ಇಂದು ಲಂಡನ್‌ನಲ್ಲಿ ಶಿವಣ್ಣಗೆ ಆಪರೇಷನ್, ಇಲ್ಲಿದೆ ಎಕ್ಸ್‌ಕ್ಲೂಸಿವ್ ಲಂಡನ್ ಶೆಡ್ಯೂಲ್

ಸ್ಯಾಂಡಲ್​ವುಡ್ ಮುತ್ತುರಾಜ ಡಾ. ಶಿವಣ್ಣ ಅನಾರೋಗ್ಯ ನಿಮಿತ್ತ ಲಂಡನ್ ಹೋಗಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಅವ್ರಿಗೆ ಆಪರೇಷನ್ ಯಾವತ್ತು..? ಅಲ್ಲಿ ಎಷ್ಟು ದಿನ ಇರ್ತಾರೆ..? ಬರ್ತ್ ಡೇ ಕಥೆಯೇನು..? ಬಾಕ್ಸಾಫೀಸ್​ನಲ್ಲಿ ರುಸ್ತುಂ ಹವಾ ಹೇಗಿದೆ ಅಂತೀರಾ..? ಇವೆಲ್ಲಕ್ಕೂ ಉತ್ತರ ಇಲ್ಲಿದೆ ನೋಡಿ.

ಲಂಡನ್​ನಲ್ಲಿ ಟಗರು ಶಿವ.. ಬಾಕ್ಸಾಫೀಸ್​ನಲ್ಲಿ ರುಸ್ತುಂ ಹವಾ..!
ಜುಲೈ 10ರ ಸಂಜೆ 6.30ಕ್ಕೆ ಶಿವರಾಜ್​ಕುಮಾರ್ ಆಪರೇಷನ್
ಮೊನ್ನೆಯಷ್ಟೇ ತೆರೆಕಂಡ ಶಿವಣ್ಣನ ರುಸ್ತುಂ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸ್ತಿದೆ. ರವಿವರ್ಮಾ, ಜಯಣ್ಣ- ಶಿವಣ್ಣ ಜೋಡಿ ಮೋಡಿ ಮಾಡ್ತಿದೆ. ಮಾಸ್ ಪ್ರಿಯರಿಗೆ ಶಿವಣ್ಣನ ಹೈವೋಲ್ಟೇಜ್ ಫೈಟ್ಸ್ ಹಬ್ಬದೂಟ ಉಣಬಡಿಸಿದಂತಿದೆ. ಇನ್ನು ಕಲೆಕ್ಷನ್​ನಲ್ಲೂ ಕೋಟ್ಯಾಂತರ ರೂಪಾಯಿ ಪೈಸಾ ವಸೂಲ್ ಮಾಡಿರೋ ರುಸ್ತುಂ, ಯಶಸ್ವಿ 50ನೇ ದಿನದತ್ತ ಮುನ್ನುಗ್ತಿದೆ.

ಇನ್ನು ಭುಜದ ನೋವಿನಿಂದ ಬಳಲ್ತಿರೋ ಶಿವಣ್ಣ, ಶಸ್ತ್ರ ಚಿಕಿತ್ಸೆಗಾಗಿ ಇತ್ತೀಚೆಗೆ ಲಂಡನ್​ಗೆ ತೆರಳಿದ್ದು ಗೊತ್ತೇಯಿದೆ. ಅಲ್ಲಿ ಎಸ್. ಎಂ. ಕೃಷ್ಣ ಹಾಗೂ ಸಚಿನ್ ತೆಂಡೂಲ್ಕರ್​ಗೆ ಈ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿದ್ದ ಅದೇ ಆಸ್ಪತ್ರೆಯಲ್ಲಿ ಅದೇ ವೈದ್ಯರು ಆಪರೇಷನ್ ನಡೆಸಲಿದ್ದಾರೆ. ಹಾಗಾದ್ರೆ ಅವ್ರ ಲಂಡನ್ ಶೆಡ್ಯೂಲ್ ಹೇಗಿದೆ ಅಂತೀರಾ..?

ಜುಲೈ 10– ಸಂಜೆ 6:30ಕ್ಕೆ ಆಪರೇಷನ್
ಜುಲೈ 11– ಆಸ್ಪತ್ರೆಯಿಂದ ಡಿಸ್ಚಾರ್ಜ್​
ಜುಲೈ 12– ವಿಡಿಯೋ ಕಾನ್ಫರೆನ್ಸ್ ಮೂಲಕ ಫ್ಯಾನ್ಸ್ ಜೊತೆ ಮಾತು
ಜುಲೈ 17– ಪೋಸ್ಟ್ ಸರ್ಜರಿ ಫಾಲೋಅಪ್
ಜುಲೈ 18– ದುಬೈಗೆ ಪ್ರಯಾಣ
ಜುಲೈ 22– 4 ದಿನದ ದುಬೈ ಹಾಲಿಡೇ ಅಂತ್ಯ
ಜುಲೈ 23– ಬೆಂಗಳೂರಿಗೆ ವಾಪಸ್

ಅಂದಹಾಗೆ ಶಿವಣ್ಣನಿಗೆ ಈ ಪ್ರಾಸೆಸ್​ನಲ್ಲಿ ಸಹೋದರ ಪುನೀತ್ ರಾಜ್​ಕುಮಾರ್, ಗೀತಾ ಶಿವರಾಜ್​ಕುಮಾರ್, ನಿವೇದಿತಾ ಶಿವರಾಜ್​ಕುಮಾರ್, ಮಧು ಬಂಗಾರಪ್ಪ ಸೇರಿದಂತೆ ಅಲ್ಲಿನ ಲಂಡನ್ ಕನ್ನಡಿಗರು, ಕನ್ನಡ ಸಂಘಗಳೂ ಸಾಥ್ ಕೊಡ್ತಿವೆ.

ಅಲ್ಲದೇ, ಶಿವಣ್ಣನ ಆರೋಗ್ಯ ಬೇಗ ಸುಧಾರಿಸಲಿ ಎಂದು ಶಿವಣ್ಣನ ಅಭಿಮಾನಿಗಳು ಹೋಮ ಹವನ ಮಾಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ.
ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Recommended For You

About the Author: TV5 Kannada

Leave a Reply

Your email address will not be published. Required fields are marked *