ರಾಬರ್ಟ್ ಸಿನಿಮಾ ಸಿಕ್ರೇಟ್ ರಿವೀಲ್ ಆಗದಿರಲು ಇದೇ ಕಾರಣ..!

ಚಾಲೆಂಜಿಂಗ್ ಸ್ಟಾರ್ ದರ್ಶನ್- ತರುಣ್​ ಸುಧೀರ್ ಡೆಡ್ಲಿ ಕಾಂಬಿನೇಷನ್ ಸಿನಿಮಾ ರಾಬರ್ಟ್.. ಪವರ್​ಫುಲ್​​​ ಟೈಟಲ್​ನಿಂದ್ಲೇ ಬೇಜಾನ್ ಹೈಪ್​ ಕ್ರಿಯೇಟ್ ಮಾಡಿರೋ ಈ ಸಿನಿಮಾ ಶೂಟಿಂಗ್​ ಸದ್ದಿಲ್ಲದೇ ನಡೀತಿದೆ..

ರಾಬರ್ಟ್​​​​.. ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅಭಿನಯದ ಬಹುಕೋಟಿ ವೆಚ್ಚದ ಸಿನಿಮಾ.. ಯಜಮಾನ ಸೂಪರ್ ಸಕ್ಸಸ್​​ ನಂತ್ರ ಕೊಂಚ ಗ್ಯಾಪ್​ ತಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ಫುಲ್​ ಜೋಷ್​​ನಲ್ಲಿದ್ದಾರೆ.. ರಾಬರ್ಟ್ ಅವತಾರ ತಾಳಿ ಶೂಟಿಂಗ್​ ಸೆಟ್​ನಲ್ಲಿ ಧೂಳೆಬ್ಬಿಸಿದ್ದಾರೆ.. ಕಥೆ ಬಗ್ಗೆ ಯಾವುದೇ ಸುಳಿವು ಕೊಡದೇ ಕುತೂಹಲ ಕೆರಳಿಸಿರೋ ರಾಬರ್ಟ್ ಟೀಂ, ಪ್ರೇಕ್ಷಕರನ್ನ ರಂಜಿಸೋಕೆ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸ್ತಿದೆ..

ಎಲ್ಲಿಗೆ ಬಂತು ಚಾಲೆಂಜಿಂಗ್ ಸ್ಟಾರ್ ರಾಬರ್ಟ್ ಶೂಟಿಂಗ್..?
ಚೆನ್ನೈ- ಪಾಂಡಿಚೇರಿಯಲ್ಲಿ ಡಿ ಬಾಸ್ ದರ್ಶನ್ ಆರ್ಭಟ
ನಗರದ ಬನಶಂಕರಿ ದೇವಸ್ಥಾನದಲ್ಲಿ ಸಿಂಪಲ್ಲಾಗಿ ಪೂಜೆ ನೆರವೇರಿಸಿ, ಕಂಠೀರವ ಸ್ಟುಡಿಯೋಗೆ ಎಂಟ್ರಿ ಕೊಟ್ಟಿದ್ದ ರಾಬರ್ಟ್ ಚಿತ್ರತಂಡ ಒಂದು ವಾರ ಶೂಟಿಂಗ್ ನಡೆಸಿತ್ತು.. ಟಾಲಿವುಡ್​ನ ಖ್ಯಾತ ಖಳನಟ ಜಗಪತಿ ಬಾಬು ರಾಬರ್ಟ್ ಟೀಂ ಸೇರ್ಕೊಂಡಿದ್ರು.. ಅದ್ದೂರಿ ಸೆಟ್​ನಲ್ಲಿ ಒಂದು ವಾರ ಶೂಟಿಂಗ್​ ನಡೆಸಿದ ತರುಣ ಸುಧೀರ್, ಕಳೆದ ವಾರ ಇಡೀ ತಂಡದ ಜೊತೆ ಚೆನ್ನೈಗೆ ತೆರಳಿದ್ರು.. ಕಳೆದೊಂದು ವಾರದಿಂದ ಚೆನ್ನೈ ಮತ್ತು ಪಾಂಡಿಚೇರಿಯಲ್ಲಿ ರಾಬರ್ಟ್ ಸಿನಿಮಾದ ಕ್ರೂಷಿಯಲ್​​ ಸೀಕ್ವೆನ್ಸ್​ನ ಸೆರೆಹಿಡಿಯಲಾಗ್ತಿದೆ..

ಲೋಕಸಭಾ ಚುನಾವಣಾ ಫಲಿತಾಂಶದ ದಿನವು ಪಾಂಡಿಚೇರಿಯಲ್ಲೇ ರಾಬರ್ಟ್ ಸಿನಿಮಾ ಶೂಟಿಂಗ್ ನಡೀತಿತ್ತು.. ಶೂಟಿಂಗ್ ಸೆಟ್​ನಲ್ಲೇ ಕೇಕ್​ ಕತ್ತರಿಸಿ, ಸುಮಲತಾ ಅಂಬರೀಶ್​ ಗೆಲುವಿನ ಸಂಭ್ರಮವನ್ನ ಚಾಲೆಂಜಿಂಗ್ ಸ್ಟಾರ್ ಆಚರಿಸಿದ್ರು.. ಅಲ್ಲಿಂದಲೇ ಫೋನ್ ಮಾಡಿ ಹೊಸ ಎಂಪಿಗೆ ಶುಭಾಶಯ ತಿಳಿಸಿದ್ರು..

ಪಾಂಡಿಚೇರಿಯಲ್ಲಿ ಶೂಟಿಂಗ್ ಕೊನೆ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ರಾಬರ್ಟ್ ಟೀಂ ಬೆಂಗಳೂರಿಗೆ ವಾಪಸ್ಸಾಗಲಿದೆ.. ನಂತ್ರ ಮತ್ತೆ ಕಂಠೀರವ ಸ್ಟುಡಿಯೋ ಸೆಟ್​ನಲ್ಲಿ ಶೂಟಿಂಗ್​ ಮುಂದುವರೆಯಲಿದೆ.. ಇಲ್ಲಿವರೆಗೆ ರಾಬರ್ಟ್ ಚಿತ್ರಕ್ಕೆ 15 ದಿನಗಳ ಕಾಲ ಶೂಟಿಂಗ್ ನಡೆದಿದೆ.. ಸೆಟ್ಟಿಗೆ ಮೊಬೈಲ್​​ ಅಲೋ ಮಾಡದ ಕಾರಣ ಮೇಕಿಂಗ್ ಸ್ಟಿಲ್ಸ್​ ಲೀಕ್​ ಆಗಿಲ್ಲ.. ಅಷ್ಟರಮಟ್ಟಿಗೆ ಕುತೂಹಲ ಕಾಯ್ದುಕೊಂಡಿದೆ ಚಿತ್ರತಂಡ..

ನೆಕ್ಸ್ಟ್​ ಶೆಡ್ಯೂಲ್​ ಬೆಂಗಳೂರಿನಲ್ಲಿ ನಡೆಯಲಿದ್ದು, ಆ ನಂತ್ರ ಮೈಸೂರು, ವೈಜಾಗ್ ಮತ್ತು ಅಯೋಧ್ಯೆಯಲ್ಲಿ ಚಿತ್ರೀಕರಣ ನಡೆಸಲು ತಯಾರಿ ನಡೆಸಲಾಗ್ತಿದೆ.. ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಅದ್ಧೂರಿ ವೆಚ್ಚದಲ್ಲಿ ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ಘಟಾನುಘಟಿ ಕಲಾವಿದರು ಮುಂದಿನ ದಿನಗಳಲ್ಲಿ ಒಬ್ಬೊಬ್ಬರಾಗಿ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ.. ಈ ವರ್ಷಾಂತ್ಯಕ್ಕೆ ತೆರೆಮೇಲೆ ರಾಬರ್ಟ್ ಹವಾ ಶುರುವಾಗಲಿದೆ..
ಎಂಟ್ರಟ್ರೈನ್​ಮೆಂಟ್ ಬ್ಯೂರೊ. ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.