ಗ್ರಾಹಕರಿಗೆ ಗುಡ್​ನ್ಯೂಸ್: ಕಳೆದು ಹೋದ ಮೊಬೈಲ್​​ ಫೋನ್​ ಮತ್ತೆ ನಿಮ್ಮ ಕೈ ಸೇರುತ್ತೇ!​​

ನವದೆಹಲಿ: ಮೊಬೈಲ್​ ಫೋನ್​ ಕಳೆದುಹೋದರೆ ಇನ್ಮುಂದೆ ನೀವು ಆಕಾಶ ತಲೆ ಮೇಲೆ ಬಿದ್ದೋರ ಹಾಗೇ ಕೂರುವ ಅವಶ್ಯಕತೆ ಇಲ್ಲ, ಕಳೆದ ಫೋನ್​ ಮತ್ತೆ ಕೈ ಸೇರುವಂತೆ ಒಂದು ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ.

ಭಾರತೀಯ ದೂರಸಂಪರ್ಕ ಇಲಾಖೆಯೂ ಕಳೆದ ಹೋಗಿರುವ ಮೊಬೈಲ್​ ಮರಳಿಪಡೆಯುವ ನಿಟ್ಟಿನಲ್ಲಿ ಪರಿಹಾರ ನೀಡಿದೆ. ದೂರಸಂಪರ್ಕ ಇಲಾಖೆಯಿಂದ ಮೊಬೈಲ್​ ಜಾಡು ಕಂಡುಹಿಡಿಯುವ ವ್ಯವಸ್ಥೆಯನ್ನು ಮುಂದಿನ (ಆಗಸ್ಟ್​) ತಿಂಗಳಿಂದ ಜಾರಿಗೆ ಬರಲಿದೆ.

ಮೊಬೈಲ್​ ಕದ್ದವರು ನಿಮ್ಮ ಸೀಮ್​ ಕಾರ್ಡ್​ ಹೊರತೆಗೆದು, ಇಲ್ಲ ವಿಶಿಷ್ಟ ಸಂಖ್ಯೆ, ಐಎಂಇಐ ಸಂಖ್ಯೆ ಬದಲಿಸಿದರು ಕೂಡ ಮೊಬೈಲ್​ ಫೋನ್​ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ರೂಪಿಸಿಲಾಗಿದ್ದು, ಮುಂದಿನ ತಿಂಗಳು ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಈ ಮೇಲಿನ ತಂತ್ರಜ್ಞಾನವನ್ನು ರೂಪಿಸುವಂತೆ 2017ರಲ್ಲಿ ದೂರಸಂಪರ್ಕ ಇಲಾಖೆಗೆ ಕೇಂದ್ರ ಸರ್ಕಾರ ಆದೇಶ ನೀಡಲಾಗಿತ್ತು. ಈ ಯೋಜನೆಗಾಗಿ 15 ಕೋಟಿ ರೂ. ಬಿಡುಗಡೆ ಕೂಡ ಮಾಡಲಾಗಿತ್ತು. ಇದೀಗ ಈ ನೂತನ ವ್ಯವಸ್ಥೆಯನ್ನು ಇಲಾಖೆ ಸಿದ್ಧಪಡಿಸಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *