ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಕೋಚ್​ ಗಢಗಢ..!

ಇಂಗ್ಲೆಂಡ್​​​: ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019, ಪಾಕಿಸ್ತಾನ ತಂಡವು ಟೀ ಇಂಡಿಯಾ ಮುಂದೆ ಸೋತು ಸುಣ್ಣವಾಗಿತ್ತು. ಭಾರತಕ್ಕೆ ಬದ್ಧವೈರಿ ಮಣಿಸಿದ ಸಂಭ್ರಮವಾದರೆ ಪಾಕಿಸ್ತಾನಕ್ಕೆ ನಡುಕು ಉಂಟಾಗಿದ್ದು ಸುಳ್ಳಾಲ್ಲ ಏಕೆಂದರೆ ಪಂದ್ಯ ಸೋಲುತ್ತಿದ್ದಂತೆ ಪಾಕ್​ ನೆಟ್ಟಿಗರು ತಮ್ಮ ಆಟಗಾರರ ವಿರುದ್ಧ ರೊಚ್ಚಿಗೆದ್ದರು.

ಸದ್ಯ ಈ ವಿಷಯ ಹಳೆದು ಆದರೆ ಪಾಕಿಸ್ತಾನ ಕೋಚ್ ಮಿಕ್ಕಿ ಆರ್ಥರ್ ಈಗ​ ಹೇಳಿರುವ ಮಾತು ಎಲ್ಲೆಡೆ ಸಖತ್​ ಸೌಂಡ್​ ಮಾಡುತ್ತಿದೆ. ಹೌದು, ಭಾರತ ತಂಡ ಪಾಕಿಸ್ತಾನವನ್ನು 89ರನ್​ಗಳಿಂದ(D/L) ಸೋಲಿಸಿತ್ತು. ಈ ವೇಳೆ ಪಾಕ್​ ತಂಡದ ವಿರುದ್ಧ ಟೀಕೆಗಳು ದೊಡ್ಡ ಸದ್ದು ಮಾಡಿತ್ತು. ಇದು ಪಾಕಿಸ್ತಾನಕ್ಕೆ ಭಯ ಹುಟ್ಟಿಸಿತ್ತು.

ಇನ್ನು ಮಿಕ್ಕಿ ಆರ್ಥರ್​ ಬೇರೆ ಟೀಂ ಇಂಡಿಯಾ ವಿರುದ್ಧ ಸೋತ ಮೇಲೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ ಎಂದು ದಕ್ಷಿಣ ಆಫ್ರಿಕಾ ಪಂದ್ಯ ಆಡುವ ಮುನ್ನ ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾರೆ.

ಅಲ್ಲದೇ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಾಕಿಸ್ತಾನ ಗೆದ್ದು ಬೀಗಿದ್ದು ಸೆಮೀ ಫೈಲ್​ ಪ್ರವೇಶವನ್ನು ಜೀವಂತವಾಗಿಸಿಕೊಂಡಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *