ಸಜೀವ ಬಾಂಬ್‌ ಪತ್ತೆ- ಜನರನ್ನು ಬೆಚ್ಚಿ ಬೀಳಿಸಿದ ಉಗ್ರರು..!

ರಾಮನಗರ ಜನತೆ ಇಂದು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಸೆರೆಯಾಗಿದ್ದ ಉಗ್ರ ನೀಡಿದ ಮಾಹಿತಿ ಮೇರೆಗೆ ರಾಮನಗರದಲ್ಲಿ ಎರಡು ಕಚ್ಛಾ ಬಾಂಬ್ ಪತ್ತೆಯಾಗಿದೆ. ರಾಮನಗರಕ್ಕೂ ಉಗ್ರರಿಗೂ ನಂಟು ಇದಿಯಾ ಎಂಬ ಭಯ ಜನತೆಯಲ್ಲಿ ಶುರುವಾಗಿದೆ.

ರಾಮನಗರಕ್ಕೂ ಉಗ್ರರಿಗೂ ನಂಟು ಇದೆಯಾ ಎಂಬ ಭಯ ಜನರಲ್ಲಿ ಮನೆ ಮಾಡಿತ್ತು.. ಆದ್ರೀಗ ಸಜೀವ ಬಾಂಬ್‌ಗಳ ಪತ್ತೆಯಿಂದ ರೇಷ್ಮೆನಗರಿ ಜನತೆ ಬೆಚ್ಚಿಬಿದ್ದಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಅರೆಸ್ಟ್‌ ಆದ ಉಗ್ರ ವಿಚಾರಣೆ ವೇಳೆ, ರಾಮನಗರದ ಸೀರಳ್ಳ ಸೇತುವೆ ಬಳಿ ಬಾಂಬ್ ತಯಾರಿಕಾ ವಸ್ತುಗಳನ್ನು ಬಿಸಾಡಿರುವುದಾಗಿ ಬಾಯ್ಬಿಟ್ಟಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಐಎ, ಐಬಿ, ಬಾಂಬ್ ಸಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಒಂದು ಕ್ಷಣ ಅಧಿಕಾರಿಗಳೇ ಬೆಚ್ಚಿಬಿದ್ದಿದರು. ಯಾಕಂದ್ರೆ ಸೇತುವೆಯ ಕೆಳಗೆ 2 ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ವು. ಮುನ್ನೆಚರಿಕಾ ಕ್ರಮವಾಗಿ ಸೀರಳ್ಳ ಸೇತುವೆಯ ಅಕ್ಕ ಪಕ್ಕದ ರಸ್ತೆಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಭಂಧಗೊಳಿಸಿ, ಸಜೀವ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ರು. ಈ ಸುದ್ದಿ ತಿಳಿಯುತ್ತಿದ್ದಂತೆ ರಾಮನಗರ ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ರು. ಬಾಂಬ್ ತಯಾರಿಕಾ ವಸ್ತುಗಳು ಮತ್ತಷ್ಟು ಇರಬಹುದು ಎಂಬ ಶಂಕಿಸಲಾಗಿದೆ.

ರಾಮನಗರದಲ್ಲಿ ಕಚ್ಚಾ ಬಾಂಬ್‌ ಪತ್ತೆಯಾಗಿರೋ ವಿಷ್ಯ ತಿಳಿಯುತ್ತಿದ್ದಂತೆ, ಸಾರ್ವಜನಿಕರು ಆ ಸ್ಥಳದತ್ತ ದೌಡಾಯಿಸಿದ್ರು.. ಇತ್ತೀಚಿಗೆ ರಾಮನಗರದಲ್ಲೇ ಬಂಧಿತ ಉಗ್ರನಿಂದಲೂ ಕೂಡ ಹಲವು ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಸ್ಥಳೀಯ ಪೋಲಿಸರ ನಿರ್ಲಕ್ಷ್ಯದಿಂದ ಈ ಘಟನೆಯಾಗಿದ್ದು ಎಂದು ಸ್ಥಳಿಯರ ಆರೋಪಿಸಿದರು..

ಸದ್ಯ ಮತ್ತಷ್ಟು ಬಾಂಬ್‌ಗಳು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸೀರ್ ಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಪ್ರವೇಶ ನಿರ್ಬಂಧಿಸಿ, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Recommended For You

About the Author: Dayakar

Leave a Reply

Your email address will not be published. Required fields are marked *