವಾಗಿ, ಭಾರತೀಯರು 221 ರನ್‌ಗಳಿಗೆ ಆಲೌಟ್ ಆದರು ಮತ್ತು ಕಿವೀಸ್ ಫೈನಲ್‌ಗೆ ಮುನ್ನಡೆದರು.

ನಲವತ್ತೈದು ನಿಮಿಷಗಳ ಕೆಟ್ಟ ಕ್ರಿಕೆಟ್ ನಮ್ಮನ್ನು ಟೂರ್ನಿಯಿಂದ ಹೊರಬರುವಂತೆ ಮಾಡಿತು. ಇದನ್ನು ಸಹಿಸಿಕೊಳ್ಳಲು ಸ್ವಲ್ಪ ಕಷ್ಟ ಆದರೆ ನ್ಯೂಜಿಲೆಂಡ್​ ತಂಡ ಅರ್ಹತೆ ಪಡೆದುಕೊಂಡಿದೆ. ನಮ್ಮ ಜರ್ನಿ ಚಿಕ್ಕದಾಗಿರಬಹುದು ಆದರೆ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ನ್ಯೂಜಿಲೆಂಡ್ ತಂಡವು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಧೈರ್ಯಶಾಲಿಗಳಾಗಿ ಹೋರಾಡಿತು ಅವರು ಅದಕ್ಕೆ ಅರ್ಹರು ಎಂದು ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *