‘ಛೋಟಾ ಬಾಂಬೆ’ಯಲ್ಲಿ ಶೆಟ್ರ ಮಗಳ ‘ಯಶಸ್ವಿ’ನಿ ಪಯಣ ಶುರು

ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟುತ್ತೆ ಅನ್ನೋದಕ್ಕೆ ಇದು ಮತ್ತೊಂದು ಉತ್ತಮ ನಿದರ್ಶನ. ಪೋಷಕರಿಗೆ ಸಾಹಿತ್ಯ, ಕಲೆ, ನಟನೆ ಮೇಲೆ ಆಸಕ್ತಿಯಿದ್ರೆ ಮಕ್ಕಳು ಕೂಡ ಅದ್ರಿಂದ ಪ್ರಭಾವಿತರಾಗ್ತಾರೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಸದ್ಯ ಹಿರಿಯ ಪತ್ರಕರ್ತ, ಚಿತ್ರಸಾಹಿತಿಯ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟಕ್ಕೂ ಆ ಚೆಲುವೆ ಯಾರು..? ಆಕೆ ಯಾರ ಮಗಳು..? ಆ ಸಿನಿಮಾ ಯಾವ್ದು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.

ಯಜ್ಞಾ ಶೆಟ್ಟಿ, ಐಶಾನಿ ಶೆಟ್ಟಿ ರೀತಿ ಇಂಡಸ್ಟ್ರಿಗೆ ಹೊಸ ಶೆಟ್ಟಿ..!
ಸ್ಯಾಂಡಲ್​ವುಡ್​ಗೆ ಯಶಸ್ವಿನಿ ಶೆಟ್ಟಿ ಯಶಸ್ವಿ ಮೊದಲ ಹೆಜ್ಜೆ
ಕನ್ನಡ ಚಿತ್ರರಂಗದಲ್ಲಿ ಕಡಲ ತೀರ ಮಂಗಳೂರು & ಉಡುಪಿಯ ಶೆಟ್ಟರದ್ದೇ ದರ್ಬಾರು, ಕಾರುಬಾರು. ಯಜ್ಞಾ ಶೆಟ್ಟಿ, ಐಶಾನಿ ಶೆಟ್ಟಿ, ಅವಂತಿಕಾ ಶೆಟ್ಟಿ, ಶೀತಲ್ ಶೆಟ್ಟಿ, ರಿಶಬ್ ಶೆಟ್ಟಿ ಹೀಗೆ ಹತ್ತಾರು ಪ್ರತಿಭೆಗಳು ಚಿತ್ರರಂಗದಲ್ಲಿ ನಕ್ಷತ್ರಗಳಂತೆ ಹೊಳೆಯೋದ್ರ ಜೊತೆ ಚಿತ್ರರಂಗದ ಅಂದ-ಚೆಂದ ಹೆಚ್ಚಿಸಿದ್ದಾರೆ. ಇವ್ರೆಲ್ಲರಿಗೂ ಗ್ಯಾಂಗ್ ಲೀಡರ್ ರೀತಿ ರಕ್ಷಿತ್ ಶೆಟ್ಟಿ ಉತ್ತುಂಗದಲ್ಲಿದ್ದಾರೆ. ಇದೀಗ ಈ ಶೆಟ್ರ ಗ್ಯಾಂಗ್​ಗೆ ಹೊಸ ಪ್ರತಿಭೆಯೊಂದು ಸೇರಿಕೊಳ್ತಿದೆ. ಅದು ಯಶಸ್ವಿನಿ ಶೆಟ್ಟಿ.

ಈಗಷ್ಟೇ ಪಿಯುಸಿ ಮುಗಿಸಿ, ಪದವಿಗೆ ಕಾಲಿಟ್ಟಿರೋ ಈ ಚೆಲುವೆ ಬೆಂಗಳೂರಲ್ಲಿ ಸೆಟಲ್ ಆಗಿರೋ ಮಂಗಳೂರು ಮೂಲದ ಶೆಟ್ಟರ ಕುಟುಂಬದ ಕೂಸು. ಕನ್ನಡ ಮಾಧ್ಯಮ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿರೋ ಹಿರಿಯ ಮಾಧ್ಯಮಮಿತ್ರ ರಾಜೇಶ್ ಶೆಟ್ಟಿಯ ಮುದ್ದಿನ ಮಗಳು. ತಂದೆಯಂತೆ ಹಿನ್ನೆಲೆ ಧ್ವನಿ, ಸಾಹಿತ್ಯ, ಕಲೆ, ನಟನೆಯಲ್ಲಿ ಆಸಕ್ತಿ ಇದ್ದ ಯಶಸ್ವಿನಿ ಇದೀಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಅಂದಹಾಗೆ ಯಶಸ್ವಿನಿ ಶೆಟ್ಟಿಗೆ ಬರೀ ರಾಜೇಶ್ ಶೆಟ್ಟಿಯಷ್ಟೇ ಸ್ಫೂರ್ತಿ ಅಲ್ಲ, ಬ್ಯೂಟಿಷನ್ ಆಗಿರೋ ತಾಯಿ ವನಿತಾ ಬ್ರಮರಿ ಶೆಟ್ಟಿ ಕೂಡ ಗ್ಲಾಮರ್ ಮೇಲೆ ಒಲವು ಮೂಡೋಕ್ಕೆ ಪ್ರೇರಣೆ.

‘ಛೋಟಾ ಬಾಂಬೆ’ ಗ್ಯಾಂಗ್​ಸ್ಟರ್ ಚಿತ್ರದಲ್ಲಿ ಯಶಸ್ವಿನಿ..!!
ಹುಬ್ಬಳಿ ಭೂಗತಲೋಕದ ಕಥೆಗೆ ಯೂಸುಫ್ ಆ್ಯಕ್ಷನ್ ಕಟ್
ನಾನಾ ಪಾಟೇಕರ್ ಗರಡಿಯಿಂದ ಬಂದ ಯೂಸುಫ್ ಖಾನ್
ಹೂಬಳ್ಳಿಯಾಗಿದ್ದ ಹುಬ್ಬಳ್ಳಿ ಸದ್ಯ ಛೋಟಾ ಬಾಂಬೆ ಅಂತ್ಲೇ ಖ್ಯಾತಿ ಪಡೆದಿದೆ. ಬಾಂಬೆ ರೀತಿ ರೌಡಿಸಂ, ಗ್ಯಾಂಗ್ ವಾರ್​ಗಳಿಂದ ಸುದ್ದಿ ಆಗ್ತಿದೆ. ಹಾಗಾಗಿ ಹುಬ್ಬಳ್ಳಿ- ಧಾರವಾಡದ ಒಂದಷ್ಟು ರಿಯಲ್ ಇನ್ಸಿಡೆಂಟ್​ಗಳನ್ನೇ ಇಟ್ಟಿಕೊಂಡು ಯೂಸುಫ್ ಖಾನ್ ಛೋಟಾ ಬಾಂಬೆ ಹೆಸ್ರಲ್ಲಿ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಅಂದಹಾಗೆ NSDಯಿಂದ ಬಂದ ಯೂಸುಫ್ ಮುಂಬೈನಲ್ಲಿ ನಾನಾ ಪಾಟೇಕರ್ ಜೊತೆ ಕೆಲಸ ಮಾಡಿದ ಅನುಭವಿ ರಂಗಕರ್ಮಿ.

ಇನ್ನು ಚಿತ್ರದಲ್ಲಿ ಇಬ್ಬರು ನಾಯಕರು ಹಾಗೂ ಇಬ್ಬರು ನಾಯಕಿಯರಿದ್ದು, ಅದ್ರಲ್ಲಿ ಈಗಾಗ್ಲೇ ಗವಿಪುರ ಅನ್ನೋ ಕನ್ನಡ ಹಾಗೂ ಅಗ್ರಿಮೆಂಟ್ ಅನ್ನೋ ತೆಲುಗು ಸಿನಿಮಾ ಮಾಡಿಬಂದಿರೋ ಸೂರಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇವ್ರಿಗೆ ಯಶಸ್ವಿನಿ ಶೆಟ್ಟಿ ನಾಯಕಿಯಾಗಿ ಸಾಥ ಕೊಡ್ತಿದ್ದು, ಜರ್ನಲಿಸ್ಟ್ ಪಾತ್ರದಲ್ಲಿ ಮಿಂಚು ಹರಿಸಲಿದ್ದಾರೆ.

ಉತ್ತರ ಕರ್ನಾಟಕದ ಕಲಾವಿದರೇ ಈ ಸಿನಿಮಾದಲ್ಲಿ ಹೆಚ್ಚಾಗಿರಲಿದ್ದು, ಹುಬ್ಬಳ್ಳಿ ಶೈಲಿಯ ಭಾಷೆ ಸಿನಿಮಾದಲ್ಲಿರಲಿದೆಯಂತೆ. ಇನ್ನು ಸಿನಿಮಾ ಕೂಡ ಹುಬ್ಬಳ್ಳಿ- ಧಾರವಾಡದ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ತಯಾರಾಗಲಿದ್ದು, ಒಂದೊಳ್ಳೆ ಕಮರ್ಷಿಯಲ್ ಸಿನಿಮಾನ ಸಿನಿರಸಿಕರಿಗೆ ನೀಡೋ ಧಾವಂತದಲ್ಲಿದೆ ಚಿತ್ರತಂಡ. ಅದೇನೇ ಇರಲಿ, ಸಾಲು ಸಾಲು ಶೆಟ್ಟಿ ಪ್ರತಿಭೆಗಳಂತೆ ರಾಜೇಶ್ ಶೆಟ್ಟಿಯ ಮಗಳು ಯಶಸ್ವಿನಿ ಶೆಟ್ಟಿ ಕೂಡ ಚಿತ್ರರಂಗದಲ್ಲಿ ಒಳ್ಳೆ ನಟಿಯಾಗಿ ಶೈನ್ ಆಗ್ಲಿ ಅಂತ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *