ಮೂವರು ಮಕ್ಕಳನ್ನ ಕೊಂದು, ತಾನೂ ನೇಣಿಗೆ ಶರಣಾದ ತಾಯಿ..!

ಕೊಪ್ಪಳ: ಕೌಟುಂಬಿಕ ಕಲಹ ಹಿನ್ನೆಲೆ, ಮೂವರು ಮಕ್ಕಳನ್ನು ಹತ್ಯೆಗೈದ ತಾಯಿ, ತಾನೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳದ ಕುಕನೂರು ತಾಲೂಕು ಯರೇಹಂಚಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣವೆಂದು ಅಂದಾಜಿಸಲಾಗಿದೆ. 7 ವರ್ಷದ ಅಕ್ಷತಾ, 4 ವರ್ಷದ ಕಾವ್ಯ, 2 ವರ್ಷದ ಮಗು ನಾಗರಾಜ್‌ನನ್ನು ಕೊಂದ ಯಲ್ಲಮ್ಮ, ಕೊನೆಗೆ ತಾನೂ ಸಾವಿಗೆ ಶರಣಾಗಿದ್ದಾಳೆ.

ಪತಿ ಉಮೇಶ್ ಹೊರಗಡೆ ಮಲಗಿದ್ದ ಸಂದರ್ಭದಲ್ಲಿ, ಹಿರಿಯ ಮಗಳನ್ನು ಕುಡಿಯುವ ನೀರಿನ ಹಂಡೆಯೊಳಗೆ ಮುಳುಗಿಸಿ ಹತ್ಯೆ ಮಾಡಿದ್ದು, ಎರಡನೇ ಮಗನನ್ನು ಬಕೇಟ್‌ನಲ್ಲಿ ಮತ್ತು ಮೂರನೇ ಮಗಳನ್ನು ನೀರಿನ ಟ್ಯಾಂಕಿನಲ್ಲಿ ಮುಳಗಿಸಿ ಹತ್ಯೆಗೈಯ್ಯಲಾಗಿದೆ.

ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿ ಉಮೇಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *