ಅಪ್ಪನನ್ನೇ ಕೊಂದು 25 ತುಂಡುಗಳಾಗಿ ಕತ್ತರಿಸಿದ ನೀಚ..!

ದೆಹಲಿ: ಆಸ್ತಿ ವಿಚಾರವಾಗಿ 22 ವರ್ಷದ ಯುವಕನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದು, ಆರೋಪಿಯನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶಹದರಾ ನಿವಾಸಿ ಅಮನ್ ಕುಮಾರ್(22) ತಂದೆ ಸಂದೇಶ್ ಅಗರ್ವಾಲ್(48) ಬಳಿ ಆಸ್ತಿ ವಿಚಾರವಾಗಿ ಜಗಳವಾಡಿದ್ದು, ಜಗಳ ತಾರಕಕ್ಕೇರಿ ಅಮನ್ ತಂದೆಯ ಕೊಲೆ ಮಾಡಿದ್ದಾನೆ. ಅಲ್ಲದೇ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಯಾರಿಗೂ ತಿಳಿಯದಂತೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾನೆ.

ಅಮನ್ ಕುಮಾರ್ ತಂದೆಯನ್ನು ಕೊಂದು, ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನು 25 ತುಂಡುಗಳನ್ನಾಗಿ ಮಾಡಿ ನಾಲ್ಕು ಚೀಲಗಳಲ್ಲಿ ತುಂಬಿಸಿದ್ದ. ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಚೀಲ ಸಾಗಿಸಲು ಪ್ರಯತ್ನಿಸಿದ್ದ. ಆದ್ರೆ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮೃತದೇಹದ ಚೀಲಗಳ ಸಮೇತ ಬಂಧಿಸಿದ್ದಾರೆ.

ಇನ್ನು ಆರೋಪಿ ಹೇಳುವ ಪ್ರಕಾರ ನನ್ನ ತಂದೆ ನನಗೆ ಪ್ರತಿನಿತ್ಯ ವಿನಾಕಾರಣ ಬೈಯ್ಯುತ್ತಿದ್ದರು. ಈ ಕಾರಣಕ್ಕಾಗಿ ನಾನು ಅವರನ್ನು ಕೊಂದೆ ಎಂದು ಹೇಳಿದ್ದಾನೆ.

ಸಂದೇಶ್ ಸಹೋದರ ಈ ಬಗ್ಗೆ ಮಾತನಾಡಿದ್ದು, ಅಮನ್ ಹಲವು ತಿಂಗಳಿಂದ ಅಪ್ಪನನ್ನು ಕೊಲ್ಲುತ್ತೇನೆಂದು ಹೆದರಿಸುತ್ತಿದ್ದ. ಈಗ ನಿಜವಾಗಿಯೂ ಕೊಂದಿದ್ದಾನೆ. ಅಲ್ಲದೇ, ಸಂದೇಶ್ ಹೆಂಡತಿ ಮತ್ತು ಉಳಿದ ಮಕ್ಕಳೂ ಕೂಡ ಕೊಲೆಗೆ ಸಾಥ್ ನೀಡಿದ್ದಾರೆಂದು ಆರೋಪಿಸಿದ್ದಾರೆ.

ಸಂದೇಶ್ ಕಾಸ್ಮೆಟಿಕ್ ವ್ಯಾಪಾರ ನಡೆಸುತ್ತಿದ್ದರು. ಆದ್ರೆ ಹೆಂಡತಿ ಮಕ್ಕಳೆಲ್ಲ ಕೂಡಿ ನನ್ನ ಸಹೋದರನಿಗೆ ತೊಂದರೆ ಕೊಡುತ್ತಿದ್ದರು. ಆಸ್ತಿ ವಿಚಾರವಾಗಿ ಪದೇ ಪದೇ ಜಗಳವಾಡಿ ಹಿಂಸೆ ನೀಡುತ್ತಿದ್ದರು. ಈ ಕಾರಣಕ್ಕಾಗಿ ಸಂದೇಶ್ ಅರ್ಧ ಆಸ್ತಿಯನ್ನ ತನ್ನ ಹೆಂಡತಿ ಮಕ್ಕಳ ಹೆಸರಿಗೆ ಬರೆದಿದ್ದ. ಆದರೂ ಕೂಡ ಸಂದೇಶ್ ತನಗಾಗಿ ಇಟ್ಟುಕೊಂಡಿದ್ದ ಅಂಗಡಿಯನ್ನು ಕೂಡ ಬಿಡದ ಮಕ್ಕಳು ಅಂಗಡಿಯನ್ನೂ ಬಿಟ್ಟುಕೊಡುವಂತೆ ಪೀಡಿಸುತ್ತಿದ್ದರು. ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್‌ ಕೂಡ ನಡೆಯುತ್ತಿತ್ತು ಎಂದು ಸಂದೇಶ್ ಸಹೋದರ ತಿಳಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *