ಮೈತ್ರಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ: ಫಲಿತಾಂಶದ ಮೇಲೆ ಸಂಭ್ರಮಾಚರಣೆ ಡಿಪೆಂಡ್..!?

ದೋಸ್ತಿ ಸರ್ಕಾರಕ್ಕೆ ಮೇ 23ಕ್ಕೆ ಒಂದು ವರ್ಷದ ಸಂಭ್ರಮ.. ಅಂದೇ ಇಡೀ ದೇಶಾದ್ಯಂತ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶವೂ ಬರಲಿದೆ..

ಕುಮಾರಸ್ವಾಮಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣ
ವರ್ಷಾಚರಣೆ ಸಂಭ್ರಮಕ್ಕಿಂತ ಫಲಿತಾಂಶದ ಟೆನ್ಶನ್ ಹೆಚ್ಚು
ಸಿಎಂ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಮೇ 23ರಂದು ಒಂದು ವರ್ಷ ಪೂರ್ಣಗೊಳ್ಳಲಿದೆ.. ವರ್ಷಾಚರಣೆ ಸಂಭ್ರಮಕ್ಕಿಂತ ಲೋಕಸಭಾ ಚುನಾವಣೆಯ ಫಲಿತಾಂಶವೇ ದೋಸ್ತಿ ನಾಯಕರಿಗೆ ಟೆನ್ಶನ್ ತಂದಿಟ್ಟಿದೆ.. ಫಲಿತಾಂಶ ಏನಾಗುತ್ತೋ, ಬಿಜೆಪಿಯವರು ಸರ್ಕಾರ ಬೀಳಿಸೋಕೆ ಏನೆಲ್ಲಾ ಕಸರತ್ತು ಮಾಡ್ತಾರೋ..ನಾವು ಸರ್ಕಾರವನ್ನ ಹೇಗೆ ಕಾಪಾಡಿಕೊಳ್ಳಬೇಕೋ ಎಂಬ ಚಿಂತೆಯೇ ಹೆಚ್ಚಾಗಿದೆ.. ಕಳೆದ ಒಂದು ವರ್ಷದ ಹಿಂದೆ ಬಿಜೆಪಿಯನ್ನ ದೂರ ವಿಡಬೇಕೆಂಬ ನಿಟ್ಟಿನಲ್ಲಿ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದವರು ದೋಸ್ತಿ ಮಾಡಿಕೊಂಡು ಸರ್ಕಾರ ರಚಿಸಿದ್ದರು..

ಕುಮಾರಸ್ವಾಮಿ ಸಿಎಂ ಆಗಿ ಒಂದು ವರ್ಷ ಪೂರ್ಣವಾಗಲಿದೆ.. ಮೈತ್ರಿ ಸರ್ಕಾರದಲ್ಲಿ ಒಂದು ವರ್ಷ ಸಂಭ್ರಮಕ್ಕಿಂತ ಟೆನ್ಷನ್ ನಲ್ಲೇ ಕಳೆಯುವಂತಾಗಿದೆ… ಒಂದು ಕಡೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರು ಸರ್ಕಾರ ರಚನೆ ಮಾಡೋಕೆ ಆಗಲಿಲ್ಲ ಅಂತ ಆಪರೇಷನ್ ಕಮಲಕ್ಕೆ ಕೈ ಹಾಕಿ ಆಗಾಗ್ಗೆ ಮೈತ್ರಿ ಸರ್ಕಾರದ ಬುಡ ಅಲ್ಲಾಡಿಸೋ ಪ್ರಯತ್ನ ಪಟ್ಟಿತ್ತು.. ಇನ್ನೊಂದು ಕಡೆ ಮೈತ್ರಿ ನಾಯಕರಲ್ಲಿ ಇದುವರೆಗೂ ಒಮ್ಮತ ಮೂಡದ ಕಾರಣ ಬರೀ ಆರೋಪ ಪ್ರತ್ಯಾರೋಪದಲ್ಲೇ ಒಂದು ವರ್ಷ ಮುಗಿದುಹೋಯ್ತು.. ಮೇಲಿರುವ ನಾಯಕರೇನೋ ಸರ್ಕಾರ ರಚನೆಗಾಗಿ ಮೈತ್ರಿ ಮಾಡಿಕೊಂಡ್ರೆ, ಎರಡೂ ಪಕ್ಷದ ಕಾರ್ಯಕರ್ತರು ಮಾತ್ರ ಮೈತ್ರಿಗೆ ಕೊನೆಗೂ ಹೊಂದಿಕೊಳ್ಳಲೇ ಇಲ್ಲ..

ನಾಯಕರ ದಿನಕ್ಕೊಂದು ಹೇಳಿಕೆ ಮೈತ್ರಿ ಬಿಕ್ಕಟ್ಟಿಗೆ ಕಾರಣವಾಯ್ತು
ದೋಸ್ತಿ ಪಕ್ಷಗಳ ನಾಯಕರಲ್ಲಿ ದಿನೊಕ್ಕೊಂದು ಹೇಳಿಕೆಗಳು ಮೈತ್ರಿ ನಾಯಕರ ಬಿರುಕನ್ನ ಎತ್ತಿತೋರಿಸುತ್ತಿದೆ…ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ಆಡಳಿತ ನಡೆಸುತ್ತಿದ್ದರು ಕಾಂಗ್ರೆಸ್ ಪಕ್ಷದ ಶಾಸಕರು ಮಾತ್ರ ನಮ್ಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಅಂತ ಹೇಳಿಕೆಗಳನ್ನ ಸಾಲು ಸಾಲಾಗಿ ಹೇಳ್ತಿದ್ದಾರೆ.. ಇದು ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ..

ಸ್ವತಃ ಸಿಎಂ ಕುಮಾರಸ್ವಾಮಿಯವರೇ ಈ ವಿಷ್ಯಕ್ಕೆ ಬೇಸರಗೊಂಡಿದ್ದರು… ಇನ್ನು ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು.. ಇದು ಕಾಂಗ್ರೆಸ್ ನಾಯಕರಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಕಾರಣವಾಯಿತು… ಅಲ್ದೇ ದೋಸ್ತಿ ಸರ್ಕಾರದಲ್ಲಿ ಇಕ್ಕಟಿನ ವಾತಾವರಣವಿದೆ.. ಹೀಗೆ ಇರುವ ಬದಲು ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋದು ಲೇಸು ಅಂತ ಬಸವರಾಜ್ ಹೊರಟ್ಟಿ ಹೇಳಿಕೆ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಮತ್ತೆ ಸಾಬೀತು ಪಡಿಸಿತ್ತು..

ನಾಳಿನ ಫಲಿತಾಂಶವೂ ನಿರ್ಧರಿಸಲಿದೆಯೇ ಸರ್ಕಾರದ ಹಣೆ ಬರಹ?
ಇನ್ನು ಲೋಕಸಭಾ ಚುನಾವಣೆಯ ಫಲಿತಾಂಶ ಸಹ ನಾಳೆ ಹೊರಬಿಳಲಿದೆ.. ರಾಜ್ಯದಲ್ಲಿ ಸರ್ಕಾರದ ರಚನೆಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಗೂ ಸಹ ಮೈತ್ರಿ ಮಾಡಿಕೊಂಡು ಆಖಾಡಕ್ಕೆ ಇಳಿದಿತ್ತು.. ಆದ್ರೆ ಈ ಮೈತ್ರಿಗೆ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಹಿನ್ನೆಡೆಯಾಗಲಿದೆ ಅನ್ನೋ ಸರ್ವೆಗಳ ಮಾಹಿತಿ ದೋಸ್ತಿ ನಾಯಕರ ನಿದ್ದೆಗೆಡಿಸಿದೆ…

ಅದ್ರಲ್ಲೂ ಮಂಡ್ಯ , ಮೈಸೂರು , ಹಾಸನ ಮತ್ತು ತುಮಕೂರು ಕ್ಷೇತ್ರದ ಫಲಿತಾಂಶದ ಮೇಲೆ ಸರ್ಕಾರ ನಿಂತಿದೆ ಅನ್ನೋ ಚರ್ಚೆ ರಾಜಕೀಯ ವಲಯದದಲ್ಲಿ ಶುರುವಾಗಿದೆ.. ಒಂದು ವೇಳೆ ಮೈತ್ರಿ ಅಭ್ಯರ್ಥಿಗಳಿಗೆ ಹಿನ್ನೆಡೆಯಾದರೆ ಅದನ್ನ ಯಾರು ವಹಿಸಿಕೊಳ್ಳುತ್ತಾರೆ ಅನ್ನೋ ಪ್ರಶ್ನೆಯೂ ಎದ್ದಿದೆ..

ಪ್ರಮುಖವಾಗಿ ಈ ಬಾರಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ದೃವಿಕರಣವಾಗುತ್ತೆ ಅನ್ನೋ ಹೇಳಿಕೆ ಕೊಡುವ ಮೂಲಕ ಬಿಜೆಪಿ ಇನ್ನೂ ರಾಜ್ಯದಲ್ಲಿ ಸರ್ಕಾರ ರಚಿಸುವ ತವಕದಲ್ಲಿರೋದು ಗೊತ್ತಾಗುತ್ತಿದೆ…

ಒಟ್ನಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿದ್ರು ಯಾರ ಮುಖದಲ್ಲೂ ಸಂಭ್ರಮ ಕಾಣ್ತಿಲ್ಲ.. ನಾಳೆ ವರ್ಷದ ಸಂಭ್ರಮವನ್ನ ಆಚರಿಸಬೇಕೋ ಬೇಡ್ವೋ ಅನ್ನೋದು ನಾಳಿನ ಚುನಾವಣೆಯ ಫಲಿತಾಂಶದ ಮೇಲೆ ನಿಂತಿದೆ.. ಅಲ್ದೇ ಸರ್ಕಾರದ ಅಸ್ತಿತ್ವದ ಪ್ರಶ್ನೆಗೂ ಸಹ ನಾಳಿನ ಫಲಿತಾಂಶದ ಮೇಲೆ ನಿಂತಿದೆ…
ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ೫, ಬೆಂಗಳೂರು

Recommended For You

About the Author: Dayakar

Leave a Reply

Your email address will not be published. Required fields are marked *