ನಿವೃತ್ತಿಯ ಬಗ್ಗೆ ಯೋಚನೆ ಸಹ ಮಾಡಬೇಡಿ: ಧೋನಿಗೆ ಮಹೋನ್ನತ ಗಾಯಕಿಯ ಮನವಿ

ಮುಂಬೈ: ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೋಂದುತ್ತಿದ್ದಾರೆಂಬ ಸುದ್ದಿ ಕೇಳಿದ ಭಾರತೀಯ ಚಿತ್ರರಂಗದ ಮಹೋನ್ನತ ಗಾಯಕಿ ಲತಾ ಮಂಗೇಷ್ಕರ್, ಧೋನಿ ನಿವೃತ್ತಿ ಪಡೆಯದಂತೆ ಮನವಿ ಮಾಡಿದ್ದಾರೆ.

ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ ಗಾಯಕಿ ಲತಾ ಮಂಗೇಷ್ಕರ್, ನೀವು ಕ್ರಿಕೇಟ್‌ನಿಂದ ನಿವೃತ್ತಿ ಹೊಂದುತ್ತಿದ್ದೀರೆಂದು ಕೇಳ್ಪಟ್ಟೆ, ದಯವಿಟ್ಟು ನೀವು ನಿವೃತ್ತಿ ತೆಗೆದುಕೊಳ್ಳಬೇಡಿ. ಭಾರತೀಯ ಕ್ರಿಕೇಟ್ ತಂಡಕ್ಕೆ ನಿಮ್ಮ ಅವಶ್ಯಕತೆ ತುಂಬ ಇದೆ. ಅಲ್ಲದೇ ನಾನು ಈ ಬಗ್ಗೆ ವಿನಂತಿಸುತ್ತೇನೆ. ನಿವೃತ್ತಿ ಬಗ್ಗೆ ನೀವು ಯೋಚನೆ ಸಹ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಲತಾ ಮಂಗೇಷ್ಕರ್ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಧೋನಿ ಕ್ರಿಕೇಟ್‌ನಿಂದ ವಿದಾಯ ಹೊಂದಬಾರದೆಂದು ಮನವಿ ಮಾಡಿದ್ದಾರೆ.

ಇನ್ನು ವರ್ಲ್ಡ್‌ಕಪ್‌ನಲ್ಲಿ ನ್ಯೂಜಿಲೆಂಡ್ ಜೊತೆ ಸೋಲೋಪ್ಪಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರಾಟ್ ಕೋಹ್ಲಿ, ಧೋನಿ ತಮ್ಮ ನಿವೃತ್ತಿ ಬಗ್ಗೆ ಈ ತನಕ ಏನೂ ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *