‘ರಾಜ್ಯ ರಾಜಕಾರಣ ಮಲೀನವಾಗಿದೆ ಶುದ್ಧೀಕರಣದ ಅಗತ್ಯವಿದೆ’ – ಹೆಚ್​ ವಿಶ್ವನಾಥ್

ಕೊಡಗು: ರಾಜ್ಯ ರಾಜಕಾರಣ ಮಲೀನವಾಗಿದೆ. ರಾಜಕಾರಣವನ್ನು ಶುದ್ಧಿ ಮಾಡಬೇಕಾಗಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್ ವಿ.ವಿಶ್ವನಾಥ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯ ಕಾರಣವನ್ನು ಶುದ್ಧಿ ಮಾಡಬೇಕಾಗಿದೆ ಈ ಕುರಿತು ಎಂ.ಸಿ ನಾಣಯ್ಯ ಅವರು ಚರ್ಚಿಸಿದ್ದಾರೆ ಮುಂದೆ ಸಮಾನ ಮನಸ್ಕರು ಒಂದೆಡೆ ಸೇರಿ ಚರ್ಚಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇನ್ನು ನನ್ನ ರಾಜೀನಾಮೆ ಅಂಗೀಕಾರವಾಗಿಲ್ಲ ದೇವೇಗೌಡರು, ಕುಮಾರಸ್ವಾಮಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ರಾಜೀನಾಮೆ ಅಂಗೀಕಾರ ಮಾಡುವಂತೆ ಮನವೊಲಿಸುತ್ತಿದ್ದೇನೆ ಎಂದರು.

ಸದ್ಯ ಜೆಡಿಎಸ್​ ರಾಜಾಧ್ಯಕ್ಷ ಸ್ಥಾನಕ್ಕೆ ದತ್ತಣ್ಣ ಮತ್ತು ಮಧು ಬಂಗಾರಪ್ಪ ಅವರು ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.
ದಲಿತ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ವಿಚಾರವಾಗಿ ಮಾತನಾಡಿದ ಹೆಚ್. ವಿಶ್ವನಾಥ್, ಜೆಡಿಎಸ್​ ಕೋಟಾದಲ್ಲಿ

ಇನ್ನು ಎರಡು ಸ್ಥಾನ ಖಾಲಿ ಇವೆ ಅದರಲ್ಲಿ ಒಂದನ್ನು ದಲಿತರಿಗೆ ಮೊತ್ತೊಂದು ಅಲ್ಪಸಂಖ್ಯಾತರಿಗೆ ಕೊಡುವಂತೆ ಒತ್ತಾಯಿಸಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.