ಕೊಡವ ಸಾಂಗ್‌ಗೆ ಸ್ಟೆಪ್ ಹಾಕಿದ ರಚ್ಚು-ದಚ್ಚು, ತಾನ್ಯಾ-ನಿರೂಪ್, ಜನ್ಯಾ-ದೇವರಾಜ್

ಜೋರು ಪಾಟ್ಟು… ಅಮರ್​ ಚಿತ್ರದ ಸೂಪರ್ ಹಿಟ್ ಸಾಂಗ್.. ಸಿನಿಮಾ ರಿಲೀಸ್‌ಗೂ ಮೊದ್ಲೆ ಜೋರು ಪಾಟ್ಟು ಲಿರಿಕಲ್ ವಿಡಿಯೋ ಬೇಜಾನ್ ಸೌಂಡ್ ಮಾಡಿತ್ತು.. ಆ ಸೌಂಡ್​​​ನ ಮತ್ತಷ್ಟು ಹೆಚ್ಚಿಸೋಕ್ಕೆ ಇದೀಗ ವಿಡಿಯೋ ಸಾಂಗ್ ರಿವೀಲ್ ಆಗಿದೆ.. ಗಜ ಚಿತ್ರ ಸೂಪರ್ ಹಿಟ್ ಸಾಂಗ್​​​​ನ ನೆನಪಿಸೋ ಈ ಬೊಂಬಾಟ್​​ ನಂಬರ್​​ಗೆ ದಚ್ಚು-ರಚ್ಚು ಬಿಂದಾಸ್​​ ಸ್ಟೆಪ್ಸ್​​​ ಹಾಕಿದ್ದಾರೆ..

ಯಂಗ್​ ರೆಬಲ್ ಸ್ಟಾರ್ ಅಭಿಷೇಕ್​ ಅಂಬರೀಶ್ ಮತ್ತು ತಾನ್ಯಾ ಹೋಪ್​​ ಜೋಡಿಯ ರೊಮ್ಯಾಂಟಿಕ್ ಮ್ಯೂಸಿಕಲ್ ಎಂಟ್ರಟ್ರೈನರ್ ಅಮರ್.. ಮೈನಾ ಖ್ಯಾತಿಯ ನಾಗಶೇಖರ್ ನಿರ್ದೇಶನದ ಅಮರ್​​ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣ್ತಿದೆ.. ಈ ಸಿನಿಮಾ ಮ್ಯೂಸಿಕ್​ ಆಲ್ಬಮ್​​ ಕೂಡ ಸೂಪರ್ ಹಿಟ್ ಆಗಿದೆ.. ಅದ್ರಲ್ಲೂ ಜೋರು ಪಾಟ್ಟು ಸಾಂಗ್ ಸೌಂಡ್​​ ಸ್ವಲ್ಪ ಜಾಸ್ತಿನೇಯಿದೆ..

ಸಖತ್ ಸೌಂಡ್ ಮಾಡ್ತಿದೆ ಡಿ ಬಾಸ್- ಅಭಿ ಜೋರು ಪಾಟ್ಟು
ಬೊಂಬಾಟ್​​​ ಸಾಂಗ್.. ಬಿಂದಾಸ್​​​ ಸ್ಟೆಪ್ಸ್​​​​​.. ಸಿಂಪ್ಲಿ ಸೂಪರ್
ಮ್ಯಾಜಿಕಲ್ ಕಂಪೋಸರ್​​ ಅರ್ಜುನ್ ಜನ್ಯಾ ಮೈ ಕುಣಿಸೋ ಟ್ಯೂನು, ಕಿರಣ್ ಕಾಬೇರಪ್ಪ ಕ್ಯಾಚಿ ಲಿರಿಕ್ಸ್​​ನ ಜೋರು ಪಾಟ್ಟು ಸಾಂಗ್​​​ ಅಮರ್ ಆಗಮನಕ್ಕೂ ಮೊದ್ಲೆ ದೊಡ್ಡದಾಗಿ ಸದ್ದು ಮಾಡಿತ್ತು.. ಅದ್ರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಡಿನಲ್ಲಿ ಕುಣಿದಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.. ಇದೀಗ ಆ ವೀಡಿಯೋ ಸಾಂಗ್ ಹೊರ ಬಂದಿದೆ..

ಸ್ಟೈಲಿಶ್​ ಲುಕ್​​ನಲ್ಲಿ ಕುಣಿದು ರಂಗೇರಿಸಿದ ದಚ್ಚು- ರಚ್ಚು
ಕೊಡವ ಸ್ಟೈಲ್​​ ಹಾಡಿಗೆ ಅಭಿಮಾನಿಗಳು ಕ್ಲೀನ್​ ಬೋಲ್ಡ್
ಅಮರ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ಮತ್ತು ನಾಯಕಿ ತಾನ್ಯಾ ಹೋಪ್​​ ಎಂಗೇಜ್ಮೆಂಟ್​​ ಪಾರ್ಟಿಯಲ್ಲಿ ಈ ಡ್ಯಾನ್ಸಿಂಗ್​ ನಂಬರ್ ಬರುತ್ತೆ.. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಮಲ್ಟಿ ಮಿಲೇನಿಯರ್​ ಪಾತ್ರ ಮಾಡಿದ್ದು, ನಿರೂಪ್​ ಭಂಡಾರಿ ಸಹೋದರನಾಗಿ ದರ್ಶನ ಕೊಟ್ಟಿದ್ದಾರೆ.. ಸಹೋದರನ ಎಂಗೇಜ್ಮೆಂಟ್​​ನಲ್ಲಿ ದಚ್ಚು ಕುಣಿದು ರಂಗೇರಿಸ್ತಾರೆ.. ದರ್ಶನ್​​- ನಿರೂಪ್​​ ಸ್ಟೆಪ್ಸ್​​ಗೆ ರಚಿತಾ ರಾಮ್​​, ಡೈನಾಮಿಕ್ ಸ್ಟಾರ್ ದೇವರಾಜ್​ ಮತ್ತು ನಾಯಕಿ ತಾನ್ಯಾ ಹೋಪ್​ ಸಾಥ್ ಸಿಕ್ಕಿದೆ..

ಗಜ ಡ್ಯಾನ್ಸಿಂಗ್ ನಂಬರ್ ನೆನಪಿಸಿದ ಜೋರು ಪಾಟ್ಟು
ಜೋರು ಪಾಟ್ಟು 11 ವರ್ಷಗಳ ಹಿಂದೆ ಬಂದ ಗಜ ಚಿತ್ರದ ಬಂಗಾರಿ ಯಾರೇ ನೀ ಬುಲ್​ ಬುಲ್​ ಸಾಂಗ್​​ನ ನೆನಪಿಸ್ತಿದೆ.. ಸೂಪರ್ ಹಿಟ್ ಗಜ ಚಿತ್ರದಲ್ಲಿ ಬಂಗಾರಿ ಜೊತೆ ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ರು.. ಅದೇ ರೀತಿ ಜೋರು ಪಾಟ್ಟು ಸೌಂಟ್ ಮಾಡ್ತಿದೆ..
ಡಿಸ್ಕೋಥೆಕ್​ ಮಾದರಿಯ ಕಲರ್​ಫುಲ್ ಸೆಟ್​​​ನಲ್ಲಿ ಅಷ್ಟೆ ಸೊಗಸಾಗಿ ಸಾಂಗ್​ ಶೂಟ್ ಮಾಡಲಾಗಿದೆ.. ಮ್ಯೂಸಿಕ್ ಡೈರೆಕ್ಟರ್ ಜೆಸ್ಸಿ ಗಿಫ್ಟ್ ವಾಯ್ಸ್​​​​​ ಜೋರು ಪಾಟ್ಟು ಸಾಂಗಿನ ಮತ್ತೊಂದು ಹೈಲೆಟ್​.. ಡ್ಯಾನ್ಸ್ ಮಾಸ್ಟರ್​​ ಧನಂಜಯ ಪರ್ಫೆಕ್ಟ್​​ ಆಗಿ ಡ್ಯಾನ್ಸ್ ಕಂಪೋಸ್​​ ಮಾಡಿದ್ದು, ಕ್ಯಾಮರಾಮನ್ ಸತ್ಯಾ ಹೆಗಡೆ ಇಡೀ ಹಾಡನ್ನ ಅಷ್ಟೆ ಸೊಗಸಾಗಿ ಸೆರೆಹಿಡಿದಿದ್ದಾರೆ..

ಅಮರ್​ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿರೋವಾಗ್ಲೇ ಜೋರು ಪಾಟ್ಟು ವೀಡಿಯೋ ಸಾಂಗ್ ಬಂದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಫ್ಯಾನ್ಸ್ ಫೇವರಿಟ್ ಸಾಂಗ್ಸ್ ಲಿಸ್ಟ್ ಸೇರ್ಕೊಂಡಿದೆ..ಯೂಟ್ಯೂಬ್​​ನಲ್ಲಿ ಭರ್ಜರಿ ರೆಸ್ಪಾನ್ಸ್​​​ ಸಿಕ್ಕಿದ್ದು ರಿಪೀಟ್​ ಮೋಡ್​​ನಲ್ಲಿ ಗುನುವಂತಾಗಿದೆ..
ಎಂಟ್ರಟ್ರೈನ್​ಮೆಂಟ್ ಬ್ಯೂರೋ,ಟಿವಿ5

 

ಕೃಪೆ: ಆನಂದ್ ಆಡಿಯೋ

Recommended For You

About the Author: TV5 Kannada

Leave a Reply

Your email address will not be published. Required fields are marked *