ಕೆಜಿಎಫ್‌-2 ಸಿನಿಮಾ ಶೂಟಿಂಗ್ ನಡೀತಿರೋದೆಲ್ಲಿ ಗೊತ್ತಾ..?

ರಾಕಿ ಭಾಯ್ ಸದ್ದಿಲ್ಲದೆ ಸೈಲೆಂಟ್ ಆಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ. ಇಷ್ಟಕ್ಕೂ ಕೆಜಿಎಫ್ ಶೂಟಿಂಗ್ ಎಲ್ಲಿ ನಡೀತಿದೆ..? ಯಾರೆಲ್ಲಾ ಬಣ್ಣ ಹಚ್ಚಿದ್ದಾರೆ..? ಅದ್ರ ವಿಶೇಷತೆಗಳೇನು ಅಂತೀರಾ..? ಇಲ್ಲಿದೆ ನೋಡಿ ಪೂರ್ತಿ ಡಿಟೇಲ್ಸ್..

ಕೆಜಿಎಫ್‌ಗೂ ಮುನ್ನ ಲಲಿತ ಮಹಲ್​ನಲ್ಲಿ ರಾಕಿ ಭಾಯ್ ಹವಾ
ನಾಯಕಿ ರೀನಾ ಮನೆಯ ದೃಶ್ಯಗಳ ಸೆರೆಯಲ್ಲಿ ಟೀಂ ಬ್ಯುಸಿ
ಜಗಮೆಚ್ಚಿದ ಕೆಜಿಎಫ್ ಸೀಕ್ವೆಲ್​ನ ಶೂಟಿಂಗ್ ಶುರುವಾಗಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ರಾಕಿಂಗ್ ಸ್ಟಾರ್ ಯಶ್ ಶೂಟಿಂಗ್ ಅಖಾಡಕ್ಕಿಳಿದಿರೋದು ಯಾರಿಗೂ ಗೊತ್ತಿಲ್ಲ. ಸದ್ದಿಲ್ಲದೆ ಸೈಲೆಂಟ್ ಆಗಿ ಜೂನ್ 11ರಿಂದಲೇ ಯಶ್ ರಾಕಿಭಾಯ್ ಪಾತ್ರದ ಒಳಹೊಕ್ಕಿದ್ದಾರೆ. ಅದೂ ಅರಮನೆ ನಗರಿ ಮೈಸೂರಿನ್ಲಲಿರೋ ಲಲಿತಮಹಲ್​ನಲ್ಲಿ ಅನ್ನೋದು ವಿಶೇಷ.

ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಸದ್ಯ ಲಲಿತಮಹಲ್​ನಲ್ಲಿ ನಡೆಯುತ್ತಿದ್ದು, ಈಗಾಗ್ಲೇ ಯಶ್​ ಹೊರತುಪಡಿಸಿ ಒಂದಷ್ಟು ವಿಲನ್​ಗಳ ಟಾಕಿ ಪೋರ್ಷನ್ ಅಲ್ಲಿಯೇ ಚಿತ್ರಿಸಲಾಗ್ತಿತ್ತು. ಅದಕ್ಕೀಗ ಯಶ್ ಕೂಡ ಕಾಲಿಟ್ಟಿದ್ದು, ಚಿತ್ರದಲ್ಲಿ ಅದು ನಾಯಕಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿಯ ಬಂಗಲೆ ಆಗಿರಲಿದೆ. ಈ ಹಿಂದೆಯೇ ಅದ್ರ ದೃಶ್ಯಗಳು ಮೊದಲ ಭಾಗದಲ್ಲಿ ಕಾಣಸಿಕ್ಕಿತ್ತು.

ಅಂದಹಾಗೆ ಕೆಜಿಎಫ್​ನಲ್ಲಿ ಸಿನಿಮಾಗಾಗಿ ಬೃಹತ್ ಸೆಟ್​ಗಳು ನಿರ್ಮಾಣದ ಹಂತದಲ್ಲಿದ್ದು, ಅಲ್ಲಿಗೆ ಚಿತ್ರತಂಡ ಶಿಫ್ಟ್ ಆಗಲು ಇನ್ನೂ ಒಂದು ತಿಂಗಳು ಹಿಡಿಯಲಿದೆ ಎನ್ನಲಾಗಿದೆ. ಹಾಗಾಗಿ ಲಲಿತಮಹಲ್ ನಂತ್ರ ಕೆಜಿಎಫ್ 2 ಶೂಟಿಂಗ್ ಬೆಂಗಳೂರಿನಲ್ಲೂ ಒಂದಷ್ಟು ಭಾಗ ಚಿತ್ರಿತಗೊಳ್ಳಲಿದೆ. ಪ್ರಶಾಂತ್ ನೀಲ್, ಎಂದಿನಂತೆ ಭುವನ್, ಯೋಗಿ, ಶಿವು, ರವಿ ಬಸ್ರೂರು ಟೀಂ ಕಟ್ಟಿಕೊಂಡು ಹಗಲಿರುಳು ಶೂಟಿಂಗ್ ಮಾಡ್ತಿರೋದು ವಿಶೇಷ.
ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್ , ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *