ರಾಯಚೂರಿಗಾಗಿ ರಾಜ್ಯ ಸರ್ಕಾರ ಮೀಸಲಿಟ್ಟಿದೆಯಂತೆ 3000ಕೋಟಿ ರೂಪಾಯಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡದಲ್ಲಿ ಗ್ರಾಮವಾಸ್ತವ್ಯಕ್ಕೆ ಹೋಗಿರುವ ಸಿಎಂ ಕುಮರಸ್ವಾಮಿ, ಸಾಲಮನ್ನಾ ಬಗ್ಗೆ ಮಾತನಾಡಿದ್ದು, ಸಾಲ ಮನ್ನಾ ಬಗ್ಗೆ ಅನುಮಾನ ಬೇಡ. ದುಡ್ಡು ಕೊಡಲು ನಾನು ರೆಡಿ ಇದ್ದೇನೆ. ನನ್ನ ಸ್ಪೀಡ್‌ಗೆ ಅಧಿಕಾರಿಗಳು ಬರಬೇಕು ಎಂದಿದ್ದಾರೆ.

ಬಿಜೆಪಿ ಶಾಸಕರು ಪಾದಯಾತ್ರೆ ಮಾಡ್ತಿದ್ದಾರೆಂದು ಮಾಧ್ಯಮದಲ್ಲಿ ನೋಡಿದ್ದೇನೆ. ಪಾದಯಾತ್ರೆ ಮಾಡೋದು ಬಿಜೆಪಿಯ ಗಿಮಿಕ್. ಮಾತಾಡೋಕ್ಕೆ ನಾಲಿಗೆ ಇದೆ ಅಂತ ಹರಿಬಿಡಬಾರದು. ಗೂಗಲ್ ಸುಂಕೇಶ್ವರ ಹಾಳ್ ರಸ್ತೆ ಕಾಮಗಾರಿಗೆ ಪಿಡಬ್ಲೂಡಿ ಇಲಾಖೆಗೆ ಹೇಳಿದ್ದೇನೆ. ಇವರಿಂದ ನಾನು ಕೇಳಿಸಿಕೊಳ್ಳಬೇಕಾಗಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಹರಿಹಾಯ್ದರು.

ಇನ್ನು ಬಿಜೆಪಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದು, ಇವರು ಮಂತ್ರಿ ಆಗಿರಲಿಲ್ಲವೇ ಆವಾಗೇನೂ ಮಾಡಿದ್ರು..? ಈಗ ದಂಡು ಕರೆದುಕೊಂಡು ಯುದ್ದ ಮಾಡ್ತಾರಾ..? ಬಿಎಸ್‌ವೈಗೆ ಎಷ್ಟೋ ಸಲ ಬೈದ್ರು, ನನಗೆ ಎಷ್ಟೋ ಸಲ ಹೊಗಳಿದ್ರು. ದೇವದುರ್ಗ ಐಬಿಗೆ ಬಿಎಸ್ ವೈ ಕರೆದುಕೊಂಡು ಬಂದು ಡ್ರಾಮಾ ಮಾಡಿದ್ರು. ಬಿಜೆಪಿ ಅಧಿರದಲ್ಲಿದ್ದಾಗ ರಾಮನಗರಕ್ಕೆ ಎಷ್ಟು ಅನುದಾನ ನೀಡಿದ್ರು. ಶಿವಮೊಗ್ಗಕ್ಕೆ ಸಾಕಷ್ಟು ಅನುದಾನ ನೀಡಿದ್ದೇವೆ ಎಂದರು.

ಇನ್ನು ನಾನು ಗ್ರಾಮ ವಾಸ್ತವ್ಯಕ್ಕೆ ಮಾತ್ರ ಬಂದಿಲ್ಲ. ಗ್ರಾಮ ವಾಸ್ತವ್ಯ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದೇನೆ. ಸುಮಾರು 3000 ಕೋಟಿ ರೂಪಾಯಿ ಸಿದ್ದಪಡಿಸಿದ್ದೇವೆ. ರಾಯಚೂರು ವಿಶ್ವವಿದ್ಯಾಲಯ ಆರಂಭಕ್ಕೆ ಸುಗ್ರಿವಾಜ್ಞೆ ಹೊರಡಿಸಿದ್ದೇವೆ. ರಾಜ್ಯಪಾಲರು ಈ ಬಗ್ಗೆ ಆಕ್ಷೇಪ ವ್ಯಕ್ಯಪಡಿಸಿದ್ದಾರೆ. ಈ ಬಗ್ಗೆ ಇನ್ನೊಮ್ಮೆ ಯತ್ನಿಸುತ್ತೇವೆ ಎಂದಿದ್ದಾರೆ.

ಅಲ್ಲದೇ, ಬಸ್ ದರ ಏರಿಕೆ ಪ್ರಸ್ತಾವನೆ ಇತ್ತು ಆದರೆ ಬಸ್ ಸೌಕರ್ಯಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲೆಯ ನೀರಾವರಿ ಸೌಲಭ್ಯಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ತುಂಗಭದ್ರಾ ಡ್ಯಾಂನ ಹೂಳು ತೆಗೆಯುವ ಬದಲಾಗಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಿದ್ದವಾಗುತ್ತದೆ. ಎನ್ ಆರ್ ಬಿಸಿ ಆಧುನಿಕರಣಕ್ಕೆ ಅನುದಾನ ನೀಡಲಾಗಿದೆ ಎಂದರು.

Recommended For You

About the Author: TV5 Kannada

Leave a Reply

Your email address will not be published. Required fields are marked *