ವಂಡರ್ ಲಾನಲ್ಲಿ ಅವಘಡ: ಆಟವಾಡುವಾಗ ಮಗುಚಿದ ಯಂತ್ರ

ರಾಮನಗರ: ವಂಡರ್‌ಲಾನಲ್ಲಿ ಅವಘಡ ಸಂಭವಿಸಿ, ರೋಲರ್ ಕ್ರಸರ್ ಮುಗುಚಿ ನಾಲ್ವರಿಗೆ ಗಾಯವಾದ ಘಟನೆ ರಾಮನಗರದಲ್ಲಿ ನಡೆದಿದೆ.

ಐವರು ಯುವಕರು ರಾಮನಗರ ತಾಲೂಕಿನ ಬಿಡದಿಯ ವಂಡರ್‌ ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ತೆರಳಿದ್ದು, ಈ ವೇಳೆ ರೋಲರ್‌ನಲ್ಲಿ ಆಟವಾಡಲು ಹೋದಾಗ, ಯಂತ್ರ ತಿರುಗುವ ವೇಳೆ ರೋಲರ್ ಮಗುಚಿದೆ.

ಈ ವೇಳೆ ಐವರು ಯುವಕರ ಕಾಲು ರೋಲರ್‌ನಡಿ ಸಿಲುಕಿದ್ದು, ನಾಲ್ಕೈದು ನಿಮಿಷಗಳ ಕಾಲ ಯುವಕರು ನರಳಾಡುವಂತಾಯಿತು. ಇನ್ನು ಗಾಯಗೊಂಡ ಯುವಕರಿಗೆ ಅಲ್ಲಿನ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸಿ, ರಾಜಿಸಂಧಾನ ಮಾಡಿಕೊಂಡಿದೆ.

ಕಳೆದ ಸೋಮವಾರ ವಂಡರ್ ಲಾ ನಲ್ಲಿ ಈ ಘಟನೆ ನಡೆದಿದ್ದು, ಯುವಕರು ಯಂತ್ರದಡಿ ನರಳಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Recommended For You

About the Author: Dayakar

Leave a Reply

Your email address will not be published. Required fields are marked *