ನಮ್ಮ ಉದ್ದೇಶ ರಾಷ್ಟ್ರ ಮತ್ತು ನಾಗರಿಕರನ್ನು ಶಕ್ತಿಶಾಲಿ ಮಾಡೋದು – ನಿರ್ಮಲಾ ಸೀತರಾಮನ್​

ನವದೆಹಲಿ: ನಮ್ಮ ಸರ್ಕಾರದ ಮೂಲ ಉದ್ದೇಶ ರಾಷ್ಟ್ರ ಮತ್ತು ನಾಗರೀಕರನ್ನು ಶಕ್ತಿಶಾಲಿಯನ್ನಾಗಿ ಮಾಡೋದು ಎಂದು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್​ ಅವರು ಹೇಳಿದರು.

ಲೋಕಸಭಾಯಲ್ಲಿ ಶುಕ್ರವಾರ ಕೇಂದ್ರದ 2019-20 ಸಾಲಿನ ಬಜೆಟ್​ ಮಂಡನೆ ವೇಳೆ ಮಾತನಾಡಿದ ಅವರು, ಸುಂದರವಾದ ರಾಷ್ಟ್ರದಲ್ಲಿ ಸುಂದರವಾದ ನಾಗರೀಕತೆ ಸೃಷ್ಠಿಯಾಗಬೇಕು ಅದು ನಾವು ಮಾಡುವ ಕೆಲಸದಿಂದ ಸಾಧಿಸಲಿದ್ದೇವೆ ಎಂದರು.

ನಾವು ಆರ್ಥಿಕತೆಯಲ್ಲಿ ಈ ವರ್ಷದ ಅಂತ್ಯದೊಳಗೆ ಅಮೇರಿಕಾದ ಡಾಲರ್​​ 3 ಟ್ರಿಲಿಯನ್ ನಷ್ಟು ಗುರಿಮುಟ್ಟುವ ಉದ್ದೇಶ ಹೊಂದಿದ್ದೇವೆ. ಹೀಗಾಗಿ ಮೂಲಭೂತಸೌಕರ್ಯ,  ಡಿಜಿಟಲ್​ ಆರ್ಥಿಕತೆ, ಉದ್ಯೋಗ ಸೃಷ್ಠಿ ಮಾಡುವ ಕಡೆ ಹೆಚ್ಚು ಹೂಡಿಕೆ ಅಗತ್ಯವಿದೆ ಎಂದು ಅವರು ಹೇಳಿದರು.

2022ರೊಳಗೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಮತ್ತು 2024ರೊಳಗೆ ನೀರು ಪೂರೈಕೆ ಮಾಡುವ ಗುರಿಗಳನ್ನು ಹೊಂದಿದ್ದೇವೆ.

ನಿರ್ಮಲಾ ಸೀತರಾಮನ್​ ಅವರು ಹಿಂದೆ ಇದ್ದ ಹಳೆಯ ಸಾಂಪ್ರದಾಯದಂತೆ ಲೋಕಸಭಾ ಬಜೆಟ್​ ಮಂಡನೆಗೆ ಬರದೇ ದೇಸಿ ಬಟ್ಟೆಯಲ್ಲಿ ತಯಾರು ಮಾಡಿದ ಬ್ಯಾಗ್​ನೊಂದಿಗೆ ತಮ್ಮ ಬಜೆಟ್​ಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

 

Recommended For You

About the Author: TV5 Kannada

Leave a Reply

Your email address will not be published. Required fields are marked *