ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದ ರಾಮಲಿಂಗಾರೆಡ್ಡಿ

ಪಾರದರ್ಶಕತೆ ಕಾಯ್ದೆ ಪಾಲಿಸದೆ ಬ್ಲಾಕ್ ಲಿಸ್ಟ್‌ನಲ್ಲಿರೋ TPS ಸಂಸ್ಥೆಗೆ, ಕಸದ ಟೆಂಡರ್ ನೀಡಲಾಗಿದೆ. ಆದರೆ ಈ ಸಂಸ್ಥೆ ನಕಲಿ ಬಿಲ್​ಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ಹಣ ಲಪಟಾಯಿಸ್ತಿದೆ ಅಂತಾ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಪಾಲಿಕೆಯಲ್ಲಿ ಎಗ್ಗಿಲ್ಲದೇ ಕಸದ ಮಾಫಿಯಾ ನಡೀತಾನೆ ಇದೆ. ನಗರದಲ್ಲಿರೋ ಕಸವನ್ನು ಯಾವಾಗ ಎತ್ತಬೇಕು, ಎಲ್ಲಿಗೆ ಸಾಗಿಸಬೇಕು. ಯಾವಾಗ ಕಸದ ಲಾರಿಗಳನ್ನ ನಿಲ್ಲಿಸಬೇಕು ಅಂತಾನೆ ನಿರ್ಧರಿಸೋ ದಂಧೆ ಬಿಬಿಎಂಪಿಯಲ್ಲಿ ಮೊದಲಿನಿಂದಲೂ ಇದೆ. ಪಾಲಿಕೆ ಅಧಿಕಾರಗಳು ನಿಯಮ ಉಲ್ಲಂಘಿಸಿ ಒಂದೇ ಸಂಸ್ಥೆಗೆ ಟೆಂಡರ್ ಕೊಡ್ತಿರೋದಕ್ಕೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ಹೊರ ಹಾಕಿದ್ದು, ಸಿಎಂಗೆ ಲೇಟರ್ ಬರೆದಿದ್ದಾರೆ.

ಇನ್ನು ಪತ್ರದಲ್ಲಿ KTPP ನಿಯಮ ಉಲ್ಲಂಘಿಸಿ, TPS ಸಂಸ್ಥೆಗೆ ಕಸದ ಟೆಂಡರ್ ನೀಡಲಾಗಿದೆ. ಮಿನಿ ಟ್ರಾನ್ಸ್‌ಫರ್ ಸ್ಟೇಷನ್ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಟೆಂಡರ್ ಕರೆಯಲಾಗಿದ್ದು, ಯಾವುದೇ ಸಂಸ್ಥೆಗಳು ಭಾಗಿಯಾಗದ ಹಿನ್ನೆಲೆ TPS ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಜೊತೆಗೆ ಕೈಗಳಲ್ಲಿ ಬಿಲ್ ಬರೆಯೋ ಮೂಲಕ 246 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ.. ಈ ಹಗರಣದಲ್ಲಿ ಪಾಲಿಕೆಯ ಅಧಿಕಾರಿಗಳೂ ಭಾಗಿಯಾಗಿದ್ದು, ಕೂಡಲೇ ಬ್ಲಾಕ್‌ಲಿಸ್ಟ್ ಸಂಸ್ಥೆ, ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮಾಜಿ ಸಚಿವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಬಿಎಂಪಿ ಮೇಯರ್‌, ತನಿಖೆ ನಡೆಸೋದಾಗಿ ಭರವಸೆ ನೀಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *