ಮತ್ತೆ ಐಟಂ ಸಾಂಗ್‌ಗೆ ಸ್ಟೆಪ್ ಹಾಕೋಕ್ಕೆ ಬರ್ತಿದ್ದಾರೆ ಕಾಜಲ್ ಅಗರ್‌ವಾಲ್

ಸೌತ್ ಸಿನಿಪ್ರೇಮಿಗಳ ಮನಗೆದ್ದ ಚಂದಮಾಮ, ಮಗಧೀರನ ಹೃದಯ ಸಿಂಹಾಸನದ ರಾಣಿ ಕಾಜಲ್ ಅಗರ್​ವಾಲ್.. ವಯಸ್ಸು ಹೆಚ್ಚಾದಂತೆಲ್ಲಾ ಈ ಮುಂಬೈ ಪೋರಿ ಜೋಶ್ ಹೆಚ್ಚಾಗ್ತಿದೆ.. ಬಟ್ ಏನ್ ಮಾಡೋದು, ಹಾಗಂತ ಛಾನ್ಸ್ ಮೇಲೆ ಛಾನ್ಸ್ ಸಿಕ್ತಿದ್ಯಾ ಅಂದ್ರೆ, ಇಲ್ಲ ಅನ್ನೋ ಉತ್ತರ ಬರ್ತಿದೆ..ಅದ್ಕೆ ಏನೋ ಕಾಜಲ್ ಮತ್ತೆ ಐಟಂ ಡ್ಯಾನ್ಸರ್​​​​​​​​​​​ ಆಗಿ ಕುಣಿತಿನಿ ಅಂತಿದ್ದಾರೆ..

ನಾನ್ ಪಕ್ಕಾ ಲೋಕಲ್ ಅಂತ ಕುಣಿದು ಕುಪ್ಪಳಿಸಿದ್ದ ಕಾಜಲ್
ಮತ್ತೆ ಐಟಂ ಡ್ಯಾನ್ಸ್ ಮಾಡೋಕ್ಕೆ ರೆಡಿ ಅಂದ ಮಿತ್ರಾವಿಂದ..!
ಜನತಾ ಗ್ಯಾರೇಜ್.. ಈ ಚಿತ್ರದ ನಾನ್ ಪಕ್ಕಾ ಲೋಕಲ್ ಸಾಂಗ್​ ಯಾವ ರೇಂಜ್​​ಗೆ ಹಿಟ್ ಆಯ್ತು ಅನ್ನೋದನ್ನ ಬಿಡಿಸಿ ಹೇಳೋದೇ ಬೇಕಾಗಿಲ್ಲ.. ಅಲ್ಲಿವರೆಗೂ ಹೀರೋಯಿನ್ ಆಗಿ ಮಿಂಚಿದ್ದ ಕಾಜಲ್​, ಜ್ಯೂನಿಯರ್ ಎನ್​ಟಿಆರ್ ಸಿನಿಮಾ ಅನ್ನೋ ಕಾರಣಕ್ಕೆ ಐಟಂ ಡ್ಯಾನ್ಸ್ ಮಾಡೋಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು.. ದೇವಿಶ್ರೀ ಪ್ರಸಾದ್ ಬೀಟು, ಶೇಖರ್ ಮಾಸ್ಟರ್ ಸ್ಟೆಪ್ಸು.. ಕಾಜಲ್ ಅಗರ್​ವಾಲ್ ಗ್ಲಾಮರ್ ಮಿಕ್ಸ್​ ಆಗಿ ಸಾಂಗ್ ಸೂಪರ್ ಹಿಟ್ ಆಗಿತ್ತು.. ಬಿಂದಾಸ್ ಕಾಸ್ಟ್ಯೂಮ್ಸ್​​ನಲ್ಲಿ ಕಾಜಲ್ ಜಬರ್​ದಸ್ತ್​ ಸೆಪ್ಟ್ಸ್​​ ನೋಡಿ ಪಡ್ಡೆ ಹೈಕ್ಳು ಕಳ್ದೋಗಿದ್ದರು..

ಗೀತಾ ಮಾಧುರಿ ಕಿಕ್ಕೇರಿಸೋ ವಾಯ್ಸ್, ಕಲರ್​ಫುಲ್ ಸೆಟ್ಟು, ಕಾಜಲ್ ಹೆಜ್ಜೆಗೆ ಹೆಜ್ಜೆ ಸೇರಿಸಿದ್ದ ಜ್ಯೂನಿಯರ್ ಎನ್​ಟಿಆರ್, ಟೋಟಲಿ ಪಕ್ಕಾ ಲೋಕಲ್ ಸಾಂಗ್ ಧೂಳೆಬ್ಬಿಸಿತ್ತು.. ಜನತಾ ಗ್ಯಾರೇಜ್ ಸಿನಿಮಾ ಸಕ್ಸಸ್​​ನಲ್ಲಿ ಕಾಜಲ್ ಬಿಂದಾಸ್ ಆಗಿ ಕುಣಿದ ಈ ಹಾಡಿನ ಕ್ರೆಡಿಟ್ಟು ಇದೆ.. ಹೀರೋಯಿನ್ ಆಗಿದ್ದ ಕಾಜಲ್ ಹೀಗೆ ಐಟಂ ಡ್ಯಾನ್ಸರ್​ ಆಗಿ ಕುಣಿದಿದ್ದು, ನೋಡಿ ಅಭಿಮಾನಿಗಳು ಶಾಕ್ ಆಗಿದ್ರು.. ಸಾಂಗ್ ಹಿಟ್ ಆಯ್ತು.. ತಾರಕ್​ಗೋಸ್ಕರ ಈ ಐಟಂ ಸಾಂಗ್ ಮಾಡ್ದೆ ಮತ್ತೆ ನೋ ಐಟಂ ಸಾಂಗ್ ಅಂತ ಕಾಜಲ್ ಹೇಳ್ಕೊಂಡಿದ್ರು..

ಬನ್ನಿ- ತ್ರಿವಿಕ್ರಮ್ ಕಾಂಬೋ ಚಿತ್ರದಲ್ಲಿ ಕಾಜಲ್ ಐಟಂ ಸಾಂಗ್..!
ಅಯ್ಯಯ್ಯೋ ಐಟಂ ಡ್ಯಾನ್ಸರ್ ಆಗ್ಬಿಟ್ರಾ ಟಿಟೌನ್ ಚಂದಮಾಮ..?
ಜುಲಾಯಿ, ಸನ್​ ಆಫ್ ಸತ್ಯಮೂರ್ತಿ ನಂತ್ರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ಹ್ಯಾಟ್ರಿಕ್ ಕಾಂಬಿನೇಷನ್​ನಲ್ಲಿ ಸಿನಿಮಾವೊಂದು ಬರ್ತಿದೆ.. ಇನ್ನು ಹೆಸರಿಡದ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ.. ಸದ್ಯ ಚಿತ್ರದ ಫ್ಯಾನ್ಸ್ ಮೇಡ್ ಪೋಸ್ಟರ್​​ವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.. ಈ ಚಿತ್ರದ ಕಾಜಲ್ ಅಗಲ್ ವಾಲ್ ಐಟಂ ಸಾಂಗ್​​ಗೆ ಕಾಜಲ್ ಕುಣಿಸೋ ಸುದ್ದಿ ಬಂದಿದೆ..

ಸದ್ಯ ಕಾಜಲ್ ಕೈಲಿ ಯಾವುದೇ ದೊಡ್ಡ ಸಿನಿಮಾಗಳಿಲ್ಲ.. ಸೋ ತ್ರಿವಿಕ್ರಮ್​​- ಬನ್ನಿ ಕಾಂಬಿನೇಷನ್​ ಚಿತ್ರದಲ್ಲಿ ಐಟಂ ಸಾಂಗ್​ ಮಾಡೋಕ್ಕೆ ಒಪ್ಪಿದ್ಧಾರೆ ಅನ್ನಲಾಗ್ತಿದೆ.. ನಾಯಕಿಯರೇ ಐಟಂ ಸಾಂಗ್ ಮಾಡೋ ಟ್ರೆಂಡ್ ಬಾಲಿವುಡ್​ನಿಂದ ಸೌತ್​ ಇಂಡಸ್ಟ್ರಿಗೆ ಬಂದಾಗಿದೆ.. ಹಾಗಾಗಿ ಒನ್ಸ್​​ ಅಗೇನ್​​ ಕಾಜಲ್ ಐಟಂ ಡ್ಯಾನ್ಸರ್ ಆಗಿ ಕುಣಿದು ಕುಪ್ಪಳಿಸೋಕ್ಕೆ ರೆಡಿಯಾಗ್ತಿದ್ದಾರೆ ಅಂತಾಯ್ತು.. ಆ ಸಾಂಗ್ ಹೇಗಿರತ್ತೆ ಕಾದು ನೋಡೋಣ..

ಫಿಲ್ಮ್ ಬ್ಯೂರೋ, ಟಿವಿ5 ಕನ್ನಡ

Recommended For You

About the Author: Dayakar

Leave a Reply

Your email address will not be published. Required fields are marked *