ಬಿಸಿಸಿಐ ಶಿಖರ್​ ಧವನ್ ಬಗ್ಗೆ ಹೇಳಿದ್ದಿಷ್ಟು..!

ನವದೆಹಲಿ: ಇಂಗ್ಲೆಂಡ್​ ಸಾರಥ್ಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ ಕ್ರಿಕೆಟ್​ 2019. ಭಾರತ ತಂಡ ಆರಂಭಿಕ ಬ್ಯಾಟ್ಸ್​ಮೆನ್​​ ಶಿಖರ್​ ಧವನ್​ಗೆ ಗಾಯದ ಸಮಸ್ಯೆಯಿಂದಾಗಿ ಮೂರು ವಾರಗಳ ವಿಶ್ರಾಂತಿ ಕೊಡಬೇಕಿದೆ ಎಂಬ ವಿಚಾರ ಹರಿದಾಡುತ್ತಿರುವವಾಗಲೇ ಬಿಸಿಸಿಐ ಮತ್ತೊಂದು ವಿಷಯ ಬಹಿರಂಗಪಡಿಸಿದೆ.

ಶಿಖರ್ ಧವನ್ ಅವರು ವಿಶ್ವಕಪ್​ನ ಮೂರು ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ನಂತರ ಅವರು ಚೇತರಿಕೆ ಕಂಡ ಬಳಿಕ ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಆಗದೊಂದು ವೇಳೆ ಅವರು ಚೇತರಿಕೆ ಕಾಣದೇ ಇದ್ದಲ್ಲಿ ತಂಡದಲ್ಲಿ ರಿಷಬ್​ ಪಂತ್​ ಅವರಿಗೆ ಆಡುವ ಅವಕಾಶ ನೀಡಬಹುದು ಎಂದು ಸಹ ತಿಳಿಸಿಲಾಗಿದೆ.

ತಂಡದ ವ್ಯವಸ್ಥಾಪಕರ ಮನವಿ ಮೇರೆಗೆ ವಿಕೆಟ್​ ಕೀಪರ್- ಬ್ಯಾಟ್ಸ್​ಮೆನ್​ ರಿಷಬ್​ ಪಂತ್​ ಅವರು ಟೀಂ ಇಂಡಿಯಾವನ್ನು ಸೇರ್ಪಡೆಗೊಂಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ಇದು ಯಾವುದೇ ಅಧಿಕೃತ ಘೋಷಣೆ ಅಲ್ಲ ಮುಂದಿನ ಸಮಯ ನೋಡಿಕೊಂಡು ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದಿದ್ದಾರೆ.

ಸೂಚನೆ: ಶಿಖರ್ ಧವನ್​ ಅವರು ವಿಶ್ವಕಪ್​ನಿಂದ ಹೊರಬಿದ್ದರೆ ಮಾತ್ರ ಟೀ ಇಂಡಿಯಾ ತಂಡದ ಆಟಗಾರಲ್ಲಿ ಒಬ್ಬರಾಗಿರುತ್ತಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.