ಐಎಂಎ ಜುವೆಲರ್ಸ್​​ಗೂ ಜಮೀರ್ ಅಹ್ಮದ್​ ಖಾನ್​​ಗೂ ಇರುವ ಸಂಬಂಧದ ಬಗ್ಗೆ ಮಾತು..!

ಬೆಂಗಳೂರು: ಐಎಂಎ ಜುವೆಲರ್ಸ್​​ಗೆ ನಾನು ಸೈಟು ಮಾರಾಟ ಮಾಡಿದ್ದೇನೆ. 2017ರಲ್ಲಿ ನನ್ನ ಆಸ್ತಿ ಖರೀದಿಸಿ 9.36 ಕೋಟಿ ಕೊಟ್ಟಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್​ ಹೇಳಿದರು.

ವಿಕಾಸಸೌಧದಲ್ಲಿ ಬುಧವಾರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಸ್ತಿ ಖರೀದಿಸಿದ ಬಳಿಕ ಹಣವನ್ನು ಬ್ಯಾಂಕ್ ಖಾತೆಗೆ ಆರ್​​ಟಿಜಿಎಸ್ ಮಾಡಿದ್ದಾರೆ. ಜನತಾ ಕೋ-ಆಪರೇಟಿವ್ ಬ್ಯಾಂಕ್ ಖಾತೆಗೆ ಹಾಕಿದ್ದಾರೆ ಎಂದು ಅವರು ನುಡಿದರು.

ಇನ್ನು ಎಲ್ಲವೂ ಪಾರದರ್ಶಕವಾಗಿ ವಹಿವಾಟು ನಡೆದಿದೆ. ನನ್ನ ಮಾರಾಟ ಮಾಡಿದ ನಿವೇಶನವು ರಿಚ್​ಮಂಡ್ ಟೌನ್​ನಲ್ಲಿರುವುದು. ಅದು ನನ್ನ ಆಸ್ತಿ, ಐಎಂಎಗೆ ಮಾರಾಟ ಮಾಡಿದ್ದೇನೆ ಎಂದರು.

ಸದ್ಯ ನಾನು ಐಎಂಎ ಜುವೆಲರ್ಸ್ ಜೊತೆ ಯಾವುದೇ ವ್ಯವಹಾರ ಹೊಂದಿಲ್ಲ, ಜನರಿಗೆ ವಂಚನೆ ಮಾಡುತ್ತಾರೆ ಅಂತ ಗೊತ್ತಿರಲಿಲ್ಲ ಎಂದು ಸಚಿವ ಜಮೀರ್ ಅಹ್ಮದ್​​ ಖಾನ್​ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.