ಮಹಾನ್ ಕಲಾವಿದನ ಹುಟ್ಟುಹಬ್ಬಕ್ಕೆ ಶಿವಸೈನ್ಯ ಸಜ್ಜು

ನಾಳೆ ಜುಲೈ 12 ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜನ್ಮದಿನ. ಶಿವಣ್ಣ ಅಭಿಮಾನಿಗಳಿಗಂತೂ ಸಂಭ್ರಮದ ಹಬ್ಬ. 57ನೇ ವಸಂತಕ್ಕೆ ಕಾಲಿಡುತ್ತಿರೋ ಶಿವಣ್ಣನವರು ಲಂಡನ್‌ನಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ವಿಶ್ರಾಂತಿಯಲ್ಲಿದ್ದಾರೆ.

ಶಿವಣ್ಣನ ಹುಟ್ಟುಹಬ್ಬ ಆಚರಿಸಲು ಶಿವಣ್ಣನ ಅಭಿಮಾನಿಗಳು, ಕುಟುಂಬದವರು ಮತ್ತು ಹೆಸರಾಂತ ನಿರ್ದೇಶಕರು, ನಿರ್ಮಾಪಕರು, ಆಪ್ತರೆಲ್ಲರೂ ಸಜ್ಜಾಗಿದ್ದು, ವಿಶೇಷವಾಗಿ ಶಿವಣ್ಣ ಅಭಿಮಾನದ ಹೆಮ್ಮೆಯ ತಂಡ ಶಿವಸೈನ್ಯದವರು ಹಲವಾರು ಮಹೋನ್ನತ ಕಾರ್ಯಗಳ ಮೂಲಕ ಶಿವಣ್ಣನ ಜನ್ಮದಿನ ಆಚರಿಸುತ್ತಿದ್ದಾರೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಅಣ್ಣಾವ್ರ ಪುಣ್ಯಭೂಮಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಕೇಕ್ ಕತ್ತರಿಸಿ, ಶಿವಣ್ಣರ ಹುಟ್ಟುಹಬ್ಬ ಆಚರಣೆಗೆ ಮೆರಗು ನೀಡಲಿದ್ದಾರೆ.

ಮಧ್ಯಾಹ್ನ 12ಗಂಟೆಗೆ ಶಿವಣ್ಣ ಅವರಿಗೋಸ್ಕರ ಡೆಡಿಕೇಟ್ ಮಾಡೋದಕ್ಕೆ ಶಿವಸೈನ್ಯದವರು ಸಿದ್ಧ ಮಾಡಿರೋ ಮಹಾನ್ ಕಲಾವಿದ ಹಾಡನ್ನ, ನಿರ್ಮಾಪಕರು ಮತ್ತು ಅಣ್ಣಾವ್ರ ಫ್ಯಾಮಿಲಿ ಆಪ್ತರಾದ ಕೆ.ಪಿ.ಶ್ರೀಕಾಂತ್ ಅವರು ಬಿಡುಗಡೆಗೊಳಿಸಲಿದ್ದಾರೆ.

ಹಾಗೇನೆ ಶಿವಣ್ಣ ಮತ್ತು ಪುನೀತ್ ರಾಜ್‌ಕುಮಾರ್ ಇಬ್ಬರೂ ಲಂಡನ್‌ನಲ್ಲಿ ಇರೋದ್ರಿಂದ, ಮಧ್ಯಾಹ್ನ ಒಂದು ಗಂಟೆಗೆ ಅಭಿಮಾನಿಗಳೊಂದಿಗೆ ಮಾತನಾಡಲು ಅಣ್ಣಾವ್ರ ಪುಣ್ಯ ಭೂಮಿಯಲ್ಲಿ LED ಸ್ಕ್ರೀನ್ ಮುಖಾಂತರ ವೀಡಿಯೋ ಮೂಲಕ ಬರಲಿದ್ದಾರೆ.

ಅದೆಷ್ಟೋ ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿರೋ ಅಣ್ಣಾವ್ರ ಮನೆಯ ದೊಡ್ಮಗ ಶಿವಣ್ಣ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಅನ್ನದಾನ ಸಹ ಏರ್ಪಡಿಸಲಾಗಿದ್ದು, ಸಂತೃಪ್ತಿಯ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ.

ಕರುನಾಡ ಚಕ್ರವರ್ತಿಯ ಈ ಜನ್ಮದಿನ ಸಂಭ್ರಮಕ್ಕೆ ಕೋಟಿ ಕೋಟಿ ಅಭಿಮಾನಿಗಳ ಹಾರೈಕೆಗಳ ಜೊತೆ

ಇಂತಿ

– ಟೀಮ್ ಶಿವಸೈನ್ಯ

Recommended For You

About the Author: Dayakar

Leave a Reply

Your email address will not be published. Required fields are marked *