ಒಂದು ತಿಂಗಳೊಳಗೆ ಪರಿಹಾರ ಕೊಡದಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ ಡಿಸಿಎಂಗೆ ಎಚ್ಚರ

ಬೆಂಗಳೂರು: ಎರಡು ತಿಂಗಳು ಒಳಗೆ ಮಾಡದೇ ಇದ್ದಲ್ಲಿ ಎಲ್ಲ ಶಾಸಕರು ರಾಜೀನಾಮೆ ಬಿಸಾಕುತ್ತೇವೆ ಎಂದು ವಾಲ್ಮೀಕಿ ಸಮುದಾಯದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

ನಗರದ ಫ್ರೀಡಂ ಪಾರ್ಕ್​ನಲ್ಲಿ ಮಂಗಳವಾರ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಇನ್ನೂ ಒಂದು ತಿಂಗಳು ಗಡುವು ನೀಡುತ್ತೇವೆ. ಒಟ್ಟು ಎರಡು ತಿಂಗಳ ಕಾಲಾವಕಾಶ ಕೊಡೋಣ ಎಂದು ಅವರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡರು.

ಸದ್ಯ ಅಷ್ಟರಲ್ಲಿ ಸಮಸ್ಯೆಗೆ ಸರಿಯಾದ ಪರಿಹಾರ ಸಿಗದಿದ್ರೆ, ಸಮುದಾಯದ ಎಲ್ಲ ಶಾಸಕರು, ಸಂಸದರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಶ್ರೀ ಪ್ರಸನ್ನಾನಂದ ಸ್ವಾಮಿಜಿ ಸರ್ಕಾರಕ್ಕೆ ಎಚ್ಚರಿಕೆ ರವಾನೆ ಮಾಡಿದರು.

ಇದಕ್ಕೂ ಮುಂಚೆ ಸರ್ಕಾರ ಇವತ್ತು ಮೂರು ತಿಂಗಳು ಟೈಮ್ ಕೇಳಿದೆ ಎಂದು ಪ್ರಸನ್ನಾನಂದ ಸ್ವಾಮೀಜಿ ಹೇಳ್ತಿದ್ದಂತೆ ಮೂರು ತಿಂಗಳಲ್ಲಿ ಸರ್ಕಾರವೇ ಸತ್ತು ಹೋಗುತ್ತದೆ ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು.

ಮೂರು ತಿಂಗಳ ಸಮಯ ಕೇಳಿದ ಸರ್ಕಾರಕ್ಕೆ ಒಪ್ಪದ ಸ್ವಾಮೀಜಿ ಮುಂದಿನ ತಿಂಗಳು 25ನೇ ತಾರೀಖು ಡೆಡ್ ಲೈನ್ ಫಿಕ್ಸ್​ ಮಾಡಲಾಗಿದೆ. ಅಷ್ಟರೋಳಗೆ ಪರಿಹಾರ ಕೊಡದೇ ಹೋದ್ರೇ ರಾಜ್ಯ ಹೊತ್ತಿ ಉರಿಯುತ್ತದೆ. ನಿಮ್ಮ ಮನೆಯ ಮುಂದೆಯೇ ಧರಣಿ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್​ ಅವರಿಗೆ ಸ್ವಾಮೀಜಿ ಗಡುವು ನೀಡದರು.

Recommended For You

About the Author: TV5 Kannada

Leave a Reply

Your email address will not be published. Required fields are marked *