ಸಂಸತ್​​ನಲ್ಲಿ ತೇಜಸ್ವಿ ಸೂರ್ಯ ಮಾತಿಗೆ ರೊಚ್ಚಿಗೆದ್ದ ಪ್ರಜ್ವಲ್ ರೇವಣ್ಣ..!

ನವದೆಹಲಿ: ರಾಜ್ಯದಲ್ಲಿ ಇರುವ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಸಂಸತ್​ನಲ್ಲಿ ಹೇಳಿದರು.

ದೆಹಲಿ ಸಂಸತ್​ನಲ್ಲಿ ಮಂಗಳವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ, 2009-2013ರ ವರೆಗೂ ಬಿಜೆಪಿ ಭ್ರಷ್ಟಾ ಆಡಳಿತ ನಡೆಸಿತ್ತು. ‘ಯಡಿಯೂರಪ್ಪ ಸರ್ಕಾರವಿದ್ದಾಗ ಭ್ರಷ್ಟಾಚಾರ ಹೆಚ್ಚಿತ್ತು’ ಎಂದ ಅವರು, ಐಎಂಎ ವಂಚನೆ ಬಗ್ಗೆಯೂ ಪ್ರಸ್ತಾಪಿಸಿದರು. ಸಂಸತ್​​ನಲ್ಲೇ ತೇಜಸ್ವಿ, ಪ್ರತಾಪ್​​​ ಸಿಂಹ ಇಬ್ಬರಿಗೂ ಪ್ರಜ್ವಲ್ ರೇವಣ್ಣ ಟಾಂಗ್ ಕೊಟ್ಟರು.

ಅಲ್ಲದೇ ರಾಜ್ಯದಲ್ಲಿ ಇರುವ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಇದೆ ಎಂದು ಹೇಳಿ ಸಂಸತ್​​ನಲ್ಲಿ ಇರುವವರನನ್ನ ದಾರಿತಪ್ಪಿಸುವ ಕೆಲಸ ಮಾಡಬೇಡಿ. ಕಾಂಗ್ರೆಸ್​ ಹಿರಿಯ ಮುಖಂಡ ರೋಷನ್​ ಬೇಗ್​ ಅವರ ಹೆಸರು ಐಎಂಎ ವಂಚನೆ ಆರೋಪದಲ್ಲಿ ಕೇಳಿ ಬಂದಾಕ್ಷಣ ಎಸ್​​ಐಟಿ ತನಿಖೆ ಹಂತದಲ್ಲಿ ಇರುವಾಗಲೇ ಅವರನ್ನು ಕಾಂಗ್ರೆಸ್​​ ಅಮಾನತು ಮಾಡಲಾಗಿದೆ ಎಂದು ಪ್ರಜ್ವಲ್​ ರೇವಣ್ಣ ಅವರು ತಮ್ಮ ಸರ್ಕಾರದ ಆಡಳಿತವನ್ನು ಸಮರ್ಥನೆ ಮಾಡಿಕೊಂಡರು.

ಇದಕ್ಕೂ ಮುಂಚೆ ಸಂಸತ್​ನಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಕರ್ನಾಟಕ ರಾಜ್ಯ ಅಭಿವೃದ್ಧಿ ಕಾಣದೇ ಸೊರಗಿ ಹೋಗಿದೆ. ನಮ್ಮ ರಾಜ್ಯ ಅದ್ಭುತವಾದ ಇತಿಹಾಸ ಮತ್ತು ಆಡಳಿತವನ್ನು ಈ ಹಿಂದೆ ಕೊಟ್ಟಿದೆ ಹಕ್ಕ-ಬುಕ್ಕ ವಿಜಯನಗರ ಸಾಮ್ರಾಜ್ಯ,  ಕೆಂಪೇಗೌಡ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್​, ಸರ್​ ಎಂ ಸರ್ ಎಂ ವಿಶ್ವೇಶ್ವರಯ್ಯ ಇವರುಗಳಂತ ಮಹನೀಯರು ಆಳ್ವಿಕೆ ಮಾಡಿದ ರಾಜ್ಯದಲ್ಲಿಂದು ಭಷ್ಟಾಚಾರ ತುಂಬಿದೆ ಎಂದು ಅವರು ಸಂಸತ್​ ಹೇಳಿದ್ದರು.

Recommended For You

About the Author: TV5 Kannada

Leave a Reply

Your email address will not be published. Required fields are marked *