ಭಾರತೀಯ ರಿಸರ್ವ್​ ಬ್ಯಾಂಕ್​​ನಿಂದ ಗ್ರಾಹಕರಿಗೆ ಸಿಹಿಸುದ್ದಿ..!

ನವದೆಹಲಿ: ರಿಯಲ್-ಟೈಮ್ ಗ್ರಾಸ್ ಸೆಟ್ಲ್ಮೆಂಟ್(ಆರ್​​ಟಿಜಿಎಸ್​) ಮತ್ತು ರಾಷ್ಟ್ರೀಯ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್(ಎನ್​ಇಎಫ್​​ಟಿ) ಮುಖಾಂತರ ಹಣವನ್ನು ವರ್ಗಾವಣೆ ಮಾಡುವವರಿಗೆ ವಿಧಿಸುತ್ತಿದ್ದ ಶುಲ್ಕವನ್ನು ತೆರವುಗೊಳಿಸುವಂತೆ ಬ್ಯಾಂಕ್​ಗಳಿಗೆ ಭಾರತೀಯ ರಿರ್ಸವ್​ ಬ್ಯಾಂಕ್​ ಆದೇಶ ಹೊರಡಿಸಿದೆ.

“ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಪ್ರಯೋಜನಗಳನ್ನು ರವಾನಿಸಲು ಸ್ವಲ್ಪ ಕಾಲವಕಾಶದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ಈ ಸೂಚನೆಯನ್ನು ಪ್ರತಿಯನ್ನು ಒಂದು ವಾರದಲ್ಲಿ ನೀಡಲಾಗುತ್ತದೆ” ಎಂದು ಆರ್​ಬಿಐ ತಿಳಿಸಿದೆ.

ರಿಯಲ್-ಟೈಮ್ ಗ್ರಾಸ್ ಸೆಟ್ಲ್ಮೆಂಟ್(ಆರ್​​ಟಿಜಿಎಸ್​) ಮತ್ತು ರಾಷ್ಟ್ರೀಯ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್(ಎನ್​ಇಎಫ್​​ಟಿ) ಈ ಒಂದು ಬ್ಯಾಂಕ್ ಸೇವೆಗಳನ್ನು ಗ್ರಾಹಕರು ತಕ್ಷಣವೇ ಹಣವನ್ನು ವರ್ಗಾವಣೆ ಮಾಡುವ ಸೇವೆಗಳಾಗಿವೆ.

2 ಲಕ್ಷ ವರೆಗಿನ ಹಣವನ್ನು ಮಾತ್ರ ವರ್ಗಾವಣೆಯನ್ನು ಉಚಿತವಾಗಿ ಮಾಡಬಹುದಾಗಿದೆ ಎಂದು ಆರ್​ಬಿಐ ತಿಳಿಸಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.