ಸೆಮೀ ಫೈನಲ್​ ಮತ್ತು ಫೈನಲ್​ ಪಂದ್ಯಗಳು ಮಳೆಗೆ ಬಲಿಯಾದ್ರೆ ಮುಂದೇನು – ವಿಶ್ವಕಪ್​ 2019

ನವದೆಹಲಿ: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್​ ಕ್ರಿಕೆಟ್​ 2019ರ ಮೇಲೆ ಮಳೆರಾಯ ದಯೆತೋರುತ್ತಿಲ್ಲವಾದ್ರೂ ಇದರಿಂದಾಗಿ ಮೂರು ಪಂದ್ಯಗಳು ಮಳೆರಾಯನ ಆರ್ಭಟಕ್ಕೆ ತುತ್ತಾಗಿದೆ. ಇದು ಹೀಗೆ ಮುಂದುವರೆದರೆ ಸೆಮಿ ಫೈನಲ್ ಮತ್ತು ಫೈನಲ್​ ಪಂದ್ಯಗಳ ಏನಾಗಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆಂಗ್ಲರ ನಾಡಿನಲ್ಲಿ ಮಳೆಗಾಲ ಬಂದರೆ ಸಾಕು ಈ ಒಂದು ಸಮಸ್ಯೆ ಸಾಮಾನ್ಯವಾದುದ್ದು. ಇದು ವಿಶ್ವಕಪ್​ನಲ್ಲೂ ಮುಂದುವರೆಯುತ್ತಿದೆ ಅಷ್ಟೇ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್​​ ಇಂಡೀಸ್​ ನಡುವಿನ ಪಂದ್ಯ ಹಾಗೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯಗಳು ಮಳೆಗೆ ಆಹುತಿ ಆಗಿದೆ.​

ಸದ್ಯ ನಾಳೆ ನಡೆಯಲಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಹಾಗೂ ಜೂನ್ 13 ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯಗಳು ಸಹ ಇದೇ ರೀತಿಯಾಗಿ ಮಳೆಗೆ ಆಹುತಿ ಆದರೆ ಮುಂದೆ ಏನು ಎಂಬ ಪ್ರಶ್ನೆ ಮೂಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಸೆಮೀ ಫೈನಲ್ ಹಾಗು ಫೈನಲ್​ ಪಂದ್ಯಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಇದೇ ರೀತಿಯಾಗಿ ಮಳೆಗೆ ಕೆಲವು ಪಂದ್ಯಗಳು ಆಹುತಿಯಾಗಿ ಸೆಮೀ ಫೈನಲ್​, ಫೈನಲ್​ ಪಂದ್ಯಗಳಿಗೆ ಕಾಲಿಡುತ್ತದೆ. ಈ ಲೀಗ್​ನಲ್ಲಿ ಅತೀ ಹೆಚ್ಚು ಪಾಯಿಂಟ್​​ ಪಡೆದ ತಂಡ ಕೊನೆ ಘಟಕ್ಕೆ ತಲುಪುತ್ತವೆ.

ಸೆಮೀ ಫೈನಲ್​, ಫೈನಲ್ ನಡೆಯಬೇಕಿದ್ದ ಎರಡು ದಿನವು ಮಳೆರಾಯನಿಗೆ ಪಂದ್ಯಗಳು ಬಲಿಯಾದರೆ ಫೈನಲ್​ ಪಂದ್ಯ ತಲುಪಿದ ಎರಡು ತಂಡಗಳು ವಿಶ್ವಕಪ್​ ಟ್ರೋಫಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಇರದರಲ್ಲಿ ಸೆಮೀ ಫೈನಲ್​ ಮತ್ತು ಫೈನಲ್​ ಎರಡು ಡ್ರಾ ಆದರೆ ಸೂಪರ್​ ಓವರ್​ ಆಡಬೇಕಾಗುತ್ತದೆ ಇದರಲ್ಲಿ ಯಾರು ಗೆಲ್ಲುತ್ತಾರೆ ಅವರು ವಿಶ್ವಕಪ್​ ವಿಜೇತರಾಗುತ್ತಾರೆ.

ಲೀಗ್ ಪಂದ್ಯಗಳಿಗೆ ಮತ್ತು ಡ್ರಾ ಪಂದ್ಯಗಳ ಸಂದರ್ಭದಲ್ಲಿ ಯಾವುದೇ ಮೀಸಲು ದಿನಗಳನ್ನು ನಿಗದಿಪಡಿಸಲಾಗಿಲ್ಲ. ಎರಡೂ ತಂಡಗಳು ತಲಾ ಒಂದೊಂದು ಅಂಕವನ್ನು ಪಡೆಯುತ್ತವೆ.

Recommended For You

About the Author: TV5 Kannada

Leave a Reply

Your email address will not be published. Required fields are marked *