‘ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ, ಅದರ ಅವಶ್ಯಕತೆ ನನಗಿಲ್ಲ’

ಬೆಂಗಳೂರು: ನೆಲಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದರ ಅವಶ್ಯಕತೆ ನನಗಿಲ್ಲ. ರಾಜಕೀಯ ವಿಚಾರದಲ್ಲಿ ಚರ್ಚೆಗಳು ನಡೆಯಬೇಕಿರುವುದು ವಿಧಾನಸಭೆಯಲ್ಲಿ . ಇದರ ಬಗ್ಗೆ ಚರ್ಚೆ ಇದೇ ತಿಂಗಳ 12ರಂದು ನಡೆಯಲಿದೆ ಎಂದು ಹೇಳಿದ್ದಾರೆ.

ವಿರೊಧ ಪಕ್ಷದ ನಾಯಕರು ಕೀಳು ಮಾತುಗಳನ್ನಾಡುತ್ತಿದ್ದಾರೆ. ರಾಜಕೀಯದ ಬಗ್ಗೆ ಅಂದು ಚರ್ಚೆ ಮಾಡಲಾಗುವುದು. ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರ ನಿಮ್ಮ ಭವಿಷ್ಯದ ಮೇಲು, ಹಾಗೂ ರಾಜ್ಯದ ಭವಿಷ್ಯಕ್ಕೆ ಮಾರಕವಾಗಲಿದೆ. ನಿಮ್ಮ ನಿಲುವನ್ನು ನೀವೇ ಯೋಚಿಸಿ ಎಂದು ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, 4ನೇ ತಾರೀಕು ಕಾರ್ಯಕ್ರಮ ನಿಗದಿಯಾಗಿತ್ತು. ಅಮೆರಿಕಾಗೆ ಹೋಗಿದ್ದರಿಂದ ಕಾರ್ಯಕ್ರಮ ಇಂದು ನಡೆಯುತ್ತಿದೆ. ಅಸಂಘಟಿತ ವರ್ಗ, ಶ್ರಮ ಜೀವಿಗಳ ಸಮಸ್ಯೆ ಬಗೆಹರಿಸಲು ಈ ಸಂಸ್ಥೆ ನಿರ್ಮಾಣವಾಗಿದೆ . ಈ ಸಂಸ್ಥೆ ಶ್ರಮಿಕರ ಬದುಕಿಗೆ ಆಶ್ರಯವಾಗಲಿದೆ . ಕಾರ್ಮಿಕರ ಸಮಸ್ಯೆಗಳನ್ನು ಅರಿತು ಈ ಸಂಸ್ಥೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಕಸನ ಹೆಸರಿನಲ್ಲಿ ಕೈಪಿಡಿ ಬಿಡುಗಡೆ ಮಾಡಲಾಗಿದೆ. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಚಾರ ಈ ಪುಸ್ತಕದಲ್ಲಿದೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆಒತ್ತು ನೀಡಿ, ವಿಶೇಷ ತರಬೇತಿಗಳನ್ನು ನೀಡಲಾಗುವುದು. ತಮ್ಮ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಈ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೆಳ ಹಂತದ ಕಾರ್ಮಿಕರಿಗೆ ಮೈತ್ರಿ ಸರ್ಕಾರ ಹಲವು ಯೋಜನೆ ತರಲು ಮುಂದಾಗಿದ್ದೇವೆ. ಕೇವಲ ರೈತರ ಹಾಗೂ ಬಂಡವಾಳಶಾಹಿಗಳ ಪರ ಇರುವ ಪಕ್ಷವಲ್ಲ. ಇದು ಬಡವರ ಶ್ರಮಿಕರ ಕಾರ್ಮಿಕರ ಪ್ರರವಾದ ಪಕ್ಷ ಎಂದು ಹೇಳಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *