ಕ್ಲಾಸ್​ ರೂಂನಲ್ಲಿ ಕುಳಿತ್ತಿದ್ದಾಗ ಇದ್ದಕ್ಕಿದಂತೆ ದಬ್​ ಅಂತ ಸೌಂಡ್​​ ಬಂತು ಮುಂದೇನಾಯ್ತು!

ಮಹಾರಾಷ್ಟ್ರ: ಶಾಲೆ ವಿದ್ಯಾರ್ಥಿ ಕ್ಲಾಸ್​ ರೂಂನಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗ ಸಿಮೆಂಟ್​ ಗೋಡೆ ಕುಸಿದ ಪರಿಣಾಮ ಮೂರು ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯವಾಗಿರುವ ಘಟನೆಯೊಂದು ನಡೆದಿದೆ.

https://platform.twitter.com/widgets.js
ಮಹಾರಾಷ್ಟ್ರ ಮೂಲದ ಉಲ್ಹಾಸ್‌ ನಗರ ಜುಲೇಲಾಲ್ ಶಾಲೆಯಲ್ಲಿ ನಿನ್ನೆ ಈ ಘಟನೆ ಸಂಭವಿಸಿದೆ. ಸಿಮೆಂಟ್ ಬ್ಲಾಕ್​ ಸಿಡಿಯುತ್ತಿದಂತೆ ಶಾಲೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಗಾಬರಿಯಾಗಿ ಕ್ಲಾಸ್​ ರೂಂ ಬಿಟ್ಟು ಹೊರ ಹೊರಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಮೂರು ಜನ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಉಲ್ಹಾಸ್‌ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *