ಹೇಗೆ ಹೊಸ ಹೊಸ ಸ್ಟಂಟ್ಸ್ ಮಾಡ್ತಾರೆ ಗೊತ್ತಾ ರಶ್ಮಿಕಾ ಮಂದಣ್ಣ..?

ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹವಾ ಸಿಕ್ಕಾಪಟ್ಟೆ ಜೋರಾಗಿದೆ.. ಟಾಲಿವುಡ್, ಕಾಲಿವುಡ್ ಸೂಪರ್ ಸ್ಟಾರ್​ಗಳ ಸೂಪರ್ ಸಿನಿಮಾಗಳಿಗೆ ರೋಶ್​​, ನಾಯಕಿಯಾಗಿ ಆಯ್ಕೆಯಾಗಿ ಸೌಂಡ್ ಮಾಡ್ತಿದ್ದಾರೆ.. ಇನ್ನು ರಶ್ಮಿಕಾ ಮಾಡ್ತಿರೋ ಸ್ಟಂಟ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗ್ತಿದೆ.. ಇದನ್ನೆಲ್ಲಾ ನೋಡ್ತಿದ್ರೆ, ಸಾನ್ವಿ ಲೇಡಿ ಬಾಂಡ್​ ಆಗ್ತಿದ್ದಾರಾ ಅನ್ನೋ ಅನುಮಾನ ಮೂಡ್ತಿದೆ..

ರಶ್ಮಿಕಾ ‘ಲೇಡಿ ಬಾಂಡ್’ ಆಗೋಕೆ ಹೊರಟಿರೋದ್ಯಾಕೆ..?!
ಸಿಕ್ಕಾಪಟ್ಟೆ ವೈರಲ್ಲಾಗಿದೆ ರೋಶ್ ಸ್ಟಂಟ್ಸ್ ವೀಡಿಯೋಸ್
ಸದಾ ಕಾಂಟ್ರೋವರ್ಸಿ, ಗಾಸಿಪ್​ಗಳಿಂದ ಸೌಂಡ್ ಮಾಡೋ ರಶ್ಮಿಕಾ ಮಂದಣ್ಣ ಸದ್ಯಕ್ಕೆ ತಮ್ಮ ವರ್ಕ್​ಔಟ್​ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.. ರಶ್ಮಿಕಾ ಮಂದಣ್ಣ ವರ್ಕ್​ಔಟ್ ಮಾಡ್ತಿರೋ ವೀಡಿಯೋಸ್​ ಅವ್ರ ಫ್ಯಾನ್ಸ್​ ಸೋಷಿಯಲ್ ಮೀಡಿಯಾ ಪೇಜ್​ಗಳಲ್ಲಿ ಚಕ್ಕರ್ ಹೊಡೀತಿದೆ.. ಕೆಲವರು ರೋಶ್​​​ ಜಿಮ್ಯಾಸ್ಟಿಕ್ ಸ್ಟೈಲ್ ಸ್ಟಂಟ್ಸ್ ನೋಡಿ ಹುಬ್ಬೇರಿಸಿದ್ದಾರೆ..

ನಟಿಯರಿಗೆ ಬ್ಯೂಟಿ, ಫಿಟ್ನೆಸ್​​​ ಎಷ್ಟು ಮುಖ್ಯ ಅನ್ನೋದು ಗೊತ್ತೇಯಿದೆ.. ಕೊಡಗಿನ ಕುವರಿ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.. ಜಿಮ್​​​ನಲ್ಲಿ ಬೆವರಿಳಿಸೋದು ಗೀತಾಗೆ ಹೊಸತೂ ಅಲ್ಲ.. ಆದ್ರೆ, ಡಿಯರ್ ಕಾಮ್ರೇಡ್ ಚಿತ್ರದ ಪಾತ್ರಕ್ಕಾಗಿ ಕೊಂಚ ಹೆಚ್ಚೇ ವರ್ಕ್​ಔಟ್ ನಡೆಸಿದಂತೆ ಕಾಣ್ತಿದೆ.. ವಿಜಯ್ ದೇವರಕೊಂಡ ನಟನೆಯ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ರೋಶ್, ಕ್ರಿಕೆಟ್ ಆಟಗಾರ್ತಿಯಾಗಿ ಬಣ್ಣ ಹಚ್ಚಿದ್ದಾರೆ.. ಪಾತ್ರಕ್ಕಾಗಿ ಫಿಟ್ ಅಂಡ್ ಫೈನ್ ಆಗಿರೋಕ್ಕೆ ರಶ್ಮಿಕಾ ಮಂದಣ್ಣ ನಾನಾ ಬಗೆಯ ವರ್ಕ್​ಔಟ್ ಟ್ರೈ ಮಾಡಿದ್ದಾರೆ..

ಜಿಮ್ಯಾಸ್ಟಿಕ್ ಮಾದರಿಯ ಸ್ಟಂಟ್​​ನ ಕೂಡ ರಶ್ಮಿಕಾ ಮಾಡೋದನ್ನ ಕಲಿತಿದ್ದಾರೆ.. ಸದ್ಯ ಸಾನ್ವಿಯ ಬ್ಯಾಕ್​ಫ್ಲಿಪ್ ವೀಡಿಯೋ ವೈರಲ್ಲಾಗಿದೆ.

ರಶ್ಮಿಕಾ ಮಂದಣ್ಣ ರೀತಿಯಲ್ಲೇ ಇತ್ತೀಚೆಗೆ ಕಬಾಲಿ ಬೆಡಗಿ ಧನ್ಸಿಕಾ ಕೂಡ ಇಂತದ್ದೇ ಬ್ಯಾಕ್​ ಡೈವ್ ಮಾಡಿ ವೀಡಿಯೋ ಶೇರ್ ಮಾಡಿದ್ರು.

ಇನ್ನು ರಶ್ಮಿಕಾ ಚಿತ್ರಗಳ ಬಗ್ಗೆ ಹೇಳೋದಾದ್ರೆ, ಸರಿಲೇರು ನಿಕೇವ್ವರು, ಭೀಷ್ಮ, ಸೇರಿದಂತೆ ಒಂದೆರಡು ತೆಲುಗು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.