‘ಓಟನ್ನ ಪ್ರಧಾನಿ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕು’

ರಾಯಚೂರು: ಸಿಎಂ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದು, ರಾಯಚೂರಿನಲ್ಲಿ ಸಭೆ ನಡೆಸಿ, ಸರ್ಕಿಟ್ ಹೌಸ್‌ನಿಂದ ಕರೇಗುಡ್ಡದತ್ತ ತೆರಳುವ ಮಾರ್ಗ ಮಧ್ಯೆ ಸಿಎಂಗೆ ವೈಟಿಪಿಎಸ್ ಕಾರ್ಯಕರ್ತರು ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ.

ಸಿಎಂ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಬಸ್ ತಡೆಹಿಡಿದು ಕೆಲಸದಿಂದ ತೆಗೆದ ಗುತ್ತಿಗೆ ಕಾರ್ಮಿಕರಿಗೆ ಮತ್ತೆ ಉದ್ಯೋಗ ನೀಡುವಂತೆ ವೈಟಿಪಿಎಸ್ ಕಾರ್ಯಕರ್ತರು ಪ್ರೊಟೆಸ್ಟ್ ಮಾಡಿದ್ದಾರೆ. ಇನ್ನು ಕಾರ್ಮಿಕರ ನಡೆಗೆ ಸಿಎಂ ಗರಂ ಆಗಿದ್ದು, ಕುಳಿತ ಸೀಟ್‌ನಿಂದ ಎದ್ದು ಬಂದು ಆಕ್ರೋಶ ಹೊರಹಾಕಿದರು.

ಓಟನ್ನ ಪ್ರಧಾನಿ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕೆಂದು ಸಿಎಂ ಕಾರ್ಯಕರ್ತರ ವಿರುದ್ಧ ಕಿಡಿಕಾರಿದರು. ಇನ್ನು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸಪಡಬೇಕಾಯ್ತು.

ತದನಂತರ ಮಾನ್ವಿಯ ಕಲ್ಲೂರು ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ಕೋರಿದ್ದು, ಮಾರ್ಗಮಧ್ಯದಲ್ಲೇ ಸಿಎಂ ಅಹವಾಲು ಸ್ವೀಕರಿಸಿದರು. ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಲ್ಲದೇ, ಕ್ಯಾನ್ಸರ್‌ ಪೀಡಿತ ಮಹಿಳೆಗೆ 2 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *