ದೋಸ್ತಿ ಸರ್ಕಾರದಲ್ಲಿ ಮತ್ತೆರಡು ವಿಕೆಟ್ ಪತನ..!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮತ್ತೆ ಮೂರು ವಿಕೆಟ್ ಪತನವಾಗಿದ್ದು, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಮತ್ತು ಸಚಿವ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಎಂ.ಟಿ.ಬಿ ನಾಗರಾಜ್ ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದಾರೆ. ಸುಧಾಕರ್ ಮನವೊಲಿಸಲು ಡಿಕೆಶಿ ಯತ್ನಿಸಿದ್ದರೂ ಕೂಡ ಅದು ವಿಫಲವಾಗಿದೆ. ಇನ್ನು ನಾಗರಾಜ್ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದು, ಸಚಿವ ಸ್ಥಾನದಲ್ಲಿದ್ದರೂ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಒಟ್ಟು 15 ನಿಮಿಷದಲ್ಲಿ ಮೈತ್ರಿ ಸರ್ಕಾರದ 2 ವಿಕೆಟ್ ಪತನಗೊಂಡಿದೆ. ಅತೃಪ್ತ ಕಾಂಗ್ರೆಸ್ಸಿಗರ ರಾಜೀನಾಮೆ ಪರ್ವ ಮುಂದುವರೆದಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *