‘ಹಾಸನ, ಮಂಡ್ಯಕ್ಕೆ ಅನುದಾನ ಕೊಡ್ತೀರಿ, ಹೈ.ಕರ್ನಾಟಕಕ್ಕೆ ಮಲಗೋಕ್ಕೆ ಮಾತ್ರ ಬರ್ತೀರಾ..?’

ರಾಯಚೂರು: ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಬಗ್ಗೆ ರಾಯಚೂರಿನ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ್ ಮತ್ತೆ ಗರಂ ಆಗಿದ್ದಾರೆ.

ಗ್ರಾಮ ವಾಸ್ತವ್ಯ ಅನ್ನೋದು ಕೇವಲ ನಾಟಕೀಯ ಆಗಬಾರದು. ಮುಖ್ಯಮಂತ್ರಿ ಅವರ ಗ್ರಾಮ ವಾಸ್ತವ್ಯಕ್ಕೆ ಸ್ವಾಗತ ಮಾಡ್ತೇವೆ ಎಂದ ಶಿವಾನಂದ್ ನಾಯ್ಕ್, ಹಾಸನ, ಚನ್ನಪಟ್ಟಣ, ರಾಮನಗರ, ಮಂಡ್ಯಕ್ಕೆ ಸಿಎಂ ಸೀಮಿತವಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕುಮಾರಸ್ವಾಮಿ ಅವರ ಕ್ಷೇತ್ರ, ಅವರ ಮಡದಿಯ ಕೇತ್ರಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ. ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿ ಇದ್ದಾರೆ. ಹಾಸನ, ಮಂಡ್ಯ, ರಾಮನಗರಕ್ಕೆ ಸಾವಿರಾರು ಕೋಟಿ ಅನುದಾನ ಕೊಡ್ತೀರಿ. ಹೈದ್ರಾಬಾದ್ ಕರ್ನಾಟಕದಲ್ಲಿ ಮಲಗೋಕೆ ಬರ್ತೀರಾ? ಈ ರೀತಿ ಆಗಬಾರದು ಎಂದು ಖಡಕ್ ಆಗಿ ಮಾತನಾಡಿದ್ದಾರೆ.

ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಬೃಹತ್ ಪಾದಯಾತ್ರೆ ಮಾಡ್ತಿದ್ದೇವೆ. ದೇವದುರ್ಗ ತಾಲೂಕಿನ ಗೂಗಲ್‌ನಿಂದ ಕರೇಗುಡ್ಡ ಗ್ರಾಮದವರೆಗೂ 30ಸಾವಿರ ಜನರೊಂದಿಗೆ ಪಾದಯಾತ್ರೆ ಮಾಡ್ತೇವೆ. ಕರೇಗುಡ್ಡ ಗ್ರಾಮ ವಾಸ್ತವ್ಯದಲ್ಲಿ ಸಿಎಂಗೆ ಮನವಿ ಮಾಡ್ತೇವೆ ಎಂದಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *