ನಾಳಿನ ಪಂದ್ಯದಲ್ಲಿ ಧವನ್ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್ ಪಕ್ಕಾ

ನವದೆಹಲಿ: ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಇಂಜುರಿಗೆ ಗುರಿಯಾಗಿದ್ದಾರೆ. ಮೂರು ವಾರಗಳ ಕಾಲ ತಂಡದಿಂದ ಹೊರಗೆ ಉಳಿಯಲಿದ್ದಾರೆ. ಮೊನ್ನೆ ಒವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಶತಕ ಬಾರಿಸಿ ಅಬ್ಬರಿಸಿದರು. ಧವನ್ ಶತಕದ ಟೀಂ ಇಂಡಿಯಾ ಕಾಂಗರುಗಳ ವಿರುದ್ಧ 36 ರನ್​ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತ್ತು.

ಕಮಿನ್ಸ್ ಎಸೆತದಲ್ಲಿ ಇಂಜುರಿಗೆ ಗುರಿಯಾಗಿದ್ದ ಶಿಖರ್

ಮೊನ್ನೆ ಆಸಿಸ್ ವಿರುದ್ಧ ಶಾಂಧಾರ್ ಬ್ಯಾಟಿಂಗ್ ಧವನ್ ಬ್ಯಾಟಿಂಗ್ ಮಾಡುವ ವೇಳೆ ಇಂಜುರಿಗೆ ಗುರಿಯಾಗಿದ್ದರು. 9ನೇ ಓವರ್​ನಲ್ಲಿ ವೇಗಿ ಪ್ಯಾಟ್ ಕಮಿನ್ಸ್ ಎಸೆದ ಮೊದಲ ಎಸತವನ್ನ PUll Shot ಹೊಡೆಯಲು ಹೋಗಿ ಧವನ್ ವಿಫಲರಾದರು. ಚೆಂಡು ಧವನ್​ ಅವರ ಭುಜದ ಬಳಿ ಬಡಿಯಿತು. ಭುಜಕ್ಕೂ ಬಡಿಯುವ ಮುನ್ನ ಚೆಂಡು ಧವನ್​ ಅವರ ಕೈನ ಹೆಬ್ಬೆರಳಿಗೆ ಗಾಯ ಮಾಡಿತ್ತು.

ಧವನ್ ಸ್ಥಾನವನ್ನ ರಿಪ್ಲೇಸ್ ಮಾಡಲಿದ್ದಾರೆ ಕನ್ನಡಿಗ ರಾಹುಲ್ ?

ಇಂಜುರಿಗೆ ಗುರಿಯಾಗಿ ಮೂರು ವಾರಗಳ ಕಾಲ ಹೊರ ನಡೆದಿರುವ ಧವನ್ ಬದಲು ಓಪನರ್​ ಯಾರು ಅನ್ನೋ ಪ್ರಶ್ನೆ ಈಗ ಎದ್ದಿದೆ. ನಾಳೆ ನಾಟಿಂಗ್ಯಾಮ್ ಅಂಗಳದಲ್ಲಿ ಕೊಹ್ಲಿ ಸೈನ್ಯ ನ್ಯೂಜಿಲೆಂಡ್ ತಂಡವನ್ನ ಎದುರಿಸಲಿದೆ. ಓಪನರ್ ರೋಹಿತ್ ಜೊತೆ ಯಾರು ಆಡ್ತಾರೆ ಅನ್ನೋದೇ ಈಗ ಚರ್ಚೆಯ ವಿಷಯವಾಗಿದೆ. ಮೂಲಗಳ ಪ್ರಕಾರ ರೋಹಿತ್ ಜೊತೆ ಕನ್ನಡಿಗ ಕೆ.ಎಲ್​​. ರಾಹುಲ್ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕನ್ನಡಿಗ ರಾಹುಲ್ ಈ ಹಿಂದೆ ಸಾಕಷ್ಟು ಪಂದ್ಯಗಳಲ್ಲಿ ಓಪನರ್​ರಾಗಿ ಕಣಕ್ಕಿಳಿದಿದರು.

ಬ್ಯಾಕ್​ ಅಪ್ ಆಟಗಾರರಾಗಿ ಪಂತ್, ಶುಭಮನ್ ?

ಕಳೆದ ಎರಡು ಪಂದ್ಯಗಳಲ್ಲಿ ನಾಲ್ಕನೆ ಸ್ಲಟ್​ನಲ್ಲಿ ಆಡುತ್ತಿದ್ದ ರಾಹುಲ್ ಸ್ಥಾನದಲ್ಲಿ ಏಳನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕೇದಾರ್ ಜಾದವ್ ಆಡುವ ಸಾಧ್ಯತೆ ಇದೆ. ಇನ್ನು ಕೇದಾರ್ ಜಾಧವ್ ಸ್ಥಾನದಲ್ಲಿ ಆಲ್​ರೌಂಡರ್ ರವೀಂದ್ರ ಜಡೇಜಾ ಆಡುವ ಸಾಧ್ಯತೆ ತುಂಬ ಇದೆ.

ಫಾರ್ಮ್​ನಲ್ಲಿರುವ ರವೀಂದ್ರ ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗುತ್ತಾರೆ. ಇದಲ್ಲದಿದ್ದರೆ ಕೆ.ಎಲ್​. ರಾಹುಲ್ ಅವರನ್ನ ಓಪನರ್​ರಾಗಿ ಕಣಕ್ಕಿಳಿಸಿ ನಾಲ್ಕನೆ ಸ್ಲಾಟ್​ನಲ್ಲಿ ಆಲ್​ರೌಂಡರ್ ವಿಜಯ್ ಶಂಕರ್​ ಅಥವಾ ದಿನೇಶ್ಕಾರ್ತಿಕ್​ಗೆ ಮಣೆ ಹಾಕುವ ಸಾಧ್ಯತೆ ಇದೆ.

ಇನ್ನು ಬ್ಯಾಕ್​ ಅಪ್ ಆಟಗಾರರಾಗಿ ಮರಿ ಧೋನಿ ರಿಷಭ್ ಪಂತ್ , ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್​ವಾಲ್ ಅಥವಾ ಮರಿ ಕೊಹ್ಲಿ ಶುಭಮನ್ ಗಿಲ್​ ಲಂಡನ್ಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಗಾಯದಿಂದ ಹೊರ ನಡೆದಿರುವ ಶಿಖರ್ ಧವನ್ ಸ್ಥಾನದಲ್ಲಿ ಯಾರು ಆಡುತ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಸದ್ಯ ನಾಳೆ ನ್ಯೂಜಿಲೆಂಡ್​ ವಿರುದ್ಧ ಭಾರತ ತಂಡ ಪಂದ್ಯ ಎದುರಿಸುವಾಗ ಎಲ್ಲದಕ್ಕೂ ಉತ್ತರ ಸಿಗಲಿದೆ.

ಭಾರತ ತಂಡ ಎರಡು ಪಂದ್ಯಗಳ ಆಡಿ ಎರಡನ್ನು ಜಯಗಳಿಸಿ 4 ಅಂಕದೊಂದಿಗೆ ಪಾಯಿಂಟ್​ ಟೇಬಲ್​ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಅತ್ತ ನ್ಯೂಜಿಲೆಂಡ್​ ತಂಡ ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕಾರಿಸಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *