ಶಿಖರ್​ ಧವನ್​ ಸ್ಥಾನಕ್ಕೆ ಈ ಇಬ್ಬರು ಕನ್ನಡಿಗರಲ್ಲಿ ಯಾರಿಗೆ ಸಿಗಲಿದೆ ಚಾನ್ಸ್​​​..!

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್​ ಕ್ರಿಕೆಟ್​ 2019 ಇಂಗ್ಲೆಂಡ್​ ಸಾರಥ್ಯದಲ್ಲಿ ನಡೆಯುತ್ತಿದ್ದು, ಈಗಾಗಲೇ ತಂಡಗಳು ವಿಶ್ವಕಪ್​ ಗೆಲ್ಲುವ ತವಕದಲ್ಲಿವೆ. ಇದರಲ್ಲಿ ಭಾರತ ಕೂಡ ಒಂದು. ಆದರೆ, ಭಾರತ ತಂಡಕ್ಕೆ ಸದ್ಯ ಆರಂಭಿಕ ಬ್ಯಾಟ್ಸ್​ಮೆನ್​ ಶಿಖರ್ ಧವನ್​ಗೆ ಗಾಯದ ಸಮಸ್ಯೆಯಿಂದಾಗಿ 18 ದಿನಗಳ ಕಾಲ ವಿಶ್ರಾಂತಿ ನೀಡಲಾಗಿದೆ.

ಈಗ ಸದ್ಯ ಟೀಂ ಇಂಡಿಯಾ ಮುಂದೆ ಇರುವ ಚಾಲೆಂಜ್​ ಏನು ಅಂದ್ರೆ ಶಿಖರ್ ಧವನ್​ ಸ್ಥಾನ ತುಂಬಬಲ್ಲ ಆಟಗಾರರ ಯಾರು ಆತ ಅದನ್ನು ನಿಭಾಯಿಸಬಲ್ಲನಾ ಎಂಬ ಬಗ್ಗೆ ಯೋಚನೆ ಮಾಡುತ್ತಿದೆ. ಇನ್ನು ತಂಡಕ್ಕೆ ಇರೋದು 3 ಆಯ್ಕೆಗಳು ಅವುಗಳು ಈ ಕೆಳಗಿನಂತಿವೆ..

#03 ರಿಷಬ್​ ಪಂತ್​

ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಎದುರಾಳಿ ತಂಡದ ಆಟಗಾರರ ಎದೆಯಲ್ಲಿ ನಡುಕ ಹುಟ್ಟಿಸುವಂತ ಮಾಧ್ಯಮ ಕ್ರಮಾಂಕದಲ್ಲಿ ಹಾಗೂ ಆರಂಭಿಕನಾಗು ಬ್ಯಾಟಿಂಗ್ ಮಾಡಬಲ್ಲ ರಿಷಬ್​ ಪಂತ್​ ಅವರನ್ನು ಬಿಸಿಸಿಐ ಆಯ್ಕೆ ಮಾಡಬಹುದು.

ಕಾರಣ ಬಿಸಿಸಿಐ ವಿಶ್ವಕಪ್​ ತಂಡ ಪ್ರಕಟಿಸಿದ ಬಳಿಕ ಇವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆಗ ಭಾರತೀಯ ಕ್ರಿಕೆಟಿಗರು ರಿಷಬ್​ ಪಂತ್​ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲ ಅರ್ಹತೆ ಹೊಂದಿದ್ದರು ಅವರನ್ನು ಕೈ ಬಿಟ್ಟಿದ್ದು ನಿರಾಶೆಯಾಗಿದೆ ಎಂಬ ಚರ್ಚೆ ನಡೆದಿತ್ತು.

#02 ಕನ್ನಡಿಗ ಮಾಯಾಂಕ ಅಗರವಾಲ್

ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಬಿಸಿಸಿಐ ಇವರನ್ನು ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು. ಇದರ ಪ್ರತಿಫಲವಾಗಿ ಕರ್ನಾಟಕದ ಮಾಯಾಂಕ ಅಗರವಾಲ್ ಅವರು ಟೆಸ್ಟ್​ನಲ್ಲಿ ಅರ್ಧಶತಕ ಸಿಡಿಸಿ ಬಿಸಿಸಿಐ ಆಯ್ಕೆ ಸಮಿತಿಗೆ ತಮ್ಮ ತಾಕತ್ ಪ್ರದರ್ಶನ ತೋರಿ ಅವರಿಂದ ಮೆಚ್ಚುಗೆ ಕೂಡ ಗಳಿಸಿದ್ದರು.

ಸದ್ಯ ಮಾಯಾಂಕ ಅಗರವಾಲ್ ಅವರು ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದ್ದು ಮೊದಲ 4 ಕ್ರಮಾಂಕ ವರೆಗೂ ಯಾವುದೇ ಕ್ರಮಾಂಕದಲ್ಲಿ ಆಡಲು ಬಲ್ಲ ಸಾಮರ್ಥ್ಯ ಇವರಿಗೆ ಇದೆ. ಬಿಸಿಸಿಐ ಆಯ್ಕೆ ಸಮಿತಿಗೆ ಇವರ ಮೇಲು ವಿಶ್ವಾಸವಿದೆ.

#01 ಕನ್ನಡಿಗ ಕೆ.ಎಲ್​ ರಾಹುಲ್​

ಕರ್ನಾಟಕದ ಮತ್ತೊಬ್ಬ ಪ್ರತಿಭಾವಂತ ಆಟಗಾರ ಕೆ.ಎಲ್ ರಾಹುಲ್ ಸದ್ಯ ಇವರು ವಿಶ್ವಕಪ್​ನಲ್ಲಿ ಸ್ಥಾನ ಪಡೆದು ಈಗ ಆಡಿರುವ ಎರಡು ಪಂದ್ಯಗಳಲ್ಲಿ ಬ್ಯಾಟ್​ ಬೀಸಿದ್ದಾರೆ. ಇವರು ಸಹ ಮೊದಲ 4 ಆರಂಭಿಕ ಬ್ಯಾಟಿಂಗ್​ನಲ್ಲಿ ಯಾವುದೇ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿದರು ಅದನ್ನು ನಿಭಾಯಿಸುವ ವಿಶ್ವಾಸ ಇವರಲ್ಲಿದೆ.

ಅಲ್ಲದೇ ವಿದೇಶಿ ನೆಲೆದಲ್ಲಿ ಇವರ ಸ್ಟ್ರೇಕ್​ ರೇಟ್​ ಅತ್ಯುತ್ತಮವಾಗಿದ್ದ ಶಿಖರ್​ ಧವನ್​ ಸ್ಥಾನಕ್ಕೆ ಕೆ.ಎಲ್​ ರಾಹುಲ್​ ಬರುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ಇತ್ತೀಚಿಗೆ ನಡೆದ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಹೆಚ್ಚು ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ.

ಸದ್ಯ ಜೂನ್ 13ರಂದು ಭಾರತ ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವಕಪ್​ ಪಂದ್ಯಕ್ಕೆ ಈ ಮೂವರಲ್ಲಿ ಯಾರು ಶಿಖರ್ ಧವನ್ ಸ್ಥಾನ ತುಂಬಬಲ್ಲರು ಎಂಬುದನ್ನು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿಲಿದೆ. ಅಲ್ಲಿತನಕ ಕ್ರಿಕೆಟ್​ ಪ್ರೇಮಿಗಳು ಕಾಯಲೇ ಬೇಕು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.