ಸಂಸತ್​ ಭವನದ ಮುಂದೆ ಕೊಡವ ಸ್ಟೈಲ್​ ನಲ್ಲಿ ಸಂಸದ ಪ್ರತಾಪ್​ ಸಿಂಹ ಪ್ರತ್ಯಕ್ಷ..!

ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತ ಹೆಚ್ಚು ಸ್ಥಾನ ಗಳಿಸಿ ಅಧಿಕಾರದ ಗದ್ದುಗೆಗೆ ಏರಿತ್ತು. ಸೋಮವಾರ ಸಂಸತ್​ ಭವನದಲ್ಲಿ ದೇಶದ ಎಲ್ಲ ಹೊಸ ಸಂಸದರು ಪ್ರಮಾಣ ವಚನ ಸ್ವೀಕಾರ ಮಾಡುವ ಕಾರ್ಯಕ್ರಮ ನಡೆಯಿತ್ತು.

ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಸಂಸದರು ಸಂಸತ್​ನಲ್ಲಿ ಸೇರಿ ತಮ್ಮ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇದೇ ವೇಳೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಉಡುಗೆಯಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿ ಘಟನೆ ನಡೆದಿದೆ.

ಎರಡನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಅವರು ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಹೆಚ್ಚು ಗಮನ ಸೆಳೆಯಿತ್ತು. ಸೊಂಟದ ಬಳಿ ಕೊಡಗಿನ ವೀರರ ಪ್ರತಿಕ ಖಡ್ಗವನ್ನು ತೊಟ್ಟು ಸಂಸತ್ ಭವನ ಪ್ರವೇಶ ಮಾಡಿದರು.

ಅಷ್ಟೇ ಅಲ್ಲದೇ ತಮ್ಮ ಆತ್ಮೀಯರೊಂದಿಗೆ ದೆಹಲಿಯ ಸಂಸತ್​ ಭವನದ ಮುಂಭಾಗ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಪೋಟೋಗೆ ಪೋಸ್ ಕೊಟ್ಟರು.

Recommended For You

About the Author: TV5 Kannada

Leave a Reply

Your email address will not be published. Required fields are marked *